ಸುದ್ದಿ

ಅಮ್ಮನ ಪಾದಪೂಜೆ ಮತ್ತು ಪಾಲಕರ ಸಭೆ…

ಬಂಟ್ವಾಳ: ಶ್ರೀರಾಮ ಶಿಶುಮಂದಿರ ಕಲ್ಲಡ್ಕದಲ್ಲಿ ಅಮ್ಮನ ಪಾದಪೂಜೆ ಮತ್ತು ಪಾಲಕರ ಸಭೆ ವೇದವ್ಯಾಸ ಸಭಾಂಗಣದಲ್ಲಿ ನಡೆಯಿತು.
ಶ್ರೀರಾಮ ಶಿಶುಮಂದಿರ ಕಲ್ಲಡ್ಕದಲ್ಲಿ ಒಂದು ವಿಶಿಷ್ಟ ಕಾರ್ಯಕ್ರಮ ಅಮ್ಮನ ಪಾದಪೂಜೆ. ಈಗಾಗಲೇ ಶಿಶುಮಂದಿರದಲ್ಲಿ ಶಿಕ್ಷಣ ಪಡೆಯುತ್ತಿರುವ ಪುಟಾಣಿಗಳು ತಮ್ಮಅಮ್ಮನ ಪಾದಪೂಜೆಯನ್ನು ಮಾಡಿದರು. ಅಮ್ಮಂದಿರನ್ನು ಬೆಂಚಿನ ಮೇಲೆ ಸಾಲಾಗಿ ಕುಳ್ಳಿರಿಸಿ ಕೇವಲ ಪಾದ ಮಾತ್ರ ಕಾಣುವಂತೆ ಪರದೆಯನ್ನುಕಟ್ಟಲಾಗಿತ್ತು. ಪುಟಾಣಿಗಳು ತಮ್ಮತಮ್ಮ ಅಮ್ಮನ ಪಾದವನ್ನೇ ನೋಡಿ ಗುರುತಿಸಿ ಅದರ ಪಕ್ಕದಲ್ಲಿಯೇ ಕುಳಿತುಕೊಂಡದ್ದು ವಿಶೇಷವಾಗಿತ್ತು. ನಂತರ ಪರದೆಯನ್ನು ಬಿಚ್ಚಲಾಗಿತ್ತು. ಪುಟಾಣಿಗಳು ಅವರ ಅಮ್ಮನ ಪಾದಗಳಿಗೆ ನೀರು ಹಾಕಿ ಅರಶಿನ ಕುಂಕುಮ ಹಚ್ಚಿ ಪುಷ್ಪವನ್ನು ಅರ್ಪಿಸಿ ಪಾದಪೂಜೆ ಮಾಡಿದರು. ಅಮ್ಮಂದಿರು ಮಕ್ಕಳಿಗೆ ಅಕ್ಷತೆ ಹಾಕಿ ಸಿಹಿಯನ್ನು ತಿನ್ನಿಸಿ ಆಶೀರ್ವದಿಸಿದರು.ಒಟ್ಟು 117 ಮಕ್ಕಳ ಅಮ್ಮಂದಿರು ಈ ಕಾರ್ಯಕ್ರಮದಲ್ಲಿ ತುಂಬಾ ಸಂತೋಷದಿಂದ ಭಾಗವಹಿಸಿದರು.
ಬಳಿಕ ನಡೆದ ಪಾಲಕರ ಸಭೆಯಲ್ಲಿ ಪಾಲಕರು ತಮ್ಮ ಮಕ್ಕಳಲ್ಲಿ ಆದ ಬದಲಾವಣೆಗಳನ್ನು ಮತ್ತು ಪಾದಪೂಜೆ ಕಾರ್ಯಕ್ರಮದ ಅನಿಸಿಕೆಗಳನ್ನು ಹಂಚಿಕೊಂಡರು. ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಡಾ. ಪ್ರಭಾಕರ ಭಟ್‍ ಇವರು ಪಾಲಕರಿಗೆ ಮಾರ್ಗದರ್ಶನ ಮಾಡಿದರು.
ಈ ಸಂದರ್ಭದಲ್ಲಿ ವಿದ್ಯಾಕೇಂದ್ರದ ಅಧ್ಯಕ್ಷರಾದ ಬಿ. ನಾರಾಯಣ ಸೋಮಾಯಾಜಿ, ಡಾ. ಕಮಲಾ ಭಟ್ ಹಾಗೂ ಆಡಳಿತ ಮಂಡಳಿ ಸದಸ್ಯರು ಉಪಸ್ಥಿತರಿದ್ದರು. ಶಿಶುಮಂದಿರದ ಪುಟಾಣಿಗಳು ಪ್ರಾರ್ಥನೆ ಮಾಡಿದರು. ಕಾರ್ಯಕ್ರಮವನ್ನು ಶ್ರೀಮತಿ ಗುಲಾಬಿ ಸ್ವಾಗತಿಸಿ, ಶ್ರೀಮತಿ ಶಾಂತಲಕ್ಷ್ಮೀ ವಂದಿಸಿ, ಶ್ರೀಮತಿ ಸಂಧ್ಯಾ ನಿರೂಪಿಸಿದರು.

Related Articles

Leave a Reply

Your email address will not be published.

Back to top button