ಯೆನೆಪೋಯ ತಾಂತ್ರಿಕ ಮಹಾವಿದ್ಯಾಲಯ – ಸಂಪರ್ಕ ಸಾಧನದ ಮಾಹಿತಿ ಅಭಿಯಾನ…

ಮೂಡುಬಿದಿರೆ : ಅಂತರ್ಜಾಲ ಎನ್ನುವುದು ಜಾಲಬಂಧಗಳ ನೆಟವರ್ಕ್ ಆಗಿದೆ ಇದು ವಿಶ್ವವ್ಯಾಪಕವಾಗಿದ್ದು ಮಿಲಿಯ ಸಂಖ್ಯೆಯಲ್ಲಿ ಸ್ಥಳೀಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ನೆಟವರ್ಕ್ ಗಳ ಸಂಪರ್ಕ ಸಾಧನವಾಗಿದೆ. ಈ ನಿಟ್ಟಿನಲ್ಲಿ ಯೆನೆಪೋಯ ತಾಂತ್ರಿಕ ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನಾ ಘಟಕದ ವತಿಯಿಂದ ಸಂಪರ್ಕ ಸಾಧನದ ಅಭಿಯಾನ ಕಾರ್ಯಕ್ರಮ ಫೆ. 28 ರಂದು ಬಂಗಬೆಟ್ಟು ಸರಕಾರಿ ಪ್ರೌಢಶಾಲೆ ಯಲ್ಲಿ ಹಮ್ಮಿಕೊಳ್ಳಲಾಯಿತು.
ಈ ಕಾರ್ಯಕ್ರಮದ ಉದ್ಘಾಟನೆಯನ್ನು ಶಾಲೆಯ ಶಿಕ್ಷಕಿ ಶ್ರೀಮತಿ ಕಾಂಚನ ಇವರು ನೆರವೇರಿಸಿದರು. ಯೆನೆಪೋಯ ತಾಂತ್ರಿಕ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕಿ ಪ್ರೊ. ದೀಕ್ಷಾ ಮತ್ತು ಎನ್ ಎಸ್ ಎಸ್ ಸ್ವಯಂ ಸೇವಕರು ಜಿ-ಮೈಲ್, ಎಕ್ಸೆಲ್ , ಗೂಗಲ್ ಡ್ರೈವ್, ಗೂಗಲ್ ಫಾರ್ಮ್ ಮತ್ತು ಇತರ ಸಂಪರ್ಕ ಸಾಧನದ ಮಾಹಿತಿಯನ್ನು ಪ್ರತ್ಯಕ್ಷವಾಗಿ ವಿದ್ಯಾರ್ಥಿಗಳಿಗೆ ತಿಳಿಸಿದರು. ಈ ಕಾರ್ಯಕ್ರಮವನ್ನು ಪ್ರೊ. ಶ್ರೀನಿವಾಸ್ ಸಂಯೋಜನೆ ಮಾಡಿದ್ದರು.

Sponsors

Related Articles

Back to top button