ಸುರತ್ಕಲ್ ಬಂಟರ ಸಂಘದ ವತಿಯಿಂದ ಆಹಾರದ ಕಿಟ್ ವಿತರಣೆ…

ಸುರತ್ಕಲ್: ಸುರತ್ಕಲ್ ಬ೦ಟರ ಸಂಘ ಮತ್ತು ಬ೦ಟರ ಮಹಿಳಾ ವೇದಿಕೆಯ ವತಿಯಿಂದ ಎಲ್ಲಾ ಸಮುದಾಯದ ಸುಮಾರು 200 ಜನರಿಗೆ ತಲಾ 1000 ರೂಪಾಯಿಯ ದಿನನಿತ್ಯ ಅಗತ್ಯವಾದ ಆಹಾರದ ಕಿಟ್ ಗಳನ್ನೂ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಡಾ. ವೈ ಭರತ್ ಶೆಟ್ಟಿ ಅವರು, ಸರಕಾರ ಹಾಗೂ ಸಮಾಜ ಒಂದಾಗಿ ಸೇರಿಕೊಂಡು ಮಾರಕ ರೋಗ ಕೊರಾನದ ವಿರುದ್ಧ ಹೋರಾಡಬೇಕಾಗಿದೆ. ಸರಕಾರ ಮತ್ತು ಸಂಘ ಸ೦ಸ್ಥೆಗಳು ಒಂದಾಗಿ ಇಂತಹ ಕಠಿಣ ಸಂದರ್ಭದಲ್ಲಿ ಕಷ್ಟದಲ್ಲಿರುವವರಿಗೆ ಸಹಾಯ ಮಾಡುವ ಕೆಲಸ ಮಾಡುತ್ತಿದೆ. ವಿಶ್ವಕ್ಕೆ ಮಾರಕವಾದ ಕೊರೊನಾ ರೋಗವನ್ನು ತೊಡೆದುಹಾಕಲು ಸರಕಾರವು ಬಹಳ ಹರಸಾಹಸಪಡುತ್ತಿದ್ದು ನಾವೆಲ್ಲರೂ ಒಗ್ಗಟ್ಟಾಗಿ ಸೇರಿಕೊಂಡು ಸರಕಾರಕ್ಕೆ ಆದಷ್ಟು ಮಾನಸಿಕವಾಗಿ ಸಹಾಯ ಮಾಡಬೇಕು. ಆದಷ್ಟು ಮನೆಯಲ್ಲಿದ್ದು ಕೆಲಸ ಕಾರ್ಯಗಳನ್ನು ಮಾಡಿಕೊಂಡು ಅಗತ್ಯವಿದ್ದಲ್ಲಿ ಮಾತ್ರ ತಮಗೆ ಬೇಕಾಗುವ ವಸ್ತುಗಳಿಗಾಗಿ ಮಾತ್ರ ಹೊರಬಂದು ತಮ್ಮ ಆರೋಗ್ಯದ ಕಡೆ ಸಾಕಷ್ಟು ಕಾಳಜಿವಹಿಸಬೇಕು‌ ಎಂದು ವಿನಂತಿಸಿದರು‌.

ಈ ಸಂದರ್ಭದಲ್ಲಿ ಮನಪಾ ಸದಸ್ಯರಾದ ವರುಣ್ ಚೌಟ, ಶ್ವೇತಾ ಪೂಜಾರಿ, ನಯನಾ ಕೋಟ್ಯಾನ್, ಮಾಜಿ ಕಾರ್ಪೋರೇಟರ್ ಗುಣ ಶೇಖರ ಶೆಟ್ಟಿ, ಸುರತ್ಕಲ್ ಬ೦ಟರ ಸಂಘದ ಅಧ್ಯಕ್ಷ ಸುಧಾಕರ ಎಸ್ ಪೂಂಜ, ನಿಕಟ ಪೂರ್ವ ಅಧ್ಯಕ್ಷ ಉಲ್ಲಾಸ್ ಆರ್ ಶೆಟ್ಟಿ ಪೆರ್ಮುದೆ, ಉಪಾಧ್ಯಕ್ಷ ನವೀನ್ ಶೆಟ್ಟಿ ಪಡ್ರೆ , ಪ್ರಧಾನ ಕಾರ್ಯದರ್ಶಿ ಲೋಕಯ್ಯ ಶೆಟ್ಟಿ ಮುಂಚೂರು, ಜತೆ ಕಾರ್ಯದರ್ಶಿ ಪ್ರವೀಣ್ ಶೆಟ್ಟಿ,ಕೋಶಾಧಿಕಾರಿ ರತ್ನಾಕರ ಶೆಟ್ಟಿ, ಸಂಘಟನಾ ಕಾರ್ಯದರ್ಶಿ ಪುಷ್ಪರಾಜ ಶೆಟ್ಟಿ ಕುಡುಂಬೂರು, ಮಹಿಳಾ ವೇದಿಕೆಯ ಅಧ್ಯಕ್ಷೆ ಬೇಬಿ ಶೆಟ್ಟಿ, ಕಾರ್ಯದರ್ಶಿ ಚಿತ್ರಾ ಜೆ. ಶೆಟ್ಟಿ ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರು, ನಿರ್ದೇಶಕರು ಮತ್ತಿತ್ತರು ಉಪಸ್ಥಿತರಿದ್ದರು.

Sponsors

Related Articles

Leave a Reply

Your email address will not be published. Required fields are marked *

Back to top button