ಅಮೃತ ಘಳಿಗೆ…

ಅಮೃತ ಘಳಿಗೆ…
ಭಲೆ ಭಲೆ ಚಂದ್ರನ ಚೆಲುವು ಹೊತ್ತವಳು ನೀನು
ತಾರೆ ಕೂಡಾ ಮುದುಡಿ ಮಲಗುವ ಚುಕ್ಕೆ ನೀನು
ನಿನ್ನ ಮೊಗದಲಿ ಚೆಲುವ ಕಮಲವರಳಿದೆ
ನಿನ್ನ ನಗುವಲಿರುವ ದಂತದಿಂದಾನೆ ಜಗ ಬೆಳಗು
ನೀನು ಅಡಿಯನಿಟ್ಟಲ್ಲೆಲ್ಲಾನೆ ಚಂದನವಿಡ ಬೇಕು

ಇಂಪು ನಾದವು ಕಿವಿಯಲ್ಲಿ ತುಂಬಿತ್ತು ನಿನ್ನ ಬಳಿಯಲ್ಲಿ ನಾ ನಿಂದರೆ
ನಿನ್ನ ಪದವು ಕೇಳಿತು ಸುಖದ ಗಮಲು ಹರಿಸಿತು
ಹೂವಿನ‌ ಬನಗಳ‌ ಸುತ್ತಲು ಹರಡಿತ್ತು ಹಾಡುತ್ತ ನೀ ನಿಂದರೆ
ನಿನ್ನದೇ ರೂಪ ಕಂಡಿತು ಮನಸು ಕುಣಿಯಿತು
ಅಲ್ಲೊಂದು ಅದ್ಭುತ ಪ್ರತಿಮೆಯಿದೆ ಅದರಲ್ಲಿ ಸಾಹಿತ್ಯ ರಾಶಿಯಿದೆ
ಜೊತೆಗೊಂದು ವೀಣೆಯ ತಂತಿಯಿದೆ ಮೀಟಲು ಹತ್ತಾರು ಬೆರಳೂ ಇದೆ
ಎಲ್ಲ ಹಾಡಲ್ಲು ಜಿನುಗೊ ಸ್ವರ ನಿಂದೇನಾ
ಎಂದಿಗು ಆರದ ಆನಂದ ಸಾಗರ ನಿನ್ನಿಂದ ನಿನ್ನಿಂದಲೇ

ಅತ್ತ ಮನ್ಮಥನೊ ಇತ್ತ ದೇವೇಂದ್ರ ನಿನ್ನತ್ತ ಸುಳಿದಿದ್ದರೂ
ಸೊಗವಳಿಯಲೂ ಸಾಧ್ಯವೇ? ನಿನ್ನ ಸೊಬಗೆಲ್ಲ ನಿನ್ನದೇ
ಅತ್ತ ರತಿ ಬಂದು ಇತ್ತ ಶಚಿ ಬಂದು ನಿನ್ನ ಬದಿ ನಿಂತರೇ
ನಾಚಿಕೆ ಅವರಿಗಲ್ಲವೇ? ನೀನೇ ಮೇಲಲ್ಲವೇ?
ಅಲ್ಲೊಂದು ಹೊಸತಾದ ಲೋಕವಿದೆ ಅಲ್ಲಿಂದ ಹಯವೇರಿ ಬಂದೆ
ಇಲ್ಲೊಂದು ತಂಪಿನ ಮನೆಯೂ ಇದೆ ಆ ಮನೆಯಲ್ಲಿ ಸೋತಂತ ಮನಸೂ ಇದೆ
ಅದರಲ್ಲಿ ಅಡಗಿದ ಮುದ್ದಿನ ಅರಗಿಣಿ ನೀನೇನಾ?
ಹತ್ತಿರ ಇದ್ದರು ನೆತ್ತರ ನೆತ್ತರ ಕೆಂಪಿಂದ ನಿನ್ನಿಂದಲೇ

ರಚನೆ: ಡಾ ಸುರೇಶ ನೆಗಳಗುಳಿ
ಸುಹಾಸ
ಬಜಾಲ್ ಪಕ್ಕಲಡ್ಕ
ಮಂಗಳೂರು 9
ಫೋ: 9448216674

Sponsors

Related Articles

Back to top button