ಉಪ್ಪಿನಂಗಡಿ- ಕಂದಕಕ್ಕೆ ಉರುಳಿದ ಕಾರು;ಪ್ರಯಾಣಿಕರಿಗೆ ಗಾಯ…

ಉಪ್ಪಿನಂಗಡಿ: ಬೆಂಗಳೂರಿನಿಂದ ಉಡುಪಿ ಸಮೀಪದ ಶಿರ್ವಕ್ಕೆ ಬರುತ್ತಿದ್ದ ಕಾರು ಇಲ್ಲಿನ ಪಂಜಾಳ ಸಮೀಪ 50 ಅಡಿ ಆಳದ ಕಂದಕ್ಕೆ ಉರುಳಿ ಬಿದ್ದ ಘಟನೆ ಇಂದು ಬೆಳಿಗ್ಗೆ ನಡೆದಿದೆ.

ಉಡುಪಿ ಶಿರ್ವದ ನವೀನ್ ಮತ್ತು ಕುಟುಂಬ ಬೆಂಗಳೂರಿನಿಂದ ಊರಿಗೆ ಹೊರಟಿತ್ತು. ಬೆಳಿಗ್ಗೆ 8 ಗಂಟೆ ಸುಮಾರಿಗೆ ಅವಗಢ ನಡೆದಿದ್ದು, ಕಾರು ಸಂಪೂರ್ಣ ನುಜ್ಜು ಗುಜ್ಜಾಗಿದೆ.ನವೀನ, ಇಬ್ಬರು ಮಹಿಳೆಯರು ಮತ್ತು ಇಬ್ಬರು ಮಕ್ಕಳು ಕಾರಿನಲ್ಲಿದ್ದು, ಸಣ್ಣಪುಟ್ಟ ಗಾಯಗಳಿಂದ ಪಾರಾಗಿದ್ದಾರೆ. ಸ್ಥಳಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಪುತ್ತೂರು ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

Sponsors

Related Articles

Leave a Reply

Your email address will not be published. Required fields are marked *

Back to top button