ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನಲ್ಲಿ ಉದ್ಯಮಶೀಲತಾ ಕಾರ್ಯಾಗಾರ….

ಪುತ್ತೂರು: ಆಧುನಿಕ ಯುಗದಲ್ಲಿ ಯುವಜನತೆಗೆ ಉದ್ಯಮಗಳ ಸ್ಥಾಪನೆಗೆ ಸರಕಾರದಿಂದ ಬಹಳಷ್ಟು ಸವಲತ್ತುಗಳು ಸಿಗುತ್ತಿದ್ದು ಇದನ್ನು ಪರಿಣಾಮಕಾರಿಯಾಗಿ ಬಳಸಿಕೊಂಡು ಉದ್ಯಮಶೀಲರಾದಾಗ ದೇಶದ ಸರ್ವತೋಮುಖ ಅಭಿವೃದ್ಧಿ ಸಾಧ್ಯವಾಗುತ್ತದೆ ಎಂದು ಪುತ್ತೂರು ಎಸ್‍ಜಿಕೆ ಫರ್ನಿಚರ್ಸ್ ಸಂಸ್ಥೆಯ ನಿರ್ದೇಶಕ ಉದ್ಯಮಿ ಹೇಮಂತ್ ಕಾಮತ್ ಹೇಳಿದರು.
ಅವರು ಪುತ್ತೂರಿನ ವಿವೇಕಾನಂದ ಇಂಜಿನಿಯರಿಂಗ್ ಕಾಲೇಜು ಹಾಗೂ ಎಂಟರ್‍ಪ್ರೈನರ್‍ಶಿಪ್ ಡೆವೆಲಪ್‍ಮೆಂಟ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯ ಅಹಮದಾಬಾದ್ ಇದರ ಸಂಯುಕ್ತ ಆಶ್ರಯದಲ್ಲಿ ನಡೆದ ಮೂರುದಿನಗಳ ಉದ್ಯಮಶೀಲತೆಯ ಕಾರ್ಯಾಗಾರಕ್ಕೆ ಚಾಲನೆ ನೀಡಿ ಮಾತನಾಡಿದರು.
ದಿನಕ್ಕೊಂದು ಹೊಸ ಹೊಸ ತಂತ್ರಜ್ಞಾನಗಳು ಅಭಿವೃಧಿಯಾಗುತ್ತಿದ್ದು, ಇದನ್ನು ಬಳಸಿಕೊಂಡು ನೂತನ ಉದ್ಯಮಗಳನ್ನು ಸ್ಥಾಪಿಸುವಂತೆ ಅವರು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಕಾಲೇಜು ಆಡಳಿತ ಮಂಡಳಿಯ ನಿರ್ದೇಶಕ ಸುಬ್ರಮಣ್ಯ ಭಟ್.ಟಿ.ಎಸ್ ಮಾತನಾಡಿ ಉದ್ಯೊಗದ ಬೆನ್ನು ಹತ್ತುವ ಬದಲು ಇತರರಿಗೆ ಉದ್ಯೋಗವನ್ನು ನೀಡುವ ಉದ್ಯಮವನ್ನು ಸ್ಥಾಪಿಸುವ ಮೂಲಕ ಸಮಾಜದ ತನ್ಮೂಲಕ ದೇಶದ ಅಭಿವೃದ್ಧಿಗೆ ಕೊಡುಗೆಯನ್ನು ನೀಡುವಂತೆ ವಿದ್ಯಾರ್ಥಿಗಳನ್ನು ಪ್ರೇರೇಪಿಸಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ.ಎಂ.ಎಸ್.ಗೋವಿಂದೇಗೌಡ ಮಾತನಾಡಿ ಯಾವುದೇ ಉದ್ಯಮವನ್ನು ಪ್ರಾರಂಭಿಸಬೇಕಾದರೆ ಅದಕ್ಕೆ ಸೂಕ್ತ ತಿಳುವಳಿಕೆಯ ಅಗತ್ಯವಿದೆ. ಸರಿಯಾದ ಅನುಭವದೊಡನೆ ಪ್ರಾರಂಭಿಸಿದ ಉದ್ಯಮವು ಸೋಲುವುದಕ್ಕೆ ಸಾಧ್ಯವಿಲ್ಲ ಎಂದರು.
ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದ ವಿವಿಧ್ ಎನರ್ಜಿ ಸಿಸ್ಟಮ್ಸ್‍ನ ಮಾಲಕ ಹಾಗೂ ಕಾಲೇಜು ಆಡಳಿತ ಮಂಡಳಿಯ ನಿರ್ದೇಶಕ ರವಿಕೃಷ್ಣ.ಡಿ.ಕಲ್ಲಾಜೆ ಮಾತನಾಡಿ ವ್ಯವಹಾರದಲ್ಲಿ ಸಮಯ ನಿರ್ವಹಣೆ ಅತೀ ಮುಖ್ಯ. ಸಮಯವನ್ನು ಸರಿಯಾಗಿ ನಿರ್ವಹಿಸುವವನು ಎತ್ತರಕ್ಕೆ ಏರುತ್ತಾನೆ, ಸಮಯವನ್ನು ಅಲಕ್ಷಿಸುವವನು ಪರಿತಪಿಸುತ್ತಾನೆ ಎಂದರು.
ಹಲವು ಅನುಭವೀ ಸಂಪನ್ಮೂಲ ವ್ಯಕ್ತಿಗಳು ಉಪನ್ಯಾಸಗಳನ್ನು ನೀಡಿದರು.
75 ಮಂದಿ ಆಸಕ್ತ ವಿದ್ಯಾರ್ಥಿಗಳು ಇದರಲ್ಲಿ ಭಾಗವಹಿಸಿದ್ದರು.ಪುತ್ತೂರು ಆಸುಪಾಸಿನ ಪ್ರಸಿದ್ದ ಉದ್ದಿಮೆಗಳನ್ನು ವೀಕ್ಷಿಸುವ ಅವಕಾಶವನ್ನು ಮಾಡಲಾಗಿತ್ತು.ಕಾರ್ಯಕ್ರಮ ಸಂಯೋಜಕರಾದ ಮೆಕ್ಯಾನಿಕಲ್ ವಿಭಾಗದ ಮುಖ್ಯಸ್ಥ ಡಾ.ಮನುಜೇಶ್.ಬಿ.ಜೆ ಸ್ವಾಗತಿಸಿದರು.

Sponsors

Related Articles

Leave a Reply

Your email address will not be published. Required fields are marked *

Back to top button