ತಾಲಿಬಾನಿ ಪದ ಬಳಕೆ – ಕೋಲ್ಚಾರು ಶಾಲಾ ಎಸ್‌.ಡಿ.ಎಂ.ಸಿ. ಅಧ್ಯಕ್ಷರ ರಾಜೀನಾಮೆಗೆ ಒತ್ತಾಯ…

ಸುಳ್ಯ: ಕೋಲ್ಚಾರು ಶಾಲಾ ಎಸ್‌.ಡಿ.ಎಂ.ಸಿ. ಅಧ್ಯಕ್ಷರು ತಾಲಿಬಾನಿ ಪದ ಬಳಕೆ ಮಾಡಿರುವುದರಿಂದ ನಮಗೆ ಬೇಸರವಾಗಿದೆ. ಇದರಿಂದಾಗಿ ನಮ್ಮ ಮಕ್ಕಳು ಭಯಗೊಂಡು ಶಾಲೆಗೆ ಹೊರಡುತ್ತಿಲ್ಲ. ತಾಲಿಬಾನಿ ಪದ ಬಳಕೆ ಮಾಡಿರುವ ಎಸ್‌.ಡಿ.ಎಂ.ಸಿ. ಅಧ್ಯಕ್ಷರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಇಲ್ಲವೋ ನಮ್ಮ ಮಕ್ಕಳ ಟಿಸಿ ನಮಗೆ ಕೊಡಬೇಕು ಎಂದು ಶಾಲೆಯ
ಎಸ್‌.ಡಿ.ಎಂ. ಸಿ. ಗೆ ರಾಜೀನಾಮೆ ನೀಡಿರುವ ಸದಸ್ಯರು ಹಾಗೂ ಪೋಷಕರು ಒತ್ತಾಯ ಮಾಡಿದ್ದಾರೆ.
ಇಂದು ಸುಳ್ಯ ಪ್ರೆಸ್‌ ಕ್ಲಬ್‌ ನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಎಸ್‌.ಡಿ.ಎಂ.ಸಿ ಸದಸ್ಯ ಅಬ್ದುಲ್‌ ರಘೌ ಶಾಲೆಯ ಆವರಣದಲ್ಲಿ ಅದೇ ಶಾಲೆಯ ಮಕ್ಕಳು ಮತ್ತು ಹಿರಿಯ ವಿದ್ಯಾರ್ಥಿಗಳು ಆಟವಾಡುವ ಸಂದರ್ಭದಲ್ಲಿ ಶಾಲಾ ಎಸ್‌.ಡಿ.ಎಂ.ಸಿ.
ಅಧ್ಯಕ್ಷ ಸುದರ್ಶನ್‌ ಪಾತಿಕಲ್ಲು ರವರು ತಾಲಿಬಾನಿ ಪದ ಬಳಕೆ ಮಾಡಿ ಅಲ್ಲಿ ಆಟವಾಡುವ ಮಕ್ಕಳಿಗೆ ಬೈದಿದ್ದಾರೆ.
ಸೌಹಾರ್ದತೆಯ ಊರಿನಲ್ಲಿ ಈ ರೀತಿಯ ಪದ ಬಳಕೆ ಮಾಡಿದ್ದು ನಮಗೆ ಬೇಸರ ತರಿಸಿದೆ. ಇದರಿಂದಾಗಿ ನಮ್ಮ ಮಕ್ಕಳು ಶಾಲೆಗೆ ಹೋಗಲು ಹಿಂಜರಿಯುತ್ತಿದ್ದಾರೆ. ಘಟನೆಯ ಕುರಿತು ಶಿಕ್ಷಣಾಧಿಕಾರಿ, ಪೋಲೀಸ್‌ ಇಲಾಖೆಗಳಿಗೂ ದೂರು ನೀಡಿದರೂ ಕ್ರಮಕೈಗ್ಳುವುದಿಲ್ಲ. ಈ ಕುರಿತು ತನಿಖೆ ನಡೆಸಿ ನಮಗೆ ನ್ಯಾಯ ಸಿಗಬೇಕು ಎಂದು ಅವರು ಹೇಳಿದರು.
ಸುಳ್ಯ ನ.ಪಂ. ಸದಸ್ಯ ಉಮ್ಮರ್‌ ಮಾತನಾಡಿ, ಶಾಲೆಯ ಅಧ್ಯಕ್ಷರು ಈ ರೀತಿಯ ಪದ ಬಳಕೆ ಮಾಡಿರುವುದು ಸರಿಯಲ್ಲ. ಇದರಿಂದ ಕೋಮು ಭಾವನೆ ಕೆರಳಿಸುವ ಸ್ಥಿತಿಯಾಗಿದೆ. ಈಗ ತಾಲಿಬಾನಿ ಪದ ಅವರು ಹೇಳಿಯೇ ಇಲ್ಲ ಎಂದು ಹೇಳುತ್ತಿದ್ದಾರೆ. ಅವರು ತಾಲಿಬಾನಿ ಪದ ಬಳಕೆ ಮಾಡಿರುವುದಕ್ಕೆ ಅಂದಿನ ಘಟನೆ ನಡೆದ ಆಡಿಯೋ ನಮ್ಮಲ್ಲಿದೆ. ಆದ್ದರಿಂದ ಅಧ್ಯಕ್ಷರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಇಲವೋ ನಮ್ಮ ಮಕ್ಕಳ ಟಿಸಿ ನಮಗೆ ಕೊಡಲಿ. ಆದರೆ ನಾವು ಕಾನೂನು ಹೋರಾಟವನ್ನು
ನ್ಯಾಯ ಸಿಗುವ ತನಕ ಮುಂದುವರಿಸುತ್ತೇವೆ. ಸಂಬಂಧಿಸಿದ ಇಲಾಖೆಗಳ ಎದುರು ಧರಣಿ ಕುಳಿತುಕೊಳ್ಳುತ್ತೇವೆ ಎಂದು ಹೇಳಿದರು.

Sponsors

Related Articles

Back to top button