ಸುಳ್ಯದ ಕೆ. ಟಿ.ವಿಶ್ವನಾಥ ಅವರಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ – ಟಿ ಎಂ ಶಾಹಿದ್ ತೆಕ್ಕಿಲ್ ಅಭಿನಂದನೆ…

ಸುಳ್ಯ:ದ ಕ ಜಿಲ್ಲಾಡಳಿತ ನೀಡುವ 2023ನೇ ಸಾಲಿನ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಸುಳ್ಯದ ಕೆ. ಟಿ.ವಿಶ್ವನಾಥ ಅವರಿಗೆ ಒಲಿದು ಬಂದಿದೆ.
ಸಮಾಜಸೇವಾ ಕ್ಷೇತ್ರದಿಂದ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತರಾದ ಕೆ ಟಿ ವಿಶ್ವನಾಥ್ ಅವರನ್ನು ತೆಕ್ಕಿಲ್ ಪ್ರತಿಷ್ಠಾನದ ಸ್ಥಾಪಕಾಧ್ಯಕ್ಷ  ಟಿ ಎಂ ಶಾಹಿದ್ ತೆಕ್ಕಿಲ್ ಹಾಗು ಮಂಡೆಕೋಲು ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷರಾದ ಸದಾನಂದ ಮಾವಜಿಯವರು ಅಭಿನಂದಿಸಿದ್ದಾರೆ.
ದುಗ್ಗಲಡ್ಕ ಕೊಯಿಕುಳಿ ಮನೆಯ ತಿಮ್ಮಪ್ಪ ಗೌಡ ಅವರ ಪುತ್ರರಾದ ಡಾ.ಕೆ.ಟಿ.ವಿಶ್ವನಾಥ್‌ ಅವರು ಸುಳ್ಯದ ಶ್ರೀ ವೆಂಕಟ್ರಮಣ ಕ್ರೆಡಿಟ್‌ ಕೋ ಆಪರೇಟಿವ್‌ ಸೊಸೈಟಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿದ್ದಾರೆ. ಹಲವು ಸಾಮಾಜಿಕ ಸಂಘ ಸಂಸ್ಥೆಗಳಲ್ಲಿ ತೊಡಗಿಸಿಕೊಂಡಿರುವ ಕೆ.ಟಿ.ವಿಶ್ವನಾಥ ಅವರು ದುಗ್ಗಲಡ್ಕದ ಮಿತ್ರ ಯುವಕ ಮಂಡಲದ ಅಧ್ಯಕ್ಷರಾಗಿ, ಕುರಲ್‌ ತುಳುಕೂಟದ ಸಂಚಾಲಕರಾಗಿ, ಯುವಜನ ಸಂಯುಕ್ತ ಮಂಡಳಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದು, ಎನ್ನೆಂಸಿ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ, ಅಮೆಚೂರು ಕಬಡ್ಡಿ ಅಸೋಸಿಯೇಷನ್‌ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಕೆ ಟಿ ವಿಶ್ವನಾಥ್ ಸೇರಿದಂತೆ ಇತರ ಎಲ್ಲಾ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತರಿಗೆ ತೆಕ್ಕಿಲ್ ಪ್ರತಿಷ್ಠಾನದ ಸ್ಥಾಪಕಾಧ್ಯಕ್ಷ ಟಿ ಎಂ ಶಾಹಿದ್ ತೆಕ್ಕಿಲ್ ಹಾಗು ಮಂಡೆಕೋಲು ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷರಾದ ಸದಾನಂದ ಮಾವಜಿಯವರು ಅಭಿನಂದನೇ ಸಲ್ಲಿಸಿದ್ದಾರೆ.

whatsapp image 2023 09 16 at 4.06.58 pm
ಟಿ ಎಂ ಶಾಹಿದ್ ತೆಕ್ಕಿಲ್ 
Sponsors

Related Articles

Back to top button