ಸಹ್ಯಾದ್ರಿ ಕಾಲೇಜು – ಅಸ್ಮತ್ ಶರ್ಮೀನ್ ಅವರಿಗೆ 1 ನೇ ರಾಂಕ್ ಮತ್ತು ಧೀರಜ್ ಅವರಿಗೆ 8 ನೇ ರಾಂಕ್…

ಮಂಗಳೂರು: ಬೆಳಗಾವಿಯ ವಿಟಿಯು ನಡೆಸಿದ ವಿಶ್ವವಿದ್ಯಾಲಯ ಪರೀಕ್ಷೆಗಳಲ್ಲಿ ಸಹ್ಯಾದ್ರಿ ಕಾಲೇಜ್ ಆಫ್ ಎಂಜಿನಿಯರಿಂಗ್ ಮತ್ತು ಮ್ಯಾನೇಜ್‌ಮೆಂಟ್‌ನ ಅಸ್ಮತ್ ಶರ್ಮೀನ್ ಟಿ ಎಸ್ 2019-20ನೇ ಶೈಕ್ಷಣಿಕ ವರ್ಷದಲ್ಲಿ ಸಿವಿಲ್ ಎಂಜಿನಿಯರಿಂಗ್‌ನಲ್ಲಿ 1 ನೇ ರಾಂಕ್ ಹಾಗೂ ಧೀರಜ್ ಎಂ ಅವರು ಎಂಬಿಎಯಲ್ಲಿ 8 ನೇ ರಾಂಕ್ ಪಡೆದಿದ್ದಾರೆ.
ಸಿವಿಲ್ ಎಂಜಿನಿಯರಿಂಗ್‌ನ ಅಸ್ಮತ್ ಶರ್ಮೀನ್ ಟಿ ಎಸ್ ಅವರು 9.42 ರ ಸಿಜಿಪಿಎ ಗಳಿಸಿದ್ದಲ್ಲದೆ 13 ಚಿನ್ನದ ಪದಕಗಳನ್ನು ಸಹ ಪಡೆದಿದ್ದಾರೆ. ಇದು ಒಬ್ಬ ವಿದ್ಯಾರ್ಥಿಯು ಗೆದ್ದ ಅತಿ ಹೆಚ್ಚು ಚಿನ್ನದ ಪದಕವಾಗಿದೆ. ಅವರು ಕಾಸರಗೋಡಿನ ಶರೀಫ್ ಮತ್ತು ಶಹೀದಾ ಅವರ ಪುತ್ರಿ.
ಎಂಬಿಎಯಲ್ಲಿ 8 ನೇ ರಾಂಕ್ ಪಡೆದಿರುವ ಧೀರಜ್ ಎಂ ಅವರು 8.57 ರ ಸಿಜಿಪಿಎ ಗಳಿಸಿದ್ದಾರೆ. ಅವರು KSCST ವಿದ್ಯಾರ್ಥಿ ಯೋಜನೆಯಲ್ಲಿ ಸರ್ಕಾರಿ ಧನಸಹಾಯ ಮತ್ತು ಅತ್ಯುತ್ತಮ ಯೋಜನೆ ಪ್ರಶಸ್ತಿಯನ್ನು ಗೆದ್ದಿದ್ದಾರೆ. ಅವರು ಕಾಸರಗೋಡಿನ ಜನಾರ್ಧನ ರೈ ಮತ್ತು ರೇವತಿ ರೈ ಅವರ ಪುತ್ರ.
ವಿದ್ಯಾರ್ಥಿಗಳ ಈ ಅಮೋಘ ಸಾಧನೆಗೆ ಸಹ್ಯಾದ್ರಿ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು ಮತ್ತು ಅಧ್ಯಾಪಕ ವೃಂದದವರು ಅವರನ್ನು ಅಭಿನಂದಿಸಿದ್ದಾರೆ.

ಅಸ್ಮತ್ ಶರ್ಮೀನ್ ಟಿ ಎಸ್

ಧೀರಜ್ ಎಂ

 

 

Sponsors

Related Articles

Leave a Reply

Your email address will not be published. Required fields are marked *

Back to top button