ಯುವ ವೇದಿಕೆ ಪೆರಾಜೆ ವತಿಯಿಂದ ದೀಪಾವಳಿ ಆಚರಣೆ…

ಬಂಟ್ವಾಳ: ಯುವ ವೇದಿಕೆ ಪೆರಾಜೆ ವತಿಯಿಂದ ಪೆರಾಜೆ ಗ್ರಾಮದ ನೆಕ್ಕರೆ ಎಂಬಲ್ಲಿ ಈ ವರ್ಷದ ದೀಪಾವಳಿಯನ್ನು ವಿಶೇಷವಾಗಿ ಆಚರಿಸಲಾಯಿತು.
ಒಂದಲ್ಲಾ ಒಂದು ವಿಶೇಷತೆಯನ್ನು ತನ್ನ ಮಡಿಲಲ್ಲಿ ಇಟ್ಟುಕೊಂಡು ಸಮಾಜಮುಖಿ ಕಾರ್ಯಕ್ರಮವನ್ನು ನಿರಂತರವಾಗಿ ಕೆಲಸ ಮಾಡುವ ಸಂಘಟನೆ ಯುವ ವೇದಿಕೆ ಪೆರಾಜೆ. ಅಂತಹ ಕಾರ್ಯಕ್ರಮಗಳ ಪಟ್ಟಿಗೆ ಇನ್ನೊಂದು ಸೇರ್ಪಡೆ ದೀಪಾವಳಿಕಾರ್ಯಕ್ರಮ. ಈ ವರ್ಷ ಕೊರೊನ ದಿಂದ ಪೀಡಿತರಾದ ಇಡೀ ಸಮಾಜ ಇನ್ಯಾರಿಗೋ ಕೈಚಾಚುವ ಹಂತದಲ್ಲಿರುವುದು ಎಲ್ಲರಿಗೂ ತಿಳಿದಿರುವ ಸಂಗತಿ. ಇಂತಹ ಸಂದರ್ಭದಲ್ಲಿ ಕಷ್ಟದಲ್ಲಿರುವ ಮನೆಯೊಂದರಲ್ಲಿ ದೀಪ ಹಚ್ಚಿ, ಭಜನೆ ಹಾಡಿ, ಪಟಾಕಿ ಸಿಡಿಸಿ,ಹಿರಿಯರಿಗೆ ಸೀರೆ ಮತ್ತು ಸಿಹಿ ನೀಡಿ, ಹಿರಿಯರ ಕಾಲು ಮುಟ್ಟಿ ನಮಸ್ಕರಿಸಿ ಅವರೊಂದಿಗೆ ಒಂದಷ್ಟು ಸಂತಸದ ಸಮಯ ಕಳೆಯುವ ವಿನೂತನ ಕಾರ್ಯಕ್ರಮ ಮಾಡಲಾಯಿತು.

Sponsors

Related Articles

Leave a Reply

Your email address will not be published. Required fields are marked *

Back to top button