ಬಂಟ್ವಾಳ- ದಕ್ಷಿಣ ಕನ್ನಡ ಜಿಲ್ಲೆಯ ಬಿಜೆಪಿ ರೈತ ಮೋರ್ಚಾದ ಬೃಹತ್ ಸಮಾವೇಶ…

ಬಂಟ್ವಾಳ: ಬಂಟ್ವಾಳ ಕ್ಷೇತ್ರದ ಮತದಾರರು ನೀಡಿದ ಪ್ರತಿಯೊಂದು ಮತಕ್ಕೂ ನ್ಯಾಯ ಸಿಗುವ ಕೆಲಸವನ್ನು ಅತ್ಯಂತ ಪ್ರಾಮಾಣಿಕ ಪ್ರಯತ್ನದ ಮೂಲಕ ಮಾಡಿದ್ದೇನೆ ಎಂಬ ಆತ್ಮ ತೃಪ್ತಿ ಇದೆ ಎಂದು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಹೇಳಿದರು.
ಅವರು ಬಂಟ್ವಾಳ ಮಂಡಲದ ವತಿಯಿಂದ ಬಿಸಿರೋಡಿನ ಸ್ಪರ್ಶ ಕಲಾ ಮಂದಿರದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಬಿಜೆಪಿ ರೈತ ಮೋರ್ಚಾದ ಬೃಹತ್ ಸಮಾವೇಶದಲ್ಲಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಪಾದಯಾತ್ರೆ ಯಲ್ಲಿ ಅಭೂತಪೂರ್ವ ಬೆಂಬಲ ಪ್ರೀತಿ ಸಿಕ್ಕಿದೆ ಅದು ನನಗೆ ಸಿಕ್ಕಿದ ದೊಡ್ಡ ಆಸ್ತಿ ಎಂದು ಸಂತಸ ವ್ಯಕ್ತಪಡಿಸಿದರು.ಯಡಿಯೂರಪ್ಪ ಅವರು ಸರಕಾರ ರಚನೆ ಮಾಡಿದ ಫಲವಾಗಿ ಬಂಟ್ವಾಳ ಕ್ಷೇತ್ರದಲ್ಲಿ ಹಿಂದೆಂದಿಗಿಂತಲೂ ಅಧಿಕವಾಗಿ ಅಭೂತಪೂರ್ವ ಅಭಿವೃದ್ಧಿ ಕಾಮಗಾರಿಗಳನ್ನು ನಡೆಸಲು ಸಾಧ್ಯವಾಯಿತು ಎಂದು ಅವರಿಗೆ ಅಭಿನಂದನೆ ಸಲ್ಲಿಸಿದರು.
ಕೋವಿಡ್ ಮಹಾಮಾರಿಯ ಸಂದರ್ಭದಲ್ಲಿ ಒಂದು ಲಕ್ಷ ಕೋಟಿ ರೂ ಅನುದಾನವನ್ನು ನರೇಗದ ಮೂಲಕ ಕೃಷಿಕರಿಗೆ ನೀಡಿದ ಪರಿಣಾಮವಾಗಿ ಕೋವಿಡ್ ಬಳಿಕ ದೇಶದ ಆರ್ಥಿಕ ಪರಿಸ್ಥಿತಿ ಸ್ಥಿರವಾಯಿತು ಎಂಬುದನ್ನು ಉಲ್ಲೇಖ ಮಾಡಿದರು.
ಬಂಟ್ವಾಳದಲ್ಲಿ 24496 ಕೃಷಿಕರಿಗೆ ರೈತ ಕಿಸಾನ್ ಸನ್ಮಾನ್ ಯೋಜನೆ, 21 ಕೋಟಿ ರೂ. ಫಸಲ್ ಬಿಮಾ ಯೋಜನೆ ಯ ಮೂಲ ಕ ಸಿಕ್ಕಿದೆ.13 ಕೋಟಿ ವೆಚ್ಚದಲ್ಲಿ ಜಕ್ರಿಬೆಟ್ಟು ಎಂಬಲ್ಲಿ ಕಿಂಡಿಅಣೆಕಟ್ಟು ಸಹಿತ ಸೇತುವೆ ನಿರ್ಮಾಣವಾಗಲಿದ್ದು, ಇದು ಈ ಭಾಗದ ರೈತರಿಗೆ ಅತ್ಯಂತ ಹೆಚ್ಚು ಪ್ರಯೋಜನವಾಗಲಿದೆ.

ಕಾರ್ಯಕ್ರಮವನ್ನು ಉದ್ಘಾಟಿಸಿ ದ ಜಿಲ್ಲಾ ಬಿಜೆಪಿ ಅಧ್ಯಕ್ಷ ಸುದರ್ಶನ ಮೂಡಬಿದರೆ ಅವರು ಮಾತನಾಡಿ, ಕೃಷಿ ಮತ್ತು ಋಷಿ ಪರಂಪರೆಯನ್ನು ಹೊಂದಿರುವ ಭಾರತ ದೇಶ ಕೃಷಿಯಲ್ಲಿ ಪರಿವರ್ತನೆಯನ್ನು ಹೊಂದಿದ್ದು, ಉನ್ನತ ಸಾಧನೆ ಮಾಡಿದ ಬಾರತದತ್ತ ಇಡೀ ಜಗತ್ತು ನೋಡುವಂತಿದೆ.ಇಸ್ರೇಲ್ ಮಾದರಿಯ ಕೃಷಿಯನ್ನು ಮಾಡುವ ದೇಶಗಳಿಗೆ ಇಸ್ರೇಲ್ ಗೆ ಕೃಷಿ ಪರಂಪರೆಯನ್ನು ನೀಡಿದ ದೇಶ ಭಾರತ ಎಂಬ ಸತ್ಯ ಗೊತ್ತಿರಬೇಕು ಎಂದರು.
ಕೃಷಿಕರು ಮಾಡಿದ ಕೃಷಿಯಿಂದಾಗಿ ಜಗತ್ತಿನಲ್ಲಿ ಎರಡು ಹೊತ್ತು ಊಟ ಮಾಡಿ ಚಿಂತೆಯಿಲ್ಲದಂತೆ ಮಲಗುವಂತೆ ಮಾಡಿದೆ.ಕೊರೊನಾ ಬಳಿಕ ದೇಶ ಆರ್ಥಿಕ ವಾಗಿ ಸದೃಢವಾಗಿ ಜಗತ್ತಿನಲ್ಲಿ ಅತ್ಯಂತ ಎತ್ತರಕ್ಕೆ ಮತ್ತೆ ಬೆಳೆಯಲು ಕೃಷಿಯಿಂದ ಮಾತ್ರ ಸಾಧ್ಯವಾಯಿತು ಎಂಬ ಸತ್ಯವನ್ನು ನಾವು ಎಂದೂ ಮರೆಯಬಾರದು ಎಂದರು.ಕೃಷಿಕನ ಬದುಕು ನಿಂತರೆ ದೇಶದ ಉಸಿರು ನಿಲ್ಲುತ್ತದೆ, ಎಂಬ ಉದ್ದೇಶದಿಂದ ಅನೇಕ ದಾಳಿಗಳು ನಡೆಯಿತು ಎಂದು ಅವರು ತಿಳಿಸಿದರು.
ಸೈನಿಕ ಮತ್ತು ಕೃಷಿಕ ಇಬ್ಬರು ನಿದ್ದೆ ಮಾಡಿದರೆ ದೇಶ ಉಳಿಯಲು ಸಾಧ್ಯವಿಲ್ಲ, ಅದಕ್ಕಾಗಿ ಪ್ರಧಾನಿ ಮೋದಿಯವರು ಜೈ ಜವಾನ್,ಜೈ ಕಿಸಾನ್ ಎಂಬ ಘೋಷಣೆ ಮಾಡಿದರು ಎಂದು ಅವರು ತಿಳಿಸಿದರು.
ಬಿಜೆಪಿ‌ ಆಡಳಿತಕ್ಕೆ ಬಂದ ಮೇಲೆ ಈವರೆಗೆ ಒಂದೇ ಒಂದು ಬಾರಿ ರೈತರ ಮೇಲೆ ಲಾಠಿ ಚಾರ್ಜ್ ನಡೆಯಲಿಲ್ಲ,ಗೊಬ್ಬರಕ್ಕಾಗಿ ಸರತಿ ಸಾಲಿನಲ್ಲಿ ನಿಲ್ಲುವ ಕೆಲಸ ಆಗಿಲ್ಲ, ಇದು ಬಿಜೆಪಿ ಸರಕಾರದ ಸಾಧನೆ.
ವಿವಿಧ ಯೋಜನೆಗಳ ಮೂಲಕ ಕೃಷಿಕರಿಗೆ ಕೋಟ್ಯಾಂತರ ರೂ.ಆರ್ಥಿಕ ನೆರವು ನೀಡುವ ಕೆಲಸ ,ಜೊತೆಗೆ ಕೃಷಿಕ ಆರ್ಥಿಕವಾಗಿ ಸದೃಡವಾಗುವಂತಹ ಕೆಲಸ ಬಿಜೆಪಿ ಸರಕಾರದ ಮೂಲಕ ನಡೆದಿದೆ ಎಂಬುದು ನಮಗೆ ಹೆಮ್ಮೆಯ ಸಂಗತಿ ಎಂದರು.
ಕೃಷಿ ಬಜೆಟ್ ನನ್ನು ವಿಧಾನ ಸಭೆಯಲ್ಲಿ ಪ್ರಥಮ ವಾಗಿ ಮಂಡಿಸಿದ ಮಾಜಿ ಮುಖ್ಯ ಮಂತ್ರಿ ಯಡಿಯೂರಪ್ಪ ಅವರಿಗೆ ಅಭಿನಂದನೆ ಸಲ್ಲಿಸಬೇಕಾಗಿದೆ ಎಂದು ಅವರು ತಿಳಿಸಿದರು.
ಕೃಷಿಕರು ನೆಮ್ಮದಿಯಿಂದ ಬದುಕಿದರೆ ಮಾತ್ರ ಗ್ರಾಮಗಳು ರಾಮರಾಜ್ಯವಾಗಬಹುದು,
ರೈತರ ಪರವಾಗಿರುವ ಬಿಜೆಪಿ ಸರಕಾರ ಮತ್ತೊಮ್ಮೆ ರಾಜ್ಯದಲ್ಲಿ ಸರಕಾರ ಬರಬೇಕು, ಈ ನಿಟ್ಟಿನಲ್ಲಿ ಸಂಕಲ್ಪ ಮಾಡುವ ಉದ್ದೇಶಕ್ಕಾಗಿ ರೈತರ ಸಮಾವೇಶ ಕಾರ್ಯಕ್ರಮದಲ್ಲಿ ತಾವುಗಳು ಭಾಗಿಯಾಗಿದ್ದೀರಿ ಎಂದರು.
150 ಅಭ್ಯರ್ಥಿಗಳು ಗೆಲುವು ಸಾಧಿಸಬೇಕು ಎಂಬ ನಿಟ್ಟಿನಲ್ಲಿ ರಾಜ್ಯ ನಾಯಕರು ವಿಜಯಸಂಕಲ್ಪ ಯಾತ್ರೆ ಕೈಗೊಂಡಿದ್ದಾರೆ. ಇದರ ಜೊತೆಗೆ ಜಿಲ್ಲೆಯಲ್ಲಿ ಎಲ್ಲಾ ಸ್ಥಾನಗಳು ಬಿಜೆಪಿ ಪಾಲಾಗಬೇಕಿದೆ.
2023 ರಲ್ಲಿ ನಡೆಯುವ ಈ ಬಾರಿಯ ವಿಧಾನಸಭಾ ಚುನಾವಣೆ,
ಧರ್ಮ,ನಂಬಿಕೆ,ಸಂಸ್ಕೃತಿ, ಚಿಂತನೆಗಳು ಉಳಿಯಬೇಕಾದ ಚುನಾವಣೆಯಾಗಿದೆ.
ಅಧಿಕಾರಕ್ಕಾಗಿ ಗ್ಯಾರಂಟಿ ಕಾರ್ಡ್ ನ್ನು ಇಟ್ಟುಕೊಂಡು ಮನೆಮನೆಗೆ ತೆರಳುತ್ತಿದೆ, ಮನೆಮನೆಗೆ ಬರುವ ಕಾಂಗ್ರೇಸ್ ನವರಲ್ಲಿ ನೀವು ಅಧಿಕಾರಕ್ಕೆ ಬರುವ ಗ್ಯಾರಂಟಿ ನಿಮಗಿದೆಯಾ? ಎಂದು ಕೇಳಿ.ಹಾಗಾಗಿ ನಿಮ್ಮ ಗ್ಯಾರಂಟಿ ಕಾರ್ಡ್ ನ ಅವಶ್ಯಕತೆ ನಮಗಿಲ್ಲ ಎಂದು ಹೇಳಬೇಕು ಎಂದು ಅವರು ಕಾರ್ಯಕರ್ತರಿಗೆ ಮನವಿ ಮಾಡಿದರು.

ಕೃಷಿಯಲ್ಲಿ ದೊಡ್ಡ ಸಾಧನೆ ಮಾಡಿದ ಕಾರ್ಯಕ್ರಮದ ಸಂಪೂರ್ಣ ಜವಬ್ದಾರಿ ವಹಿಸಿದ್ದ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರಿಗೆ ವಿಶೇಷವಾಗಿ ಅಭಿನಂದನೆ ಸಲ್ಲಬೇಕು ಎಂದರು.

ವಿಧಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್ ಮಾತನಾಡಿ, ಅಭಿವೃದ್ದಿಯ ಶಕೆ ಪ್ರಾರಂಭವಾಗಿದ್ದು ಜನರು ಬಿಜೆಪಿಯತ್ತ ಆಕರ್ಷಣೆಯಾಗಿದ್ದಾರೆ.
ಕಾಂಗ್ರೇಸ್ ಹತಾಶೆಯಿಂದ ಚುನಾವಣೆ ಬಂದಾಗ ಅಧಿಕಾರದ ಆಸೆಯಿಂದ ಸುಳ್ಳು ಆಶ್ವಾಸನೆಗಳು ನೀಡಲು ಪ್ರಾರಂಭಿಸಿದೆ.
ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ ಮೂಡಬಿದರೆ ಅವರು ಹಿಂಗಾರವನ್ನು ಅರಳಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.ಕಾರ್ಯಕ್ರಮಕ್ಕೆ ಆಗಮಿಸಿದ ಅತಿಥಿಗಳಿಗೆ ಬೆಲ್ಲ ನೀರು, ಸಾಲು ನೀಡಿ ಗೌರವಿಸಿದರು.
ವೇದಿಕೆಯಲ್ಲಿ ಕಿಯೋನಿಕ್ಸ್ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ, ಮಾಜಿ ಶಾಸಕರುಗಳಾದ ಎ.ರುಕ್ಮಯ ಪೂಜಾರಿ, ಕೆ. ಪದ್ಮನಾಭ ಕೊಟ್ಟಾರಿ, ರಾಜ್ಯ ನೀರು ಸರಬರಾಜು, ಒಳಚರಂಡಿ ನಿಗಮದ ನಿರ್ದೇಶಕಿ ಸುಲೋಚನ ಜಿ.ಕೆ.ಭಟ್ ಬಂಟ್ವಾಳ ಮಂಡಲದ ಅಧ್ಯಕ್ಷ ದೇವಪ್ಪ ಪೂಜಾರಿ, ಜಿಲ್ಲಾ ಬಿಜೆಪಿ ಕಾರ್ಯದರ್ಶಿ ರಾಮ್ ದಾಸ ಬಂಟ್ವಾಳ, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಕೊರಗಪ್ಪ ನಾಯ್ಕ್ ,ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುದೀರ್ , ರೈತ ಮೋರ್ಚಾದ ಪ್ರಭಾರಿ ಕೇಶವ ಭಟ್ ಮುಳಿಯ, ಮೋರ್ಚಾಗಳ ಜಿಲ್ಲಾ ಸಂಯೋಕ ಈಶ್ವರ ಕಟೀಲು , ಜಿಲ್ಲಾ ಮಾದ್ಯಮ ಪ್ರಮುಖ್ ಸಂದೇಶ್ ಶೆಟ್ಟಿ, ರೈತ ಮೋರ್ಚಾದ ಬಂಟ್ವಾಳ ಮಂಡಲದ ಅಧ್ಯಕ್ಷ ವಿಶ್ವನಾಥ ಪೂಜಾರಿ,ಮೂಡಬಿದರೆ ರೈತ ಮೋರ್ಚಾದ ಅಧ್ಯಕ್ಷ ಸೋಮನಾಥ, ಬೆಳ್ತಂಗಡಿ ರೈತ ಮೋರ್ಚಾದ ಅಧ್ಯಕ್ಷ ಜಯಂತ ಗೌಡ, ರೈತ ಮೋರ್ಚಾದ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ವಸಂತ ಅಣ್ಣಳಿಕೆ, ರಾಘವೇಂದ್ರ ಭಟ್, ಮಂಡಲದ ಚುನಾವಣಾ ಪ್ರಭಾರಿ ರವಿ ಶಂಕರ್ ಮಿಜಾರು, ಮಂಗಳೂರು ವಿಭಾಗದ ಸಂಘಟನಾ ಕಾರ್ಯದರ್ಶಿ ಪ್ರಸಾದ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.
ಪ್ರಸ್ತಾವಿಕವಾಗಿ ಮಾತನಾಡಿದ ಜಿಲ್ಲಾ ರೈತ ಮೋರ್ಚಾದ ಅಧ್ಯಕ್ಷ ರಾಧಕೃಷ್ಣ ಬೊಳ್ಳೂರು ಅವರು ಅತಿಥಿಗಳನ್ನು ಸ್ವಾಗತಿಸಿದರು. ರೈತ ಮೋರ್ಚಾದ ಜಿಲ್ಲಾ ಉಪಾಧ್ಯಕ್ಷ ಮಹೇಶ್ ಕುಮಾರ್ ಶೆಟ್ಟಿ ಮೇನಾಲ ವಂದಿಸಿದರು.
ಬಂಟ್ವಾಳ ಮಂಡಲದ ಪ್ರಧಾನ ಕಾರ್ಯದರ್ಶಿ ಡೊಂಬಯ್ಯ ಅರಳ ಕಾರ್ಯಕ್ರಮ ನಿರೂಪಿಸಿದರು.

whatsapp image 2023 03 23 at 1.12.21 pm
whatsapp image 2023 03 23 at 1.12.21 pm (1)
Sponsors

Related Articles

Back to top button