ಸುದ್ದಿ

ಅ. 5ರಿಂದ ಸುಳ್ಯ ಶಾರದಾಂಬಾ ಉತ್ಸವ; ಆಮಂತ್ರಣ ಪತ್ರ ಬಿಡುಗಡೆ…..

ಸುಳ್ಯ: ಅ. 5ರಿಂದ ಸುಳ್ಯ ಶಾರದಾಂಬಾ ಉತ್ಸವವು ಶ್ರೀ ಚೆನ್ನಕೇಶವ ದೇವಾಲಯದ ಸಮೀಪ ನಡೆಯಲಿದ್ದು, ಈ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಡಾ.ಗಿರೀಶ್ ಭಾರದ್ವಾಜ್ ಬಿಡುಗಡೆಗೊಳಿಸಿದರು.
ಶ್ರೀ ಶಾರದಾಂಬಾ ದಸರಾ ಸೇವಾ ಟ್ರಸ್ಟ್, ಸಾರ್ವಜನಿಕ ಶ್ರೀ ಶಾರದಾಂಬಾ ಸೇವಾ ಸಮಿತಿ ಸುಳ್ಯ, ದಸರಾ ಉತ್ಸವ ಸಮಿತಿ ಸುಳ್ಯ ಇವುಗಳ ಆಶ್ರಯದಲ್ಲಿ ಪ್ರತೀ ವರ್ಷದಂತೆ ಈ ವರ್ಷ ಕೂಡಾ ದಸರಾ ಉತ್ಸವವನ್ನು ಆಚರಿಸಲಾಗುತ್ತದೆ.
ನಾಡಹಬ್ಬ ದಸರಾ ಆ.5ರಿಂದ 13ರ ತನಕ ನಡೆಯಲಿದ್ದು, ಕೊನೆಯ ದಿನ ವೈಭವದ ಶೋಭಾಯಾತ್ರೆ ನಡೆಯಲಿದೆ.

Related Articles

Leave a Reply

Your email address will not be published.

Back to top button