ಯೆನೆಪೋಯ ಇಂಜಿನಿಯರಿಂಗ್ ಕಾಲೇಜು – ಇನ್ ಫಾರ್ಮೆಷನ್ ಸೈನ್ಸ್ ವಿದ್ಯಾರ್ಥಿ ಸಂಘದ ಉದ್ಘಾಟನೆ,ತಾಂತ್ರಿಕ ಉಪನ್ಯಾಸ…

ಮೂಡುಬಿದ್ರಿ: ಇಲ್ಲಿನ ಯೆನೆಪೋಯ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಇನ್ ಫಾರ್ಮೆಷನ್ ಸೈನ್ಸ್ ಇಂಜಿನಿಯರಿಂಗ್ ವಿಭಾಗದ ವಿದ್ಯಾರ್ಥಿ ಸಂಘ “INFERA ” ಇದರ ಉದ್ಘಾಟನೆ ಮತ್ತು ತಾಂತ್ರಿಕ ಉಪನ್ಯಾಸ ನ. 12 ರಂದು ನಡೆಯಿತು.
ಎ1 ಲಾಜಿಕ್ಸ್ ಕಂಪೆನಿಯ ಸ್ಥಾಪಕ ಮತ್ತು ನಿರ್ದೇಶಕ ಪ್ರವೀಣ್ ಉಡುಪ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಕ್ಯಾಂಪಸ್ ಆಡಳಿತಾಧಿಕಾರಿ ಮೊಹಮ್ಮದ್ ಶಾಹಿದ್, ವಿಭಾಗ ಮುಖ್ಯಸ್ಥ ಡಾ. ಕೀರ್ತಿಕುಮಾರ್, ಪ್ರೊ. ದೀಕ್ಷಾ ಕೆ ಆರ್ ಉಪಸ್ಥಿತರಿದ್ದರು.
ವಿದ್ಯಾರ್ಥಿನಿ ಫಾತಿಮಾ ರಝಿನ ಸ್ವಾಗತಿಸಿದರು. ಪ್ರೊ. ದೀಕ್ಷಾ ಕೆ ಆರ್ ಸಂಘದ ಕಾರ್ಯ ಚಟುವಟಿಕೆಗಳ ಬಗ್ಗೆ ತಿಳಿಸಿದರು . ರಫ್ತಾನ್ ಅತಿಥಿ ಪರಿಚಯ ಮಾಡಿದರು. ವಿದ್ಯಾರ್ಥಿ ಸಂಘದ ಅಧ್ಯಕ್ಷೆ ನಿಶಾ ಮೆಡೋನ ಡಿಸೋಜಾ ಸಂಘದ ಪದಾಧಿಕಾರಿಗಳ ಪರಿಚಯ ಮಾಡಿದರು. ಸಂಕೇತ್ ವಂದಿಸಿದರು. ಮಾಹಿನ್ ಆರಿಫ್ ಕಾರ್ಯಕ್ರಮ ನಿರೂಪಿಸಿದರು. ವಿಭಾಗದ ಎಲ್ಲಾ ಉಪನ್ಯಾಸಕರು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ನಂತರ ಎ1 ಲಾಜಿಕ್ಸ್ ಕಂಪೆನಿಯ ಸ್ಥಾಪಕ ಮತ್ತು ನಿರ್ದೇಶಕ ಪ್ರವೀಣ್ ಉಡುಪ ಅವರು “IT ಮತ್ತು ITES ” ಎಂಬ ವಿಷಯದಲ್ಲಿ ತಾಂತ್ರಿಕ ಉಪನ್ಯಾಸ ನೀಡಿದರು.

Sponsors

Related Articles

Back to top button