ಸುದ್ದಿ

ಆಲೆಟ್ಟಿಯ ಕಸ್ತೂರಿಬಾ ಮಹಿಳಾ ಮಂಡಲದ ವಾರ್ಷಿಕ ಮಹಾಸಭೆ…..

ಸುಳ್ಯ:ಕಸ್ತೂರಿಬಾ ಮಹಿಳಾ ಮಂಡಲ ಆಲೆಟ್ಟಿ ಇದರ ವಾರ್ಷಿಕ ಮಹಾಸಭೆಯು ಸೆ. 22ರಂದು ಕಸ್ತೂರಿಬಾ ಮಹಿಳಾ ಮಂಡಲದ ಕಟ್ಟಡದಲ್ಲಿ ಜರಗಿತು.
ಶ್ರೀಮತಿ ವಾರಿಜಾ ವೇಣುಗೋಪಾಲ್ ಅಧ್ಯಕ್ಷತೆಯನ್ನು ವಹಿಸಿದ್ದರು. ವೇದಿಕೆಯಲ್ಲಿ ಗೌರವಾಧ್ಯಕ್ಷೆ ಶ್ರೀಮತಿ ಸುಮನಾ ಕೃಪಾಶಂಕರ್, ಗೌರವ ಸಲಹೆಗಾರರಾದ ಶ್ರೀಮತಿ ಗೀತಾ ಸುಧಾಮ ಆಲೆಟ್ಟಿ, ಪೂರ್ವಾಧ್ಯಕ್ಷರುಗಳಾದ ಜಯಲಕ್ಷ್ಮಿ ಜನಾರ್ಧನ, ಸುಂದರಿ ಮೊರಂಗಲ್ಲು, ಕಾರ್ಯದರ್ಶಿ ಶ್ರೀಮತಿ ಪೂರ್ಣಿಮಾ ಕುಂಚಡ್ಕ, ಖಜಾಂಜಿ ಶ್ರೀಮತಿ ಜಾನಕಿ ಬಾಲಕೃಷ್ಣ ಮೈಂದೂರು ಉಪಸ್ಥಿತರಿದ್ದರು. ವಿವಿಧ ಸ್ಪರ್ಧೆಗಳ ವಿಜೇತರಿಗೆ ಶ್ರೀಮತಿ ಜಾನಕಿ ವೆಂಕಪ್ಪ ಬಹುಮಾನ ವಿತರಿಸಿದರು. ಶ್ರೀಮತಿ ಸರೋಜಿನಿ ಕುಡೆಕಲ್ಲು ಪ್ರಾರ್ಥಿಸಿ, ಸರಸ್ವತಿ ಸಿ.ಕೆ. ವಂದಿಸಿ, ಜಾನಕಿ ಬಾಲಕೃಷ್ಣ ಮೈಂದೂರು ಕಾರ್ಯಕ್ರಮ ನಿರೂಪಿಸಿದರು.

Related Articles

Leave a Reply

Your email address will not be published. Required fields are marked *

Back to top button