ಕಲ್ಲುಗುಂಡಿ – ಶಾಲಾ ಮಕ್ಕಳಿಗೆ ಉಚಿತ ಚಪ್ಪಲಿ ವಿತರಣೆ…

ಸುಳ್ಯ:ದ. ಕ. ಜಿ. ಪ ಹಿರಿಯ ಪ್ರಾಥಮಿಕ ಶಾಲೆ ಕಲ್ಲುಗುಂಡಿ, ಆರ್. ಎಂ. ಎಸ್. ಎ ಪ್ರೌಢಶಾಲೆ ಕಲ್ಲುಗುಂಡಿ ಇದರ ಆಶ್ರಯದಲ್ಲಿ ಶಾಲಾ ಮಕ್ಕಳಿಗೆ ಉಚಿತ ಚಪ್ಪಲಿ ವಿತರಣೆ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮ ಉದ್ಘಾಟನೆ ಮಾಡಿ, ಚಪ್ಪಲಿ ವಿತರಿಸಿ ಮಾತನಾಡಿದ ಪಂಚಾಯತ್ ಮಾಜಿ ಅಧ್ಯಕ್ಷರು, ಹಾಲಿ ಸದಸ್ಯರಾದ ಜಿ. ಕೆ. ಹಮೀದ್ ಗೂನಡ್ಕ ಅವರು ಸರಕಾರಿ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಬಿಸಿಯೂಟ, ಸಮವಸ್ತ್ರ, ಚಪ್ಪಲಿ, ಮೊಟ್ಟೆ, ಚಿಕ್ಕಿ, ಹಲವು ಯೋಜನೆ ಸರಕಾರ ಜಾರಿಗೆ ತಂದು ಸರಕಾರಿ ಶಾಲೆಗೆ ಬರುವ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡುತ್ತಿದೆ. ವಿದ್ಯಾರ್ಥಿಗಳು ಉತ್ತಮ ಫಲಿತಾಂಶ ನೀಡುವ ಮೂಲಕ ಪೋಷಕರಿಗೆ ಅಧ್ಯಾಪಕರಿಗೆ ಹಾಗೂ ಶಾಲೆಗೆ ಕೀರ್ತಿ ತರುವ ಕೆಲಸ ಮಾಡಬೇಕು ಎಂದರು.

ಶಾಲಾ ಎಸ್. ಡಿ. ಎಂ. ಸಿ ಅಧ್ಯಕ್ಷರಾದ ಮಹಮ್ಮದ್ ಹನೀಫ್ ಅಧ್ಯಕ್ಷತೆ ವಹಿಸಿದ್ದರು. ಪ್ರೌಢಶಾಲೆ ಮುಖ್ಯ ಶಿಕ್ಷಕಿ ಜಯಶ್ರೀ, ಎನ್. ಕೆ. ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕಿ ಚಂದ್ರಾವತಿ ಎಸ್. ಡಿ. ಎಂ. ಸಿ ಉಪಾಧ್ಯಕ್ಷರಾದ ಗಾಯತ್ರಿ, ಎಸ್. ಡಿ. ಎಂ. ಸಿ ಸರ್ವ ಸದಸ್ಯರು, ಪ್ರಾಥಮಿಕ ಹಾಗೂ ಪ್ರೌಢಶಾಲೆ ಶಿಕ್ಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಎಲ್ಲಾ ವಿದ್ಯಾರ್ಥಿಗಳಿಗೆ ಚಪ್ಪಲಿ ವಿತರಿಸಲಾಯಿತು.

whatsapp image 2023 09 23 at 10.20.52 pm
whatsapp image 2023 09 23 at 10.20.51 pm (1)
whatsapp image 2023 09 23 at 10.20.51 pm
Sponsors

Related Articles

Back to top button