ಸುಳ್ಯ – ರಂಗಮನೆಯಲ್ಲಿ ಯಕ್ಷಗಾನ ಹಿಮ್ಮೇಳ , ನಾಟ್ಯ ತರಬೇತಿ ಆರಂಭ…

ಸುಳ್ಯ: ಸುಳ್ಯದ ಹೆಮ್ಮೆಯ ಸಾಂಸ್ಕೃತಿಕ ಕಲಾ ಕೇಂದ್ರ ರಂಗಮನೆಯಲ್ಲಿ ಈಗಾಗಲೇ ಹಿಮ್ಮೇಳ ತರಗತಿ, ನಾಟ್ಯ ತರಬೇತಿ ಆರಂಭವಾಗಿದೆ. ಚೆಂಡೆ ಮದ್ದಳೆ ತರಗತಿಯನ್ನು ಖ್ಯಾತ ಹಿಮ್ಮೇಳ ಕಲಾವಿದರಾದ ಶ್ರೀ ಕುಮಾರ ಸುಬ್ರಹ್ಮಣ್ಯ ವಳಕ್ಕುಂಜ ಹಾಗೂ ಖ್ಯಾತ ಮಹಿಳಾ ಯಕ್ಷಗಾನ ಕಲಾವಿದೆ-ಗುರು ಶ್ರೀಮತಿ ಸರೋಜಿನಿ ಬನಾರಿ ಯವರು ನಾಟ್ಯ ತರಬೇತಿ ನೀಡುತ್ತಿದ್ದಾರೆ.
ಪ್ರತಿ ಭಾನುವಾರ ಪೂರ್ವಾಹ್ನ 9.30 ರಿಂದ  ಅಪರಾಹ್ನ 12.00 ರ ವರೆಗೆ ನಡೆಯುವ ಯಕ್ಷ ತರಗತಿಯಲ್ಲಿ ಮಕ್ಕಳು,ಯುವಕ ಯುವತಿಯರು,ಮಹಿಳೆಯರು ಸೇರಿದಂತೆ ಆಸಕ್ತರೆಲ್ಲರಿಗೂ ಕಲಿಯಲು ಅವಕಾಶವಿರುತ್ತದೆ. ಆಸಕ್ತರು  9441189710 (ಸರೋಜಿನಿ ಬನಾರಿ), 9845505543 ( ಕುಮಾರ ಸುಬ್ರಹ್ಮಣ್ಯ) ಇವರನ್ನು ಸಂಪರ್ಕಿಸಬಹುದೆಂದು ರಂಗಮನೆ ಅಧ್ಯಕ್ಷರಾದ ಡಾ||ಜೀವನ್ ರಾಂ ಸುಳ್ಯ ತಿಳಿಸಿದ್ದಾರೆ.

Sponsors

Related Articles

Back to top button