ಪೇರಡ್ಕ ಉರೂಸ್ – ಸಹಬಾಳ್ವೆಯ ದಾಂಪತ್ಯ ಜೀವನವನ್ನು ನಡೆಸಿ – ಖ್ಯಾತ ವಿದ್ವಾಂಸ ಕಿಚೇರಿ ಗಫೂರ್ ಮೌಲವಿ…

ಸುಳ್ಯ: ವಿವಾಹವಾದ ಬಳಿಕ ದಾಂಪತ್ಯ ಜೀವನವು ಸಹಬಾಳ್ವೆಯಿಂದ ಕೂಡಿರಬೇಕು ಪತಿ ಪತ್ನಿಯರೊಳಗೆ ಭಿನ್ನಾಭಿಪ್ರಾಯವನ್ನು ಮಾಡದೇ ಅನ್ಯೋನತೆಯಿಂದ ಮತ್ತು ತಮ್ಮ ವಯೋವೃದ್ಧ ತಂದೆ-ತಾಯಿಯರನ್ನು ದೂರಮಾಡದೆ ಒಟ್ಟಿಗೆ ಸಹಬಾಳ್ವೆ ಜೀವನವನ್ನು ನಡೆಸಬೇಕೆಂದು ಖ್ಯಾತ ವಿದ್ವಾಂಸ ಕಿಚೇರಿ ಅಬ್ದುಲ್ ಗಫೂರ್ ಮೌಲವಿ ಹೇಳಿದರು.
ಅವರು ಫೆಬ್ರವರಿ 19 ರಂದು ತೆಕ್ಕಿಲ್ ಮಹಮ್ಮದ್ ಹಾಜಿ ವೇದಿಕೆಯಲ್ಲಿ ನಡೆದ ಪೇರಡ್ಕ ವಲಿಯುಲ್ಲಾಹಿ ದಗಾ ಶರೀಫ್ ನಲ್ಲಿ ನಡೆದ ಉರೂಸ್ ನ 2 ನೇ ದಿನದ ಧಾರ್ಮಿಕ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮುಹಿದ್ಧೀನ್ ಜುಮಾ ಮಸೀದಿ ಅಧ್ಯಕ್ಷ ಆಲಿಹಾಜಿ ಅಧ್ಯಕ್ಷತೆ ವಹಿಸಿದರು. ಅರಂತೋಡು ಜುಮಾಮಸೀದಿ ಖತೀಬರಾದ ಅಲ್ ಹಾಜ್ ಇಸಾಕ್ ಬಾಖವಿ ಕಾರ್ಯಕ್ರಮ ಉದ್ಘಾಟಿಸಿದರು. ಸ್ಥಳೀಯ ಖತೀಬರಾದ ರಿಯಾಝ್ ಫೈಝಿ ಎಮ್ಮೆಮಾಡು ದುವಾ ನೆರವೇರಿಸಿದರು.
ಮುಖ್ಯ ಅತಿಥಿಗಳಾಗಿ ತೆಕ್ಕಿಲ್ ಪ್ರತಿಷ್ಠಾನದ ಅಧ್ಯಕ್ಷ ಹಾಗೂ ಪೇರಡ್ಕ ಮುಹಿದ್ಧೀನ್ ಜುಮಾಮಸೀದಿ ಗೌರವಾಧ್ಯಕ್ಷ ಟಿ.ಎಂ.ಶಹೀದ್ ತೆಕ್ಕಿಲ್, ಸಂಪಾಜೆ ಗ್ರಾ.ಪಂ. ಅಧ್ಯಕ್ಷ ಜಿ.ಕೆ.ಹಮೀದ್ ಗೂನಡ್ಕ, ಕೊಯನಾಡು ಜುಮಾಮಸೀದಿ ಖತೀಬ್ ಮಹ್ಮದ್ ಅಶ್ರಫಿ ಬದ್ರ್ ಜುಮಾ ಮಸೀದಿ ಖತೀಬರಾದ ಜುಮಾಲುದ್ಧೀನ್ ಅಮಾನಿ, ಸಜ್ಜನ ಪ್ರತಿಷ್ಠಾನದ ಅಧ್ಯಕ್ಷ ಡಾ| ಉಮ್ಮರ್ ಬೀಜದ ಕಟ್ಟೆ, ಮದರಸ ಮ್ಯಾನೇಜ್ ಮೆಂಟ್ ಕೋಶಾಧಿಕಾರಿ ಹಮೀದ್ ಹಾಜಿ ಬಿಳಿಯಾರ್, ಅಬ್ದುಲ್ ರಜಾಕ್ ಕರಾವಳಿ ಸುಳ್ಯ, ನಗರ ಪಂಚಾಯತ್ ಸದಸ್ಯ ಕೆ.ಎಸ್. ಉಮ್ಮರ್, ಸಂಪಾಜೆ ಗ್ರಾ.ಪಂ. ಸದಸ್ಯ ಎಸ್.ಕೆ. ಹನೀಫ್, ಪೆರಾಜೆ ಜುಮಾಮಸೀದಿ ಅಧ್ಯಕ್ಷ ಶಾಹಿದ್, ಅರಂತೋಡು ಅನ್ವಾರುಲ್ ಹುಧಾ ಅಸೋಸಿಯೇಶನ್ ಅಧ್ಯಕ್ಷ ಅಬ್ದುಲ್ ಮಜೀದ್, ಸುಳ್ಯ ಅನ್ಸಾರಿಯಾ ಯತೀಮ್ ಖಾನ ಕಾರ್ಯದರ್ಶಿ ಲತೀಫ್ ಹರ್ಲಡ್ಕ ಮೊದಲಾದವರು ಉಪಸ್ಥಿತರಿದ್ದರು. ಸಹಾಯಕ ಅಧ್ಯಾಪಕ ನೂರುದ್ದೀನ್ ಸ್ವಾಗತಿಸಿ ವಂದಿಸಿದರು.

Sponsors

Related Articles

Back to top button