ಗುರುವಾರ – ದ.ಕ 350 , ಉಡುಪಿ 277 ಹಾಗೂ ರಾಜ್ಯದಲ್ಲಿ 9217 ಕೊರೊನ ಪಾಸಿಟಿವ್ ಪತ್ತೆ…

ಮಂಗಳೂರು: ಇಂದು (ಗುರುವಾರ) ದ.ಕ ಜಿಲ್ಲೆಯಲ್ಲಿ 350 , ಉಡುಪಿ 277 ಹಾಗೂ ರಾಜ್ಯದಲ್ಲಿ 9217 ಕೊರೊನ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದೆ.

ದ.ಕ ಜಿಲ್ಲೆಯಲ್ಲಿ ಇಂದು 350 ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 16112 ಕ್ಕೆ ಏರಿಕೆಯಾಗಿದೆ. ಇಂದು 9 ಮಂದಿ ಕೊರೊನಾಗೆ ಬಲಿಯಾಗಿದ್ದಾರೆ. ಈ ಮೂಲಕ ಸಾವಿನ ಸಂಖ್ಯೆ 427 ಕ್ಕೆ ಏರಿಕೆಯಾಗಿದೆ. ಇಂದು 170 ಮಂದಿ ಡಿಸ್ಚಾರ್ಜ್ ಆಗಿದ್ದಾರೆ. 3273 ಸಕ್ರಿಯ ಪ್ರಕರಣಗಳಿವೆ. 350 ಪ್ರಕರಣಗಳ ಪೈಕಿ 154 ಪ್ರಕರಣಗಳು ಮಂಗಳೂರಿನಿಂದ, 56 ಪ್ರಕರಣಗಳು ಬಂಟ್ವಾಳದಿಂದ, 26 ಪ್ರಕರಣಗಳು ಪುತ್ತೂರಿನಿಂದ, 13 ಪ್ರಕರಣಗಳು ಸುಳ್ಯದಿಂದ , 48 ಪ್ರಕರಣಗಳು ಬೆಳ್ತಂಗಡಿಯಿಂದ ಹಾಗೂ 53 ಪ್ರಕರಣಗಳು ಬೇರೆ ಜಿಲ್ಲೆಯವರದ್ದಾಗಿದೆ.

ಉಡುಪಿ ಜಿಲ್ಲೆಯಲ್ಲಿ ಇಂದು 277 ಮಂದಿಯಲ್ಲಿ ಕೊರೊನಾ ಪಾಸಿಟಿವ್ ದೃಢಪಟ್ಟಿದೆ. ಒಟ್ಟು ಸೋಂಕಿತರ ಸಂಖ್ಯೆ 13572ಕ್ಕೆ ಏರಿಕೆಯಾಗಿದೆ. ಜಿಲ್ಲೆಯಲ್ಲಿ 1897 ಸಕ್ರಿಯ ಪ್ರಕರಣಗಳಿವೆ.

ಇನ್ನು ರಾಜ್ಯದಲ್ಲಿ ಇಂದು 9217 ಮಂದಿಗೆ ಪಾಸಿಟಿವ್ ದೃಢಪಟ್ಟಿದೆ. ಇದರೊಂದಿಗೆ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 4,30,947ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿ ಇಂದು 129 ಮಂದಿ ಮಹಾಮಾರಿಗೆ ಬಲಿಯಾಗಿದ್ದಾರೆ. ಇದರೊಂದಿಗೆ ರಾಜ್ಯದಲ್ಲಿ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 6937ಕ್ಕೆ ಏರಿಕೆಯಾಗಿದೆ. ಇಂದು 7021 ಮಂದಿ ಆಸ್ಪತ್ಪೆಯಿಂದ ಡಿಸ್ಚಾರ್ಜ್ ಆಗಿದ್ದು, ಗುಣಮುಖರಾದವರ ಸಂಖ್ಯೆ 3,22,454ಕ್ಕೆ ಏರಿಕೆಯಾಗಿದೆ. 1,01537 ಮಂದಿ ನಿಗದಿತ ಕೊವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಪೈಕಿ 768 ಸೋಂಕಿತರು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Sponsors

Related Articles

Leave a Reply

Your email address will not be published. Required fields are marked *

Back to top button