ಶುಕ್ರವಾರ – ದ.ಕ ದಾಖಲೆಯ 311 ,ಉಡುಪಿ 84 ಹಾಗೂ ರಾಜ್ಯದಲ್ಲಿ 3693 ಕೊರೊನ ಪಾಸಿಟಿವ್ ಪತ್ತೆ…

ಮಂಗಳೂರು: ಇಂದು(ಶುಕ್ರವಾರ) ದ.ಕ ಜಿಲ್ಲೆಯಲ್ಲಿ ದಾಖಲೆಯ 311 ,ಉಡುಪಿ ಜಿಲ್ಲೆಯಲ್ಲಿ 84 ಹಾಗೂ ರಾಜ್ಯದಲ್ಲಿ 3693 ಕೊರೊನ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೋನಾ ಅಟ್ಟಹಾಸ ಮುಂದುವರೆದಿದ್ದು, ಇಂದು ಒಂದೇ ದಿನ ಬರೋಬ್ಬರಿ 311 ಮಂದಿಗೆ ಪಾಸಿಟಿವ್ ದೃಢಗೊಂಡಿದೆ. ಇದರೊಂದಿಗೆ ಜಿಲ್ಲೆಯಲ್ಲಿ ಪಾಸಿಟಿವ್ ಸೋಂಕಿತರ ಸಂಖ್ಯೆ 3074ಕ್ಕೆ ಏರಿಕೆಯಾಗಿದೆ
ಉಡುಪಿ ಜಿಲ್ಲೆಯಲ್ಲಿ ಇಂದು ಮತ್ತೆ 84 ಜನರಲ್ಲಿ ಕೊರೊನಾ ಪಾಸಿಟಿವ್‌ ಆಗಿದೆ. ಇಂದು ಜಿಲ್ಲೆಯಲ್ಲಿ 393 ಕೊರೊನಾ ವರದಿಗಳು ಲಭ್ಯವಾಗಿದ್ದು ಈ ಪೈಕಿ 309 ವರದಿಯು ನೆಗೆಟಿವ್‌ ಆಗಿದ್ದರೆ ಉಳಿದ 84 ವರದಿ ಪಾಸಿಟಿವ್‌ ಆಗಿದೆ. ಇನ್ನು ಕೂಡಾ 84 ಜನರ ಕೊರೊನಾ ಪರೀಕ್ಷಾ ವರದಿ ಬರಬೇಕಾಗಿದೆ.
ಇಂದು ಬೆಂಗಳೂರು ನಗರವೊಂದರಲ್ಲೆ ಅತಿ ಹೆಚ್ಚು ಅಂದರೆ 2,208 ಪ್ರಕರಣಗಳು ವರದಿಯಾಗಿದ್ದು, ರಾಜ್ಯದಲ್ಲಿ ಒಟ್ಟು 3,693 ಮಂದಿಗೆ ಪಾಸಿಟಿವ್ ದೃಢಪಟ್ಟಿದೆ. ಇದರಿಂದ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 55,115ಕ್ಕೇರಿಕೆಯಾಗಿದೆ.ಕೊರೋನಾ ವೈರಸ್ ನಿಂದಾಗಿ ಕಳೆದ 24 ಗಂಟೆಯಲ್ಲಿ ಬೆಂಗಳೂರಿನಲ್ಲಿ 75 ಸೋಂಕಿತರು ಸೇರಿದಂತೆ ರಾಜ್ಯದಲ್ಲಿ ಒಟ್ಟು 115 ಮಂದಿ ಸಾವನ್ನಪ್ಪಿದ್ದಾರೆ

Sponsors

Related Articles

Leave a Reply

Your email address will not be published. Required fields are marked *

Back to top button