ಸುದ್ದಿ

ಅನ್ಸಾರ್ ಸುವರ್ಣ ಭವನ ಕಾಮಗಾರಿಗೆ ಚಾಲನೆ…

ಸುಳ್ಯ: ಕಳೆದ 50 ವರ್ಷಗಳಿಂದ ಸುಳ್ಯದಲ್ಲಿ ಸಾಮಾಜಿಕ, ಧಾರ್ಮಿಕ,ಶೈಕ್ಷಣಿಕ ಕ್ಷೇತ್ರದಲ್ಲಿ ಅಲ್ಪಸಂಖ್ಯಾತ ಮುಸ್ಲಿಂ ಸಮುದಾಯದ ಶ್ರೇಯೋಭಿವೃದ್ಧಿಗೆ ಸ್ಥಾಪನೆ ಗೊಂಡಿರುವ ಮುಸ್ಲಿಮೀನ್ ಅಸೋಸಿಯೇಶನ್ ಸುವರ್ಣ ಸಂಭ್ರಮದ ಸವಿನೆನಪಿಗೆ ನಿರ್ಮಿಸಲು ಉದ್ದೇಶಿಸಿರುವ ಅನ್ಸಾರ್ ಸುವರ್ಣ ಭವನ ಕಾಮಗಾರಿಗೆ ಸುಳ್ಯ ತಾಲೂಕು ಜಂಇಯ್ಯತ್ತುಲ್ ಉಲಮ ಅಧ್ಯಕ್ಷ ಅಸ್ಸಯ್ಯದ್ ಕುoಞ ಕೋಯಾ ತoಗಳ್ ಚಾಲನೆ ನೀಡಿದರು.
ಗಾಂಧಿನಗರ ಎಂಜೆಎಂ ಖತೀಬರಾದ ಅಲ್ಹಾಜ್ ಅಶ್ರಫ್ ಖಾಮಿಲ್ ಸಖಾಫಿ ದುಆ:, ಆಶೀರ್ವಚನಗೈದರು
ಗಾಂಧಿನಗರ ಜುಮಾ ಮಸೀದಿ ಅಧ್ಯಕ್ಷ ಹಾಜಿ ಕೆ. ಎಂ.ಮುಸ್ತಫ, ಅನ್ಸಾರುಲ್ ಮುಸ್ಲಿಮೀನ್ ಅಸೋಸಿಯೇಷನ್ ಅಧ್ಯಕ್ಷ ಶುಕೂರ್ ಹಾಜಿ, ಮಾಜಿ ಅಧ್ಯಕ್ಷರುಗಳಾದ ಹಾಜಿ ಕೆ. ಬಿ ಮಹಮ್ಮದ್, ಹಾಜಿ ಅಬ್ದುಲ್ ಹಮೀದ್ ಜನತಾ, ಹಾಜಿ ಅಬ್ದುಲ್ ಗಫಾರ್, ಕಾದರ್ ಹಾಜಿ ಪಾರೆ,ಮುಸ್ಲಿಂ ಸೆಂಟ್ರಲ್ ಕಮಿಟಿ ಸಂಘಟನಾ ಕಾರ್ಯದರ್ಶಿ ಎಸ್. ಸಂಶು ದ್ದೀನ್ ಅನ್ಸಾರ್ ಪದಾಧಿಕಾರಿಗಳಾದ ಎಸ್. ಪಿ. ಅಬೂಬಕ್ಕರ್, ಎನ್. ಎ. ಜುನೈದ್, ಬಿ. ಎಂ. ಹನೀಫ್, ಶಾಫಿ ಕುತ್ತಮೊಟ್ಟೆ, ಸಂಶುದ್ದೀನ್ ಕೆ. ಬಿ. ನಿರ್ದೇಶಕರುಗಳಾದ
ಅಬ್ದುಲ್ ಲತೀಫ್ ಎಂ ಕೆ ಕೆ. ಬಿ. ಇಬ್ರಾಹಿಂ, ಅಬ್ದುಲ್ ಬಶೀರ್ ಸಪ್ನಾ, ಸಿದ್ದೀಕ್ ಬಿ. ಎಂ. ಹಮೀದ್ ಚಾಯ್ಸ್, ನಗರ ಪಂಚಾಯಿತಿ ಸದಸ್ಯರುಗಳಾದ ಶರೀಫ್ ಕಂಠಿ, ರಿಯಾಜ್ ಕಟ್ಟೆ ಕ್ಕಾರ್ಸ್, ಗಾಂಧಿನಗರ ಜಮಾಅತ್ ಸಮಿತಿ ಪದಾಧಿಕಾರಿಗಳಾದ ಕೆ.ಬಿ. ಅಬ್ದುಲ್ ಮಜೀದ್,ಕೆ. ಎಂ.ಮಹಮ್ಮದ್ ಕೆಎಂಎಸ್,ಅನ್ಸಾರಿಯ ಎಜುಕೇಶನ್ ಸೆಂಟರ್ ಪದಾಧಿಕಾರಿಗಳಾದ ಅಬ್ದುಲ್ ಲತೀಫ್ ಹರ್ಲಡ್ಕ, ಅನ್ಸಾರ್ ಸದಸ್ಯರುಗಳಾದ ವಿ. ಕೆ. ಅಬೂಬಕ್ಕರ್ ಜಟ್ಟಿಪ್ಪಳ್ಳ, ಅಬ್ದುಲ್ ರಝಕ್ ಮೊದಲಾದವರು ಉಪಸ್ಥಿತರಿದ್ದರು.

Advertisement

Related Articles

Back to top button