ಶನಿವಾರ – ದ.ಕ 24 , ಉಡುಪಿಯಲ್ಲಿ 121 ಕೊರೊನಾ ಪ್ರಕರಣ ದೃಢ ….

ಮಂಗಳೂರು : ಇಂದು (ಶನಿವಾರ) ದ.ಕ ಜಿಲ್ಲೆಯಲ್ಲಿ 24 ಹಾಗೂ ಉಡುಪಿ ಜಿಲ್ಲೆಯಲ್ಲಿ 121 ಕೊರೊನಾ ಪಾಸಿಟಿವ್‌‌ ಪ್ರಕರಣ ದೃಢವಾಗಿದೆ.
ದ.ಕ. ಜಿಲ್ಲೆಯಲ್ಲಿ 15 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. 88 ಮಂದಿ ಸೋಂಕಿತರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಉಡುಪಿ ಜಿಲ್ಲೆಯಲ್ಲಿ ಪತ್ತೆಯಾದ 121 ಪಾಸಿಟಿವ್ ಪ್ರಕರಣಗಳಲ್ಲಿ ಎಲ್ಲರೂ ಮಹಾರಾಷ್ಟ್ರದಿಂದ ಆಗಮಿಸಿದವರಾಗಿದ್ದಾರೆ. 21 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. 785 ಮಂದಿ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ.
ಇನ್ನು ರಾಜ್ಯದಲ್ಲಿ ಇಂದು 378 ಮಂದಿಗೆ ಕೊವಿಡ್-19 ಪಾಸಿಟಿವ್ ದೃಢಪಟ್ಟಿದೆ. ಇದರೊಂದಿಗೆ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 5213ಕ್ಕೆ ಏರಿಕೆಯಾಗಿದೆ.
ಇಂದು ಹೊರ ರಾಜ್ಯಗಳಿಂದ ಬಂದ 333 ಹಾಗೂ ಹೊರ ದೇಶಗಳಿಂದ ಬಂದ 8 ಜನರಿಗೆ ಸೋಂಕು ತಗುಲಿದ್ದು, ಇಬ್ಬರು ಸೋಂಕಿತರು ಮೃತಪಟ್ಟಿದ್ದಾರೆ. .
ವಿಜಯಪುರ, ದಾವಣಗೆರೆಯಲ್ಲಿ ತಲಾ 6, ಬೆಳಗಾವಿ 5, ಗದಗ 4, ಮಂಡ್ಯ, ಹಾಸನ, ಹಾವೇರಿ ಧಾರವಾಡದಲ್ಲಿ ತಲಾ 3, ರಾಯಚೂರು, ಚಿಕ್ಕಬಳ್ಳಾಪುರ, ಉತ್ತರ ಕನ್ನಡದಲ್ಲಿ ತಲಾ 2, ಬೀದರ್, ತುಮಕೂರು, ಕೋಲಾರ, ಕೊಪ್ಪಳದಲ್ಲಿ ತಲಾ ಒಂದೊಂದು ಪ್ರಕರಣಗಳು ದೃಢಪಟ್ಟಿವೆ.

Sponsors

Related Articles

Leave a Reply

Your email address will not be published. Required fields are marked *

Back to top button