ಯೆನೆಪೊಯ ತಾಂತ್ರಿಕ ಮಹಾವಿದ್ಯಾಲಯ – ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗ ವತಿಯಿಂದ ಕಾರ್ಯಾಗಾರ…

ಮೂಡುಬಿದಿರೆ: ಯೆನೆಪೊಯ ತಾಂತ್ರಿಕ ಮಹಾವಿದ್ಯಾಲಯದ ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗ, ಇನ್ವಿಹಬ್ ಟೆಕ್ನೋಸೊಲ್ಯೂಷನ್ಸ್ ಪ್ರೈ. ಲಿಮಿಟೆಡ್ ಬೆಂಗಳೂರು ಮತ್ತು ISTE ವಿದ್ಯಾರ್ಥಿಗಳ ಅಧ್ಯಾಯ ಇವುಗಳ ಸಂಯುಕ್ತ ಆಶ್ರಯದಲ್ಲಿ ” ಅಡಿಟಿವ್ ಮ್ಯಾನುಫ್ಯಾಕ್ಚರಿಂಗ್ ಅಂಡ್ ಇಟ್ಸ್ ಅಪ್ಪ್ಲಿಕೆಶನ್ಸ್ ” ಎಂಬ ವಿಷಯದ ಕುರಿತು ಜ. 6 ರಿಂದ ಮೂರು ದಿನಗಳ ಕಾರ್ಯಾಗಾರವನ್ನು ಆಯೋಜಿಸಲಾಗಿದೆ.
ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಶ್ರೀಮತಿ ವಾಣಿ ಆರ್, ಸಹಾಯಕ ಪ್ರಾಧ್ಯಾಪಕ ಜಗ್ನೇಶ್ ಜಿ ಸಿ, ಸಹಾಯಕ ಪ್ರಾಧ್ಯಾಪಕ ಜಿ ಸುಜಯ್ ಕುಮಾರ್ ಮತ್ತು ಇನ್ವಿಹಬ್ ಟೆಕ್ನೋಸೊಲ್ಯೂಷನ್ಸ್ ಪ್ರೈ. ಲಿಮಿಟೆಡ್ ಬೆಂಗಳೂರು ಕಂಪೆನಿಯ ನಿರ್ದೇಶಕ ಶಶಾಂಕ್ ಎಂ ಗೌಡ ಸಂಪನ್ಮೂಲ ವ್ಯಕ್ತಿಗಳಾಗಿದ್ದರು.
ಕಾರ್ಯಾಗಾರವನ್ನು ವಿಭಾಗದ ಮುಖ್ಯಸ್ಥ ಡಾ.ಸತೀಶ ಎನ್ ಉದ್ಘಾಟಿಸಿದರು. ವಿಭಾಗದ ಎಲ್ಲಾ ಅಧ್ಯಾಪಕರು ಹಾಗೂ 7ನೇ ಸೆಮಿಸ್ಟರ್ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. 7ನೇ ಸೆಮಿಸ್ಟರ್‌ನ ಅಯಾನ್‌ ಅಹ್ಮದ್‌ ಶೇಕ್‌ ಕಾರ್ಯಕ್ರಮ ನಿರೂಪಿಸಿದರು.

 

Sponsors

Related Articles

Back to top button