ಬಾಳ್ತಿಲ ಮಹಾ ಶಕ್ತಿ ಕೇಂದ್ರದ ಬಿಜೆಪಿ ಚುನಾವಣಾ ಪ್ರಚಾರ ಸಭೆ…

ಬಂಟ್ವಾಳ: ಬಾಳ್ತಿಲ ಮಹಾ ಶಕ್ತಿ ಕೇಂದ್ರದ ಚುನಾವಣಾ ಪ್ರಚಾರ ಸಭೆ ಕಶೆಕೋಡಿ ಕಲಾಶ್ರಯದಲ್ಲಿ ನಡೆಯಿತು.
ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ಮಾತನಾಡಿ, ಪ್ರಧಾನಿ ನರೇಂದ್ರ ಮೋದಿಯವರ ನೇತ್ರತ್ವದ ಕೇಂದ್ರ ಸರಕಾರ ಆಡಳಿತ ಅವಧಿಯಲ್ಲಿ ನಡೆದ ರಾಮಂಂದಿರ ನಿರ್ಮಾಣ, ಆರ್ಟಿಕಲ್ಸ್ 370 ಹೀಗೆ ಅನೇಕ ಯೋಜನೆಗಳ ಜೊತೆ 2047ರ ಇಸವಿಗೆ ಜಗದ್ಗುರು ಭಾರತ ನಿರ್ಮಾಣಕ್ಕೆ ಕೇಂದ್ರದಲ್ಲಿ ಬಹುಮತದಲ್ಲಿ ಗೆಲುವು ಸಾಧಿಸಬೇಕು ಎಂದು ಅವರು ತಿಳಿಸಿದರು.
ಬ್ರಿಜೇಶ್ ಚೌಟ ಅವರ ಪರಿಚಯ ಮಾಡುವ ಅಗತ್ಯವಿಲ್ಲ, ಅವರು ಪಕ್ಷದ ವಿವಿಧ ಜವಬ್ದಾರಿಗಳನ್ನು ಅತ್ಯಂತ ನಿಷ್ಠೆಯಿಂದ ಯಶಸ್ವಿಯಾಗಿ ನಡೆಸಿಕೊಂಡು ಬಂದವರು ಎಂದು ತಿಳಿಸಿದರು.
ಮಂಗಳೂರು ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಬ್ರಿಜೇಶ್ ಚೌಟ ಮಾತನಾಡಿ, ಹಿರಿಯರು ರಕ್ತ ಮತ್ತು ಬೆವರನ್ನು ಸುರಿಸಿ, ಹಿಂದುತ್ವದ ಆಧಾರದಲ್ಲಿ ಸಂಘಟನೆಯನ್ನು ಕಟ್ಟಿ ಬೆಳೆಸಿದ್ದಾರೆ. ಅಂತಹ ಸಂಘಟನೆಗೆ ಯಾವುದೇ ಚ್ಯುತಿ ಬರದ ರೀತಿಯಲ್ಲಿ ಬೆಳೆಸುವುದರ ಜೊತೆ ಜಿಲ್ಲೆಯ ಅಭಿವೃದ್ಧಿಗೆ ಶಕ್ತಿ ಮೀರಿ ಪ್ರಯತ್ನ ಮಾಡುತ್ತೇನೆ.
ಪ್ರಧಾನಿ ನರೇಂದ್ರ ಮೋದಿಯವರ ನಾಯಕತ್ವ ನಮಗೆ ಸಿಕ್ಕಿದ ಸೌಭಾಗ್ಯವಾಗಿದ್ದು, ಅವರ ಸಾಧನೆಯ ಆಧಾರದ ಮೇಲೆ ಚುನಾವಣೆ ನಡೆಯಲಿದೆ.
ಈ ಬಾರಿಯ ಚುನಾವಣೆ ದೇಶವನ್ನು ಪ್ರೀತಿಸುವ ಮತ್ತು ದ್ವೇಷ ಮಾಡುವ ಜನರ ಮಧ್ಯೆ ನಡೆಯುವ ಚುನಾವಣೆ ಇದಾಗಿದ್ದು ಬಹಳ ಪ್ರಾಮುಖ್ಯತೆ ಪಡೆದಿದೆ, ಹಾಗಾಗಿ ನಾವು ಎಚ್ಚರಿಕೆ ಹೆಜ್ಜೆಗಳನ್ನು ಇಡಬೇಕು ಎಂದು ಅವರು ಕಾರ್ಯಕರ್ತರಿಗೆ ಹುರಿದುಂಬಿಸುವ ಕೆಲಸ ಮಾಡಿದ್ದಾರೆ.
ಅತ್ಯಂತ ಕಷ್ಟ ದ ಸ್ಥಿತಿಯಲ್ಲಿ ಭಾರತದ ಆಡಳಿತದ ಚುಕ್ಕಾಣಿ ಹಿಡಿದು,ಮುಂದಿನ ಆಡಳಿತದ ಅವಧಿಯಲ್ಲಿ ತುಷ್ಟೀಕರಣ ಮಾಡದೆ ಪ್ರತಿಯೊಬ್ಬ ವ್ಯಕ್ತಿಗೂ ಸರಕಾರದ ಯೋಜನೆ ಸಿಗುವಂತೆ ಮಾಡಿ, ಆರ್ಥಿಕವಾಗಿ ಸದೃಢಗೊಳಿಸಿ,ವಿಕಸಿತ ಭಾರತದ ಸಂಕಲ್ಪ ಮಾಡಿದ ಕೀರ್ತಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಸಲ್ಲಬೇಕು ಎಂದು ತಿಳಿಸಿದರು.
ಮಾಜಿ ಶಾಸಕ ರುಕ್ಮಯ ಪೂಜಾರಿ ಮಾತನಾಡಿ, ಬಿಜೆಪಿ ಕಾರ್ಯಕರ್ತರ ನಿರೀಕ್ಷೆ, ಆಸೆಗೆ ಪೂರಕವಾದ ಉತ್ತಮ ಅಭ್ಯರ್ಥಿ ಸಿಕ್ಕಿದ್ದು, ಪ್ರಚಂಡ ಬಹುಮತದ ಮೂಲಕ ಲೋಕಸಭೆಗೆ ಪ್ರವೇಶ ಮಾಡಲಿ ಎಂದು ಶುಭ ಹಾರೈಸಿದರು.
ಬಿಜೆಪಿ ಮಂಡಲದ ಅಧ್ಯಕ್ಷ ಚೆನ್ನಪ್ಪ ಕೋಟ್ಯಾನ್, ವಿಧಾನಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್, ಮಾಜಿ ಶಾಸಕರಾದ ರುಕ್ಮಯ ಪೂಜಾರಿ, ಪದ್ಮನಾಭ ಕೊಟ್ಟಾರಿ ಬಿಜೆಪಿ ಪ್ರಮುಖರಾದ ಜಗದೀಶ್ ಶೇಣವ, ಪೂಜಾ ಪೈ, ದೇವಪ್ಪ ಪೂಜಾರಿ, ದಿನೇಶ್ ಅಮ್ಟೂರು, ಸಂದೇಶ್ ಶೆಟ್ಟಿ, ಹರಿಕೃಷ್ಣ ಬಂಟ್ವಾಳ, ರಾಮ್ ದಾಸ ಬಂಟ್ವಾಳ, ವಿಕಾಸ್ ಪುತ್ತೂರು ಮತ್ತಿತರರ ಪ್ರಮುಖರು ಉಪಸ್ಥಿತರಿದ್ದರು.
ಮೋಹನ್ ಪಿ.ಎಸ್.ಸ್ವಾಗತಿಸಿ, ವಿಠಲ ನಾಯ್ಕ್ ಕಾರ್ಯಕ್ರಮ‌ ನಿರೂಪಿಸಿದರು.

whatsapp image 2024 03 26 at 8.41.45 pm

whatsapp image 2024 03 26 at 8.41.46 pm

Sponsors

Related Articles

Back to top button