ವಿಶ್ವ ರಕ್ತದಾನಿಗಳ ದಿನಾಚರಣೆ – ಕೆವಿಜಿ ಸಮೂಹ ಸಂಸ್ಥೆ ಮತ್ತು ಇಂಡಿಯನ್ ರೆಡ್ ಕ್ರಾಸ್ ಸುಳ್ಯ ಘಟಕದ ಸಹಭಾಗಿತ್ವದಲ್ಲಿ ಬೃಹತ್ ರಕ್ತದಾನ ಶಿಬಿರ…

ವಿಶ್ವದ 4ನೇ ಅತಿದೊಡ್ಡ ಹಬ್ಬ ರಕ್ತದಾನಿಗಳ ದಿನಾಚರಣೆ- ಡಾ. ಕೆ. ವಿ. ರೇಣುಕಾಪ್ರಸಾದ್…

ಸುಳ್ಯ: ಕೆವಿಜಿ ದಂತ ಮೆಡಿಕಲ್ ಕಾಲೇಜು, ಕೆವಿಜಿ ಇಂಜಿನಿಯರಿಂಗ್ ಕಾಲೇಜು, ಕೆವಿಜಿ ಪಾಲಿಟೆಕ್ನಿಕ್, ಕೆವಿಜಿ ಐಟಿಐ ಮತ್ತು ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ಸುಳ್ಯ ಘಟಕ ಇವುಗಳ ಸಂಯುಕ್ತ ಆಶ್ರಯ ದಲ್ಲಿ ಜೂ. 14 ರಂದು ಕೆವಿಜಿ ದಂತ ಮಹಾ ವಿದ್ಯಾಲಯ ಸಭಾಂಗಣ ದಲ್ಲಿ ವಿಶ್ವರಕ್ತ ದಾನಿಗಳ ದಿನಾಚರಣೆ ಆಚರಿಸಲಾಯಿತು.
ವಿಶ್ವರಕ್ತ ದಾನಿಗಳ ದಿನಾಚರಣೆ ಅಂಗವಾಗಿ ಆಯೋಜಿಸಲಾದ ಬ್ರಹತ್ ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿದ ಡಾ. ಕೆ. ವಿ. ರೇಣುಕಾಪ್ರಸಾದ್ ಅವರು ವಿಶ್ವದ 4ನೇ ಅತಿದೊಡ್ಡ ಹಬ್ಬ ರಕ್ತದಾನಿಗಳ ದಿನಾಚರಣೆಯಾಗಿದೆ. ರಕ್ತ ದಾನ ಇನ್ನೊಬ್ಬರ ಜೀವವನ್ನು ಉಳಿಸುವ ಅತ್ಯಂತ ಶ್ರೇಷ್ಠ ದಾನವಾಗಿದೆ ಎಂದರು.
ಅಧ್ಯಕ್ಷತೆಯನ್ನು ವಹಿಸಿದ್ದ ರೆಡ್ ಕ್ರಾಸ್ ಸುಳ್ಯ ಘಟಕ ಸಭಾಪತಿ, ಮಹಾ ರಕ್ತದಾನಿ ಪಿ. ಬಿ. ಸುಧಾಕರ್ ರೈ ವಹಿಸಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ಮಾನವ ರಕ್ತದ ಗ್ರೂಪ್ ಗಳನ್ನು ಸಂಶೋದಿಸಿದ ಆಸ್ಟ್ರೀಯ ದೇಶದ ವೈದ್ಯ ಕಾರ್ಲ್ ಲ್ಯಾಂಡ್ ಸ್ಟಾನರ್ ರವರ ಜನ್ಮದಿನವಾದ ಜೂನ್ 14 ರಂದು ವಿಶ್ವ ರಕ್ತ ದಾನಿಗಳ ದಿನವನ್ನಾಗಿ ಆಚರಿಸಲಾಗುತ್ತಿದೆ ಎಂದರು
ಮುಖ್ಯ ಅತಿಥಿಗಳಾಗಿ ರೆಡ್ ಕ್ರಾಸ್ ಸುಳ್ಯ ಘಟಕದ ಉಪಸಭಾಪತಿ ಕೆ. ಎಂ. ಮುಸ್ತಫ, ಪ್ರದಾನ ಕಾರ್ಯದರ್ಶಿ ತಿಪ್ಪೇಶಪ್ಪ, ಕೆವಿಜಿ ಸಮೂಹ ಸಂಸ್ಥೆಗಳ ಮುಖ್ಯಕಾರ್ಯ ನಿರ್ವಹಣಾಧಿಕಾರಿ ಡಾ.ಯು. ಪಿ. ಉಜ್ವಲ್, ಕೆವಿಜಿ ಡೆಂಟಲ್ ಕಾಲೇಜು ಪ್ರಾoಶುಪಾಲೆ ಶ್ರೀಮತಿ ಮೋಕ್ಷ ನಾಯಕ್, ಕೆವಿಜಿ ಇಂಜಿನಿಯರಿಂಗ್ ಕಾಲೇಜು ಪ್ರಾoಶುಪಾಲ ಡಾ. ಸುರೇಶ ವಿ , ಕೆವಿಜಿ ಪಾಲಿಟೆಕ್ನಿಕ್ ಪ್ರಾoಶುಪಾಲ ಪ್ರೊ ಜಯಪ್ರಕಾಶ್ ಕೆ, ಕೆವಿಜಿ ಐಟಿಐ ಪ್ರಾoಶುಪಾಲ ಪ್ರೊ. ಚಿದಾನoದ ಮೊದಲಾದವರು ಭಾಗವಹಿಸಿದ್ದರು.
ರಕ್ತದಾನ ಶಿಬಿರದಲ್ಲಿ ನೂರಾರು ರಕ್ತದಾನಿಗಳು ಉತ್ಸಾಹದಿಂದ ಭಾಗವಹಿಸಿದ್ದರು.ಶಿಬಿರ ಸಂಘಟಿಸುವಲ್ಲಿ ದಿನೇಶ್ ಮಡ್ತಿಲ, ಆಡಳಿತಾಧಿಕಾರಿ ಬಿ. ಟಿ. ಮಾಧವ, ಚಂದ್ರಶೇಖರ ಬಿಳಿನೆಲೆ, ಭವಾನಿ ಶಂಕರ್ ಆಡ್ತಲೆ, ಡಾ. ಮನೋಜ್, ಪ್ರೊ. ಲೋಕೇಶ್, ಪ್ರಜ್ಞಾ ಮೊದಲಾದವರು ಸಹಕರಿಸಿದ್ದರು.

whatsapp image 2023 06 14 at 12.08.07 pm (1)
whatsapp image 2023 06 14 at 12.08.07 pm
Sponsors

Related Articles

Back to top button