ಮುರುವ ಕೊಮ್ಮುಂಜೆ ಕೂಟೇಲು ರಸ್ತೆ – ಅವ್ಯವಸ್ಥೆ…

ಮಾಣಿಲ ಗ್ರಾಮದ ಮುಖ್ಯ ರಸ್ತೆಗಳಲ್ಲೊಂದು ಮುರುವ ಕೊಮ್ಮುಂಜೆ ಕೂಟೇಲು. ಸುಮಾರು ಇನ್ನೂರೈವತ್ತು ಮನೆಗಳಿಗೆ ಸಂಪರ್ಕ ಕಲ್ಪಿಸುತ್ತದೆ. ಮೂರು ಅಂಗನವಾಡಿ ಗಳು,ಆಂಚೆ ಕಚೀರಿ,ಗ್ರಾಮ ಪಂಚಾಯತ್,ಸಹಕಾರಿ ಸಂಘ,ಹಿರಿಯ ಪ್ರಾಥಮಿಕ ಶಾಲೆ, ಪ್ರೌಢಶಾಲೆ ,ಕರ್ನಾಟಕ ಬ್ಯಾಂಕ್ ಗ್ರಂಥಾಲಯ, ಗ್ರಾಮ ಆಡಳಿತಾಧಿಕಾರಿ ಕಛೇರಿ ಮುಂತಾದವು ಈ ರಸ್ತೆಗೆ ಹೊಂದಿಕೊಂಡಿವೆ.
ಪ್ರತಿದಿನ ಹತ್ತಾರು ವಾಹನಗಳು, ಶಾಲಾವಿದ್ಯಾರ್ಥಿಗಳು, ನಗರಕ್ಕೆ ಉದ್ಯೋಗ ಕ್ಕೆ ಮತ್ತು ಅನ್ಯ ಕೆಲಸಗಳಿಗೆ, ಆಸ್ಪತ್ರೆಗೆ ತೆರಳುವ ಮಂದಿ ಈ ರಸ್ತೆಯನ್ನೇ ಅವಲಂಬಿಸಬೇಕಾಗಿದೆ.
ಸುಮಾರು ಐದು ಕಿ.ಮೀ.ಇರುವ ಈ ರಸ್ತೆಯು ಮೂರು ಕಿ.ಮೀ.ಯಷ್ಟು ಹಂತ ಹಂತವಾಗಿ ಡಾಮರೀಕರಣಗೊಂಡಿದೆ. ಮುರುವ ದಿಂದ ಅರಳತ್ತಡ್ಕ ದ ಸುಮಾರು ಒಂದೂವರೆ ಕಿ.ಮೀ.ವರೇಗೆ 2019 -20ರಲ್ಲಿ MPLAD ಅನುದಾನದ ಎಂಟು ಲಕ್ಷದಲ್ಲಿ ಪುನಃ ತೇಪೆ ಹಚ್ಚುವ ಕೆಲಸ ಜರುಗಿತ್ತು. ಈಗ ಈ ಭಾಗದ ರಸ್ತೆಯು ಸಂಪೂರ್ಣ ಹೊಂಡ ಗುಂಡಿ ಬಿದ್ದು ನಾದುರಸ್ತಿಯಲ್ಲಿದೆ. ವಾಹನ ಸವಾರರು,ಪಾದಚಾರಿಗಳು, ವಿದ್ಯಾರ್ಥಿ ಗಳು ನಿತ್ಯ ಸಂಕಷ್ಟ ಅನುಭವಿಸುತ್ತಿದ್ದಾರೆ.ಮಳೆಗಾಲವಂತೂ ಅಸಹನೀಯವೆನಿಸಿದೆ. ಜನಪ್ರತಿನಿಧಿಗಳು ಇತ್ತ ಗಮನ ಹರಿಸಬೇಕಾಗಿದೆ.

whatsapp image 2023 07 31 at 4.44.03 pm (2)
whatsapp image 2023 07 31 at 4.44.03 pm (1)
Sponsors

Related Articles

Back to top button