ವಿವೇಕಾನಂದ ಎಂಜಿನಿಯರಿಂಗ್ ಕಾಲೇಜು – 5 ದಿನಗಳ ಕೌಶಲ್ಯ ಉದ್ದೀಪನಾ ಕಾರ್ಯಾಗಾರ…

ಪುತ್ತೂರು: ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯ ಸಿವಿಲ್ ಇಂಜಿನಿಯರಿಂಗ್ ವಿಭಾಗ ಹಾಗೂ ಅಸೋಸಿಯೇಷನ್ ಆಫ್ ಕನ್ಸಲ್ಟಿಂಗ್ ಸಿವಿಲ್ ಇಂಜಿನಿಯರ್ಸ್ ಇಂಡಿಯ ಪುತ್ತೂರು ಕೇಂದ್ರ ಇದರ ಸಂಯುಕ್ತ ಆಶ್ರಯದಲ್ಲಿ ನಿರ್ಮಾಣ ಕ್ಷೇತ್ರದಲ್ಲಿನ ಇತ್ತೀಚಿನ ಹೊಸತನಗಳು ಹಾಗೂ ಗುಣಮಟ್ಟದ ಮಾನದಂಡಗಳು ಎನ್ನುವ ವಿಷಯದ ಬಗ್ಗೆ 5 ದಿನಗಳ ಕೌಶಲ್ಯ ಉದ್ದೀಪನಾ ಕಾರ್ಯಾಗಾರವನ್ನು ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯಲ್ಲಿ ಏರ್ಪಡಿಸಲಾಗಿದೆ.
ಕಾರ್ಯನಿರತ ಸಿವಿಲ್ ಇಂಜಿನಿಯರುಗಳು, ಗುತ್ತಿಗೆದಾರರು, ಮೇಲ್ವಿಚಾರಕರು, ಉಪನ್ಯಾಸಕರು, ವಿದ್ಯಾರ್ಥಿಗಳು ಹಾಗೂ ಸಂಶೋಧನಾ ನಿರತರಿಗೆ ಅನುಕೂಲವಾಗುವ ಈ ವಿಚಾರಸಂಕಿರಣವನ್ನು ಡಿಸೆಂಬರ್ 12 ರಿಂದ 16ರ ವರೆಗೆ ನಡೆಸಲಾಗುತ್ತದೆ.
ದಿನಾಂಕ 12.12.2023ರ ಬೆಳಿಗ್ಗೆ 9.30ಕ್ಕೆ ಕಾರ್ಯನಿರತ ಸಿವಿಲ್ ಇಂಜಿನಿಯರುಗಳಿಗೆ ಕಾರ್ಯಾಗಾರ ನಡೆಯಲಿದ್ದು ದ.ಕ ಜಿಲ್ಲಾ ಪಂಚಾಯತಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಆನಂದ್.ಕೆ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುತ್ತಾರೆ. ಕಾಲೇಜಿನ ಆಡಳಿತ ಮಂಡಳಿಯ ನಿರ್ದೇಶಕಿ ಡಾ.ಯಶೋದಾ ರಾಮಚಂದ್ರ ಸಮಾರಂಭದ ಅಧ್ಯಕ್ಷತೆ ವಹಿಸುತ್ತಾರೆ.
ದಿನಾಂಕ 13.12.2023ರ ಬೆಳಿಗ್ಗೆ 9.30ಕ್ಕೆ ಗುತ್ತಿಗೆದಾರರಿಗೆ ಹಾಗೂ ಮೇಲ್ವಿಚಾರಕರಿಗೆ ಕಾರ್ಯಾಗಾರವು ನಡೆಯಲಿದ್ದು ಪುತ್ತೂರು ನಗರಸಭೆಯ ಆಯುಕ್ತ ಮಧು.ಎಸ್.ಮನೋಹರ್ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುತ್ತಾರೆ. ಕಾಲೇಜಿನ ಆಡಳಿತ ಮಂಡಳಿಯ ನಿರ್ದೇಶಕ ಸತ್ಯನಾರಾಯಣ ಭಟ್ ಸಮಾರಂಭದ ಅಧ್ಯಕ್ಷತೆ ವಹಿಸುತ್ತಾರೆ.
ದಿನಾಂಕ 15.12.2023ರ ಸಂಜೆ ಕಾರ್ಯಾಗಾರದ ಸಮಾರೋಪ ಸಮಾರಂಭ ನಡೆಯಲಿದ್ದು ಕಾಲೇಜಿನ ಆಡಳಿತ ಮಂಡಳಿಯ ಕೋಶಾಧಿಕಾರಿ ಮುರಳೀಧರ ಭಟ್ ಬಂಗಾರಡ್ಕ ಸಮಾರಂಭದ ಅಧ್ಯಕ್ಷತೆ ವಹಿಸುತ್ತಾರೆ.
ದಿನಾಂಕ 16.12.2023 ರಂದು ಶಿಬಿರಾರ್ಥಿಗಳೊಂದಿಗೆ ಸ್ಥಳೀಯ ವಿಶೇಷ ಕಾಮಗಾರಿಗಳ ವೀಕ್ಷಣೆ ನಡೆಯಲಿದೆ.
ಬೆಂಗಳೂರಿನ ಶಂಕರನಾರಾಯಣ ಗ್ರೂಪಿನ ಮುಖ್ಯಸ್ಥ ಸೆಲ್ವ ಗಣೇಶ್, ಎನ್‍ಐಟಿಕೆ ಸುರತ್ಕಲ್ಲಿನ ಪ್ರೊಫೆಸರ್ ಡಾ.ಬಾಬು ನಾರಾಯಣ್, ಪಿಡಬ್ಲ್ಯುಡಿ ಮಂಗಳೂರಿನ ಸುಪರಿಂಟೆಂಡೆಂಟಿಂಗ್ ಇಂಜಿನಿಯರ್ ಗೋಕುಲ್‍ದಾಸ್, ಪಿಡಬ್ಲ್ಯುಡಿ ಶಿವಮೊಗ್ಗದ ನಿವೃತ್ತ ಮುಖ್ಯ ಇಂಜಿನಿಯರ್ ಬಿ.ಟಿ.ಕಾಂತರಾಜ್, ಪಿಡಬ್ಲ್ಯುಡಿ ಧಾರವಾಡದ ನಿವೃತ್ತ ಮುಖ್ಯ ಇಂಜಿನಿಯರ್ ಎಂ.ನಾರಾಯಣ್ ಹಾಗೂ ಬೆಂಗಳೂರಿನ ಇಂಜಿನಿಯರ್ ನಾಗೇಶ್ ಪುಟ್ಟಸ್ವಾಮಿ ಸಂಪನ್ಮೂಲ ವ್ಯಕ್ತಿಗಳಾಗಿ ವಿವಿಧ ವಿಷಯಗಳ ಬಗ್ಗೆ ತಮ್ಮ ವಿಚಾರಧಾರೆಯನ್ನು ಹಂಚಿಕೊಳ್ಳಲಿದ್ದಾರೆ.
ಶಿಬಿರಾರ್ಥಿಗಳ ತಿಳುವಳಿಕೆಗಾಗಿ ನಿರ್ಮಾಣ ಕ್ಷೇತ್ರದಲ್ಲಿ ಬಳಸುವ ವಿವಿಧ ಸಾಮಗ್ರಿಗಳ ಮಳಿಗೆಗಳನ್ನು ಕಾಲೇಜಿನ ಆವರಣದಲ್ಲಿ ತೆರೆಯಲಾಗುವುದು ಎಂದು ಪ್ರಾಂಶುಪಾಲ ಡಾ.ಮಹೇಶ್‍ಪ್ರಸನ್ನ.ಕೆ ತಿಳಿಸಿದ್ದಾರೆ.

fdp 2023 civil1

fdp 2023 civil2

Sponsors

Related Articles

Back to top button