ಮೊಹಿಯುದ್ದಿನ್ ಜುಮಾ ಮಸ್ಜಿದ್ ಪೇರಡ್ಕ ಗೂನಡ್ಕ ಮಸೀದಿ-ಬಕ್ರೀದ್ ಹಬ್ಬ…

ಸುಳ್ಯ: ಮೊಹಿಯುದ್ದಿನ್ ಜುಮಾ ಮಸ್ಜಿದ್ ಪೇರಡ್ಕ ಗೂನಡ್ಕ ಮಸೀದಿಯಲ್ಲಿ ಭೀಕರ ಮಳೆ ಪ್ರವಾಹದಿಂದ ಎಲ್ಲಾ ಸಂಪರ್ಕ ರಸ್ತೆಗಳು ಮುಚ್ಚಿದರೂ ಹೆಚ್ಚಿನ ಸಂಖ್ಯೆಯಲ್ಲಿ ಜನ ಬಕ್ರೀದ್ ಹಬ್ಬದಲ್ಲಿ ಭಕ್ತಿ ಪೂರ್ವಕವಾಗಿ ಭಾಗವಹಿಸಿದರು.
ಖತೀಬ್ ರಿಯಾಝ್ ಫೈಝಿ ಎಮ್ಮೆಮಾಡು ಹಬ್ಬದ ಮಹತ್ವ ಹಾಗೂ ಬಲಿದಾನದ ಬಗ್ಗೆ ವಿವರಿಸಿ ಪ್ರಸ್ತುತ ಎದುರಿಸುತ್ತಿರುವ ಭೀಕರ ಮಳೆ ಹಾಗೂ ಪ್ರವಾಹದ ಬಗ್ಗೆ ಎಲ್ಲರೂ ಅಲ್ಲಾಹುವಿನಲ್ಲಿ ಪ್ರಾರ್ಥಿಸಲು ತಿಳಿಸಿ ಸಮುದಾಯದ ಹಾಗೂ ಕೋಮು ಐಕ್ಯತೆಯ ಬಗ್ಗೆ ಯುವಕರು ಹೆಚ್ಚು ಕ್ರಿಯಾಶೀಲರಾಗಿ ಎಂದು ಈದ್ ಸಂದೇಶ ನೀಡಿ ಎಲ್ಲರಿಗೂ ಹಬ್ಬದ ಶುಭಾಷಯ ತಿಳಿಸಿದರು. ನಂತರ ಖಬರ್ ಹಾಗೂ ದರ್ಗಾ ಜಿಯಾರತ್ ನಡೆಯಿತು.
ತೆಕ್ಕಿಲ್ ಪ್ರತಿಷ್ಟಾನದ ಅಧ್ಯಕ್ಷರು, ಪೇರಡ್ಕ ಗೂನಡ್ಕ ಮೋಹಿಯುದ್ದಿನ್ ಜುಮಾ ಮಸೀದಿಯ ಗೌರವ ಅಧ್ಯಕ್ಷರಾದ ಟಿ ಎಂ ಶಾಹೀದ್ ತೆಕ್ಕಿಲ್, ಅಧ್ಯಕ್ಷ ಎಸ್ ಆಲಿ ಹಾಜಿ ಸಂಪಾಜೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಜಿ ಕೆ ಹಮೀದ್ ಗೂನಡ್ಕ, ಟಿ ಎಂ ರಝಾಕ್ ಹಾಜಿ,ನೂರುದ್ದೀನ್ ಅನ್ಸಾರಿ, ತೆಕ್ಕಿಲ್ ಮೊಹಮ್ಮದ್ ಕುಂಞ ಪೇರಡ್ಕ, ಪಾಂಡಿಡ ಅಬ್ಬಾಸ್, ಸರಕಾರಿ ಅಧಿಕಾರಿಗಳಾದ ಸಾದಿಕ್ ತೆಕ್ಕಿಲ್ ಪೇರಡ್ಕ, ಟಿ ಎಂ ರಝಾಕ್ ದರ್ಕಾಸ್ ಗೂನಡ್ಕ ಸಹಿತ ಹಲವಾರು ಜನ ಭೀಕರ ಮಳೆಯನ್ನು ಲೆಕ್ಕಿಸದೆ ಭಾಗವಹಿಸಿದರು.

Sponsors

Related Articles

Back to top button