ಪೇರಡ್ಕಕ್ಕೆ ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವನಾರಾಯಣ ಭೇಟಿ…

ಸುಳ್ಯ: ಯಾವುದೇ ಜಾತಿ-ಮತ ಬೇಧವಿಲ್ಲದೆ ಸರ್ವರಿಂದಲೂ ಗೌರವಿಸಲ್ಪಡುವ ಇತಿಹಾಸ ಪ್ರಸಿದ್ಧ ಪೇರಡ್ಕ ದರ್ಗಾಕ್ಕೆ ಕೆಪಿಸಿಸಿಯ ಕಾರ್ಯಾಧ್ಯಕ್ಷ, ಚಾಮರಾಜನಗರ ಲೋಕಸಭಾ ಕ್ಷೇತ್ರದ ಮಾಜಿ ಸದಸ್ಯರಾದ ಧ್ರುವನಾರಾಯಣ ಅವರು ಫೆ. 21ರಂದು ಭೇಟಿ ನೀಡಿದರು.
ಸ್ಥಳೀಯ ಖತೀಬರಾದ ಬಹು| ರಿಯಾಝ್ ಫೈಝಿ ಲೋಕ ಕಲ್ಯಾಣಕ್ಕಾಗಿ ಪ್ರಾರ್ಥಿಸಿದರು. ಈ ಸಂದರ್ಭದಲ್ಲಿ ದರ್ಗಾ ವತಿಯಿಂದ ಶಾಲು ಹೊದಿಸಿ ಸನ್ಮಾನಿಸಲಾಯಿತು. ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದ ಅವರು ನಾವೆಲ್ಲರು ಪರಸ್ಪರ ಮತ ಸೌಹಾರ್ಧತೆಯಿಂದ ಇದ್ದು ಸಾಮರಸ್ಯದಿಂದ ಬಾಳೋಣ ಎಂದರು. ಈ ಪ್ರದೇಶಕ್ಕೆ ಟಿ.ಎಂ.ಶಹೀದ್ ರವರು ರಾಜ್ಯ ಸಭಾಸದಸ್ಯರ, ವಿಧಾನ ಪರಿಷತ್ ಸದಸ್ಯರ ಪ್ರದೇಶಾಭಿವೃದ್ಧಿ ನಿಧಿಯಿಂದ ಅನುದಾನವನ್ನು ತರಿಸಿ ಅಭಿವೃದ್ಧಿ ಕೆಲಸವನ್ನು ಮಾಡಿರುವುದು ಪ್ರಶಂಸನೀಯ. ಟಿ.ಎಂ.ಶಹೀದ್ ತೆಕ್ಕಿಲ್ ಮಾತನಾಡಿ ಧ್ರುವನಾರಾಯಣ ರವರು ಒಬ್ಬ ಸಜ್ಜನ ರಾಜಕಾರಣಿ ಮುಂದೆ ಲೋಕಸಭಾ ಸದಸ್ಯರಾಗಿ ಕೇಂದ್ರದಲ್ಲಿ ಸಚಿವರಾಗಬಹುದು ಅಥವಾ ಶಾಸಕರಾದರೆ ಕರ್ನಾಟಕದಲ್ಲಿ ಮಂತ್ರಿಯಾಗುತ್ತಾರೆ ಎಂದು ಭವಿಷ್ಯ ನುಡಿದರು.
ಸ್ಥಳೀಯ ಮಸೀದಿ ಅಧ್ಯಕ್ಷ ಆಲಿಹಾಜಿ, ಉಪಾಧ್ಯಕ್ಷ ಹಾಜಿ ಸಾಜಿದ್ ಅಝ್‌ಹರಿ ಮಾಜಿ ಉಪಾಧ್ಯಕ್ಷ ಪಾಂಡಿ ಅಬ್ಬಾಸ್, ಪ್ರ.ಕಾರ್ಯದರ್ಶಿ ಹಾಜಿ ಟಿ.ಎಂ. ಅಬ್ದುಲ್ ರಜಾಕ್, ಕೋಶಾಧಿಕಾರಿ ಉಮ್ಮರ್ ಪಿ.ಕೆ., MRDA ಅಧ್ಯಕ್ಷ ಜಾಕೀರ್‌ಹುಸೈನ್ , ಅಬ್ದುಲ್ ಖಾದರ್ ಮೊಟ್ಟೆಂಗಾರ್, ಮುನೀರ್ ದಾರಿಮಿ, ಇಬ್ರಾಹಿಂ ಚೆರೂರು, ಇಬ್ರಾಹಿಂ ಸೆಟ್ಯಡ್ಕ, ಟಿ.ಬಿ. ಅಬ್ದುಲ್ಲ ಮಹಮ್ಮದ್ ಕುಂಞ ಪೇರಡ್ಕ, ಮೊಯಿದು ದರ್ಖಾಸ್ತು, ಹಕೀಮ್ ಮೊಟ್ಟೆಂಗಾರ್, ಆರಿಫ್ ತೆಕ್ಕಿಲ್ ಮೊದಲಾದವರಿದ್ದರು.

Sponsors

Related Articles

Back to top button