ಪೇರಡ್ಕ ಉರೂಸ್‌ಗೆ ಚಾಲನೆ, ಧಾರ್ಮಿಕ ಉಪನ್ಯಾಸ ಮತ್ತು ಉದ್ಘಾಟನಾ ಕಾರ್ಯಕ್ರಮ-ಅಲ್ಲಾಹುವಿನ ಇಷ್ಟದಾಸರನ್ನು ಸ್ಮರಿಸುವುದು ಪುಣ್ಯ ಕರ್ಮ – ಶೈಖುನಾ ಅಬ್ದುಲ್ ಖಾದರ್ ಅಲ್ ಖಾಸಿಮಿ…

ಸುಳ್ಯ: ಪೇರಡ್ಕ ವಲಿಯುಲ್ಲಾಹಿ ದರ್ಗಾ ಶರೀಫ್ ಉರೂಸ್ ಸಮಾರಂಭದ ಪ್ರಥಮದಿನದ ಕಾರ್ಯಕ್ರಮವು ತೆಕ್ಕಿಲ್ ಮಹಮ್ಮದ್ ಹಾಜಿ ವೇದಿಕೆಯಲ್ಲಿ ಫೆಬ್ರವರಿ 18 ರಂದು ನಡೆಯಿತು.
ಸಮಾರಂಭದ ಉದ್ಘಾಟನೆಯನ್ನು ಸಮಸ್ತ ಕೇರಳ ಜಂಞಯ್ಯತ್ತುಲ್ ಉಲಮಾ ಕೇಂದ್ರ ಮುಶಾವರ ಇದರ ಸದಸ್ಯರಾದ ಬಹು| ಶೈಖುನಾ ಅಬ್ದುಲ್ ಖಾದರ್ ಅಲ್ ಖಾಸಿಮಿ ಬಂಬ್ರಾಣ ಉಸ್ತಾದ್ ನೆರೆವೇರಿಸಿ ಮಾತನಾಡಿ ಈ ಪ್ರಶಾಂತ ಸುಂದರ ಸ್ಥಳ ನಮ್ಮ ಮನಸ್ಸಿಗೆ ಶಾಂತಿ ಹಾಗೂ ಸೌಹಾರ್ಧತೆಯ ಸಂದೇಶ ಸಾರುವುದರ ಜೊತೆಯಲ್ಲಿ ಮನಸ್ಸಿಗೆ ಧಾರ್ಮಿಕ ವಿಚಾರಗಳ ಕಲ್ಪನೆ ನೀಡುತ್ತದೆ ಈ ಪವಿತ್ರ ಮಣ್ಣು ಈ ಊರಿನ ಸೌಹಾರ್ಧತೆಯ ಪ್ರತೀಕ ಎಂದು ಅವರು ದುವಾ ನೆರವೇರಿಸಿ ಉದ್ಘಾಟಿಸಿದರು.
ಧಾರ್ಮಿಕ ಉಪನ್ಯಾಸ ನೀಡಿದ ಖ್ಯಾತ ವಾಗ್ಮಿ ಉಮ್ಮರ್ ಹುದವಿ ಪುಳಪಾಡಂ ಸಮುದಾಯ ಎದುರಿಸುತ್ತಿರುವ ಸಮಸ್ಯೆ ಯುವ ಸಮೂಹದ ಚಿಂತನೆಗಳು ಹಾಗೂ ಯುವ ಪೀಳಿಗೆ ದುಶ್ಛಟಗಳ ಕಡೆ ಮುಖ ಮಾಡಿ ಸಮಾಜ ಕಂಟಕ ವಾಗುತ್ತಿರುವುದರ ಬಗ್ಗೆ ವಿವರಿಸಿದರು. ಕಾರ್ಯಕ್ರಮ ಅಧ್ಯಕ್ಷತೆಯನ್ನು ಪೇರಡ್ಕ ಜುಮಾ ಮಸೀದಿಯ ಗೌರವಾಧ್ಯಕ್ಷರಾದ ಟಿ.ಎಂ.ಶಹೀದ್ ತೆಕ್ಕಿಲ್ ವಹಿಸಿದ್ದರು.. ಖತೀಬರಾದ ಬಹು| ರಿಯಾಝ್ ಫೈಝಿ ಎಮ್ಮೆಮಾಡು ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು.
ಜಮಾಅತ್ ಅಧ್ಯಕ್ಷ ಆಲಿಹಾಜಿ, ಸಂಪಾಜೆ ಗ್ರಾ.ಪಂ. ಅಧ್ಯಕ್ಷ ಜಿ.ಕೆ.ಹಮೀದ್ ಗೂನಡ್ಕ, ಕಲ್ಲುಗುಂಡಿ ಜುಮಾಮಸೀದಿಯ ಖತೀಬರಾದ ನಹೀಮ್ ಫೈಝಿ, ಸುಳ್ಯ ತಾಲೂಕು ಮದರಸ ಮ್ಯಾನೇಜ್ ಮೆಂಟ್ ಅಧ್ಯಕ್ಷ ತಾಜ್ ಮಹ್ಮದ್, ಕಲ್ಲುಗುಂಡಿ ಜುಮಾಮಸೀದಿಯ ಮಾಜಿ ಅಧ್ಯಕ್ಷ ಎ.ಕೆ.ಇಬ್ರಾಹಿಂ ಮಸೀದಿಯ ಮಾಜಿ ಉಪಾಧ್ಯಕ್ಷ ಪಾಂಡಿ ಅಬ್ಬಾಸ್, ಅರಂತೋಡು ಜಮಾಅತ್ ಅಧ್ಯಕ್ಷ ಅಶ್ರಫ್ ಗುಂಡಿ, ಸಜ್ಜನ ಪ್ರತಿಷ್ಠಾನದ ಅಧ್ಯಕ್ಷ ಡಾ| ಉಮ್ಮರ್ ಬೀಜದಕಟ್ಟೆ ,ಪಟೇಲ್ ಚಾರಿಟೇಬಲ್ ಅಧ್ಯಕ್ಷ ಬದುರುದ್ಧೀನ್ ಪಟೇಲ್, ಪೇರಡ್ಕ ಮಸೀದಿಯ ಪ್ರ.ಕಾರ್ಯದರ್ಶಿ ಅಬ್ದುಲ್ ರಜಾಕ್ , ಪೇರಡ್ಕ ಸದರ್ ನೂರುದ್ದೀನ್ ಅನ್ಸಾರಿ, ಕಲ್ಲುಗುಂಡಿ ಜಮಾಅತ್ ಕಾರ್ಯದರ್ಶಿ ರಝಾಕ್ ಸೂಪರ್, ಕೋಶಾಧಿಕಾರಿ ಪಿ.ಕೆ.ಉಮ್ಮರ್ ಮೊದಲಾದವರು ಉಪಸ್ಥಿತರಿದ್ದರು.

Sponsors

Related Articles

Back to top button