ಆದಿತ್ಯವಾರ – ದ.ಕ 163 ,ಉಡುಪಿ 182 ಹಾಗೂ ರಾಜ್ಯದಲ್ಲಿ 5532 ಕೊರೊನ ಪಾಸಿಟಿವ್ ಪತ್ತೆ…

ಮಂಗಳೂರು: ಇಂದು(ಆದಿತ್ಯವಾರ) ದ.ಕ ಜಿಲ್ಲೆಯಲ್ಲಿ 163 ,ಉಡುಪಿ ಜಿಲ್ಲೆಯಲ್ಲಿ 182 ಹಾಗೂ ರಾಜ್ಯದಲ್ಲಿ 5532 ಕೊರೊನ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದೆ.
ದ.ಕ ಜಿಲ್ಲೆಯಲ್ಲಿ ಇಂದು 163 ಹೊಸ ಕೋವಿಡ್ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ.ಈ ಮೂಲಕ ಸೋಂಕಿತರ ಸಂಖ್ಯೆ 6010 ಕ್ಕೆ ಏರಿಕೆಯಾಗಿದೆ. 45 ಮಂದಿ ಗುಣಮುಖರಾಗಿದ್ದಾರೆ. ಜಿಲ್ಲೆಯಲ್ಲಿ ಇಂದು 10 ಮಂದಿ ಕೊರೊನದಿಂದಾಗಿ ಮೃತಪಟ್ಟಿದ್ದಾರೆ.ಮಂಗಳೂರು ತಾಲೂಕಿನಲ್ಲಿ 107 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. ಬಂಟ್ವಾಳದಲ್ಲಿ 13, ಬೆಳ್ತಂಗಡಿಯಲ್ಲಿ 19, ಪುತ್ತೂರು ಹನ್ನೊಂದು, ಸುಳ್ಯ ತಾಲೂಕಿನಲ್ಲಿ ಒಬ್ಬರಲ್ಲಿ ಸೋಂಕು ಪತ್ತೆಯಾಗಿದೆ. ಹೊರ ಜಿಲ್ಲೆಯ 9 ಹಾಗೂ ಹೊರ ರಾಜ್ಯದ ಮೂವರಲ್ಲಿ ಸೋಂಕು ಪತ್ತೆಯಾಗಿದೆ.
ಉಡುಪಿ ಜಿಲ್ಲೆಯಲ್ಲಿ ಇಂದು 182 ಹೊಸ ಕೋವಿಡ್ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಈ ಮೂಲಕ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 4674 ಕ್ಕೆ ಏರಿಕೆಯಾಗಿದೆ.ಇಂದು ಲಭಿಸಿದ ವರದಿಗಳಲ್ಲಿ 625 ವರದಿ ನೆಗೆಟಿವ್‌ ಆಗಿದೆ.
ಇಂದು ರಾಜ್ಯದಲ್ಲಿ 5532 ಹೊಸ ಪ್ರಕರಣಗಳು ವರದಿಯಾಗಿದ್ದು, ಇದರಿಂದ ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 1,34,819ಕ್ಕೆ ಏರಿಕೆಯಾಗಿದೆ. ಇಂದು ರಾಜ್ಯದಲ್ಲಿ 84 ಮಂದಿ ಸೋಂಕಿನಿಂದ ಮೃತಪಟ್ಟಿದ್ದಾರೆ.

Sponsors

Related Articles

Leave a Reply

Your email address will not be published. Required fields are marked *

Back to top button