ಸಂಸ್ಕಾರ ಭಾರತಿ ಬಂಟ್ವಾಳ – ಟೋಳಿ ರಚನಾ ಸಭೆ…

ಬಂಟ್ವಾಳ: ಬಿ.ಸಿ.ರೋಡ್ ನ ಸ್ಪರ್ಶಾ ಕಲಾ ಮಂದಿರದಲ್ಲಿ ಬಂಟ್ವಾಳ ತಾಲೂಕಿನ ‘ಸಂಸ್ಕಾರ ಭಾರತಿ’ ಯ ಟೋಳಿ ರಚನಾ ಸಭೆಯು ಡಿ. 25 ರಂದು ನಡೆಯಿತು.
ಸಭಾಧ್ಯಕ್ಷತೆಯನ್ನು ಜಿಲ್ಲಾ ಸಂಯೋಜಕ ರಾದ ಶ್ರೀ ತಾರಾನಾಥ ಕೊಟ್ಟಾರಿಯವರು ವಹಿಸಿದ್ದು ಜಿಲ್ಲೆಯ ಕೋಶಾಧಿಕಾರಿಗಳಾದ ಶ್ರೀ ಸಿದ್ಧಕಟ್ಟೆ ಸಂಕಪ್ಪ ಶೆಟ್ಟಿ , ತಾಲೂಕು ಸಂಯೋಜಕ ರಾದ ಶ್ರೀ ಮಂಜು ವಿಟ್ಲ,ಸುಭಾಶ್ಚಂದ್ರ ಜೈನ್,ಶ್ರೀಮತಿ ಸಿದ್ದಕಟ್ಟೆ ಮಲ್ಲಿಕಾ ಶೆಟ್ಟಿ ,ಶಶಿಕುಮಾರ್ ಇಂದ್ರರು ಉಪಸ್ಥಿತರಿದ್ದರು.
ಸಮೂಹದಲ್ಲಿ ‘ಓಂ ಕಾರ ಹಾಗೂ ಧ್ಯೇಯ ಗೀತೆ’ ಯನ್ನು ಹೇಳುವ ಮೂಲಕ ಸಭೆಗೆ ಚಾಲನೆ ನೀಡಲಾಯಿತು. ಬಳಿಕ ಭಾಗವಹಿಸಿದ ಎಲ್ಲರು ತಮ್ಮ ತಮ್ಮ ಪರಿಚಯಗಳನ್ನು ಹಾಗೂ ಸಾಧನೆಗಳನ್ನು ಪರಸ್ಪರ ಹಂಚಿಕೊಂಡರು. ಪ್ರಾಸ್ತಾವಿಕ ಮಾತುಗಳನ್ನಾಡಿದ ಶ್ರೀ ತಾರಾನಾಥ ಕೊಟ್ಟಾರಿಯವರು ಸಂಸ್ಕಾರ ಭಾರತಿಯ ಆರಂಭ ಹಾಗೂ ನಡೆದುಬಂದ ಬಗೆಯನ್ನು ವಿವರಿಸಿದರು.ಸಂಸ್ಕೃತಿಯ ಮೂಲ ತತ್ವವೇ ಸಂಸ್ಕಾರ.ಇದನ್ನು ಪ್ರಭಾವಿಯಾಗಿ ಅಭಿವ್ಯಕ್ತ ಗೊಳಿಸುವ ಮಾಧ್ಯಮವೇ ಕಲೆ.ವೈವಿಧ್ಯಮಯ ಕಲೆಗಳಿಂದ ಆಯಾ ಕ್ಷೇತ್ರ ಸಮಾಜ ಮತ್ತು ರಾಷ್ಟ್ರದ ಸಂಸ್ಕೃತಿಯು ಸ್ಫುಟವಾಗಿ ಪ್ರಕಾಶಿಸುತ್ತದೆ.ಕಣ್ಣಿಗೆ ಕಾಣಿಸದಿದ್ದರೂ ಅನುಭವ ಗಮ್ಯ.
ಭಾರತೀಯ ಜಾನಪದ ಕಲೆ ಮತ್ತು ಸಾಹಿತ್ಯದ ಸಂಶೋಧನೆ, ಸಂರಕ್ಷಣೆ ಹಾಗೂ ಸಂವರ್ಧನೆಗಾಗಿ ಕಲಾಕಾರರನ್ನು ಒಂದುಗೂಡಿಸಿ ,ಅವರನ್ನು ನಮ್ಮ ಸಾಂಸ್ಕೃತಿಕ ಜೀವನದ ಮುಖ್ಯಧಾರೆಯಲ್ಲಿ ತರುವ ಕೆಲಸವನ್ನು ಸಂಸ್ಕಾರ ಭಾರತಿ ಮಾಡುತ್ತಿದೆ ಎಂದರು.
‘ಸಂಸ್ಕಾರ ಭಾರತಿಗೆ ‘ ಒಂದು ರಾಷ್ಟ್ರೀಯ ಜವಾಬ್ದಾರಿಯೂ ಇದೆ.ಇದೊಂದು ಕೇವಲ ಕಲಾ ಸಂಸ್ಥೆ ಯಲ್ಲ.ನಮ್ಮ ಸ್ವಾತಂತ್ರ್ಯ ರಕ್ಷಣೆಗೂ ಅದು ಕಟಿಬದ್ಧವಾಗಿದೆ.ಭಾರತದ ಮೇಲೆರಗುತ್ತಿರುವ ಸಾಂಸ್ಕೃತಿಕ ಆಕ್ರಮಣದಿಂದ ನಮ್ಮ ರಾಷ್ಟ್ರದ ಆತ್ಮ ಸಂಸ್ಕೃತಿಗಳನ್ನು ಉಳಿಸುವ ಜವಾಬ್ದಾರಿಯೂ ಇದೆ. ಸಂಸ್ಕಾರ ಭಾರತಿಯಲ್ಲಿ ಯುಗಾದಿ,ಶ್ರೀ ಕೃಷ್ಣಾಷ್ಟಮಿ,ದೀಪಾವಳಿ,ಗುರುಪೂರ್ಣಿಮಾ,ಭಾರತ ಮಾತಾ ಪೂಜನಾ,ಭರತ ಮುನಿ ಜಯಂತಿ ಈ 6 ಉತ್ಸವಗಳನ್ನು ಆಚರಿಸಲಾಗುತ್ತದೆ ಎಂದು ವಿವರಿಸಿದರು.
ಬಳಿಕ ‘ಬಂಟ್ವಾಳ ತಾಲೂಕಿನ ಸಂಸ್ಕಾರ ಭಾರತಿ ‘ ಸಂಘಟನೆಯ ಟೋಳಿಯನ್ನು ಪ್ರಕಟಿಸಿದರು

ತಾಲೂಕು ಸಂಯೋಜಕರು : ಶ್ರೀ ಮಂಜು ವಿಟ್ಲ
ಸಹ ಸಂಯೋಜಕರು: ಶ್ರೀಮತಿ ಮಲ್ಲಿಕಾ ಶೆಟ್ಟಿ, ಡಾ/ ವಾರಿಜಾ ನಿರ್ಬೈಲು.

ವಿಭಾ ಪ್ರಮುಖರು ಹಾಗೂ ಸಹ ಪ್ರಮುಖರಾಗಿ
ಯಕ್ಷಗಾನ: ಶ್ರೀ ಉದಯ ಕುಮಾರ್ ಜ್ಯೋತಿಗುಡ್ಡೆ, ದೇವ್ ದಾಸ್ ಅರ್ಕುಳ,

ಸಾಹಿತ್ಯ : ಶ್ರೀಮತಿ ವಿಜಯಾ ಶೆಟ್ಟಿ,ಸಾಲೆತ್ತೂರು, ಶ್ರೀಮತಿ ಉಮಾ ಚಂದ್ರಶೇಖರ, ಶ್ರೀ ಹರೀಶ್ ಶೆಟ್ಟಿ,ಪಡು
ಜಾನಪದ: ಶ್ರೀ ಮೋಹನದಾಸ ಕೊಟ್ಟಾರಿ,ಶ್ರೀ ಶಶಿಧರ ಬಾಚಕೆರೆ,ಶ್ರೀಮತಿ ವಿದ್ಯಾ ಶಿವರಾಜ್ ಸುಜೀರ್
ಭಜನೆ : ಶ್ರೀ ಸತೀಶ್ ಪೂಂಜ, ವಾಮದಪದವು, ಶ್ರೀ ಪ್ರವೀಣ್ ಶೆಟ್ಟಿ,ಸುಜೀರು.
ಸಂಗೀತ : ಶ್ರೀ ಭಾಸ್ಕರ,ಬಿ.ಸಿ.ರೋಡ್
ನಾಟ್ಯ : ಶ್ರೀಮತಿ ರೋಹಿಣಿ
ಬುವಿಯಲಂಕಾರ :ಶ್ರೀಮತಿ ದಿವ್ಯಶ್ರೀ,ಕಲ್ಲಡ್ಕ

ಸಲಹೆಗಾರರು:
ಶ್ರೀ ಸುಭಾಶ್ಚಂದ್ರ ಜೈನ್
ಶ್ರೀ ದೇವಪ್ಪ ಶೇಖ,ಪೀಲ್ಯಡ್ಕ ಮಂಚಿ
ಶ್ರೀ ಬಾಲಚಂದ್ರ ಸೋಮೇಶ್ವರ
ಶ್ರೀಮತಿ ಪ್ರೇಮಾ ಎಸ್.ಪೂಂಜ,ಕುಡ್ತಮುಗೇರು
ಶ್ರೀ ಜಯಾನಂದ ,ಪೆರಾಜೆ

ಟೋಳಿ ಘೋಷಣೆಯ ಬಳಿಕ ಜ್ಯೋತಿ ಬೆಳಗುವ ಮೂಲಕ ವಿದ್ಯುಕ್ತವಾಗಿ ‘ತಾಲೂಕು ಸಂಸ್ಕಾರ ಭಾರತಿ ಘಟಕ’ದ ಉಧ್ಘಾಟನೆಯನ್ನು ನೆರವೇರಿಸಿದ ಕೊಟ್ಟಾರಿಯವರು ಟೋಳಿಗೆ ಶುಭ ಹಾರೈಸಿದರು.
ಬಳಿಕ ಮಾತನಾಡಿದ ತಾಲೂಕು ಸಂಯೋಜಕರಾದ ಶ್ರೀ ಮಂಜು ವಿಟ್ಲರವರು “ನಾವು ಭಾಷಣಗಳಿಗೆ ಆದ್ಯತೆ ನೀಡದೆ ಸಮಾಜಕ್ಕೆ ಹಾಗೂ ವಿದ್ಯಾರ್ಥಿ ಗಳಿಗೆ ಸಂಸ್ಕಾರದ ಶಕ್ತಿ ತುಂಬೋಣ, ಭಾರತ ಮಾತೆಯ ಭಾವಚಿತ್ರ ಹಾಗೂ ನಟರಾಜನ ಪ್ರತಿಮೆ ನಮ್ಮ ಸಭಾಕಾರ್ಯಕ್ರಮದಲ್ಲಿ ಇರುವುದಲ್ಲದೆ ಎಲೆ ಮರೆಯ ಕಾಯಿಗಳಂತೆ ಹೊರಪ್ರಪಂಚಕ್ಕೆ ಕಾಣದ ಕಲಾವಿದರನ್ನು ಗುರುತಿಸುವ,ಬೆಳೆಸುವ ಕಾರ್ಯ ಮಾಡೋಣ”ಎಂದು ಕರೆ ನೀಡಿದರು
ಬಳಿಕ ಸಂದೇಹಗಳನ್ನು ನಿವಾರಿಸಿಕೊಳ್ಳಲು,ಸಲಹೆಗಳನ್ನು ನೀಡಲು ಸಭೆಗೆ ಕಾಲಾವಕಾಶವನ್ನು ನೀಡಿ ಚರ್ಚೆಗೆ ಆಸ್ಪದ ನೀಡಲಾಯಿತು. ಕುಣಿತ ಭಜನೆ,ಮದ್ರೆಂಗಿ ಶಾಸ್ತ್ರ ಇತ್ಯಾದಿಗಳು ಇಂದು ಸಾಂಸ್ಕೃತಿಕವಾಗಿ ಬದಲಾಗಿರುವ ಬಗ್ಗೆ ಸದಸ್ಯರು ಗಮನ ಸೆಳೆದರು
ಶ್ರೀ ಮಂಜು ವಿಟ್ಲರವರು ಸಭಿಕರನ್ನು ಸ್ವಾಗತಿಸಿ ಕಾರ್ಯಕ್ರಮದ ಬಳಿಕ ವಂದಿಸಿದರು.

Sponsors

Related Articles

Back to top button