ಸುದ್ದಿ

ಎಸ್ಸೆಸ್ಸೆಫ್ ಕಲ್ಲುಗುಂಡಿ – ನೂತನ ಅಧ್ಯಕ್ಷರಾಗಿ ಮುಹಮ್ಮದ್ ಅಲಿ ಆಯ್ಕೆ…

ಪ್ರಧಾನ ಕಾರ್ಯದರ್ಶಿಯಾಗಿ ರುನೈಝ್, ಕೋಶಾಧಿಕಾರಿಯಾಗಿ ಆಶಿಕ್ ಕೆ ಎಚ್ ಆಯ್ಕೆ…ಸುಳ್ಯ: ಎಸ್ಸೆಸ್ಸೆಫ್ ಕಲ್ಲುಗುಂಡಿ ಶಾಖೆಯ ವಾರ್ಷಿಕ ಮಹಾಸಭೆಯು ಜ.29 ರಂದು ಸುನ್ನೀ ಸೆಂಟರ್ ಕಲ್ಲುಗುಂಡಿಯಲ್ಲಿ ಶಾಖಾಧ್ಯಕ್ಷರಾದ ರಂಶಾದ್ ಕಲ್ಲುಗುಂಡಿಯವರ ಅಧ್ಯಕ್ಷತೆಯಲ್ಲಿ ನಡೆಯಿತು.
ರಾಜ್ಯ ಸಮಿತಿ ಸದಸ್ಯರಾದ ಎ.ಎಂ.ಫೈಝಲ್ ಝುಹ್‌ರಿ ಉದ್ಘಾಟಿಸಿದರು. ಎಸ್ಸೆಸ್ಸೆಫ್ ದ.ಕ ಈಸ್ಟ್ ಜಿಲ್ಲಾ ಅಧ್ಯಕ್ಷರಾದ ಎಫ್.ಹೆಚ್.ಮುಹಮ್ಮದ್ ಮಿಸ್ಬಾಹಿ ಮರ್ದಾಳ ರವರು ಸಂಘಟನಾ ತರಗತಿ ನಡೆಸಿಕೊಟ್ಟರು. ಎಸ್ಸೆಸ್ಸೆಫ್ ಸುಳ್ಯ ಸೆಕ್ಟರ್ ಅಧ್ಯಕ್ಷರಾದ ಜಾಬಿರ್, ವೀಕ್ಷಕರಾಗಿ ಆಗಮಿಸಿದ ಸುಳ್ಯ ಸೆಕ್ಟರ್ ನಾಯಕರಾದ ಬಶೀರ್ ಕಲ್ಲುಮುಟ್ಲು, ಇರ್ಫಾನ್ ಏಣಾವರ, ಉನೈಸ್ ಗೂನಡ್ಕ ರವರ ನೇತೃತ್ವದಲ್ಲಿ ಸಭೆ ನಡೆಯಿತು. ನೂತನ ವರ್ಷದ ನವಸಾರಥಿಗಳನ್ನು ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಮುಹಮ್ಮದ್ ಅಲಿ ಚಟ್ಟೆಕಲ್ಲು, ಪ್ರಧಾನ ಕಾರ್ಯದರ್ಶಿ ಯಾಗಿ ರುನೈಝ್ ಕೊಯನಾಡು, ಕೋಶಾಧಿಕಾರಿಯಾಗಿ ಆಶಿಕ್ ಕೆ ಎಚ್, ಕ್ಯಾಂಪಸ್ ಕಾರ್ಯದರ್ಶಿ ಯಾಗಿ ಮೌಸೂಫ್ ಕೊಯನಾಡು , ದಅವಾ ಕಾರ್ಯದರ್ಶಿಯಾಗಿ ಜವಾದ್ ಸಂಪಾಜೆ, ರೈಂಬೋ ಕಾರ್ಯದರ್ಶಿಯಾಗಿ ನೌಫಲ್ ಕಲ್ಲುಗುಂಡಿ, ಕ್ವಾಲಿಟಿ ಡೆವಲಪ್ಮೆಂಟ್ ಕಾರ್ಯದರ್ಶಿಯಾಗಿ ಸೆಲೀಕ್ ಕಲ್ಲುಗುಂಡಿ, ಕಲ್ಚರಲ್ ಕೌನ್ಸಿಲ್ ಕಾರ್ಯದರ್ಶಿಯಾಗಿ ನಜಾತ್ ಕಲ್ಲುಗುಂಡಿ, ರೀಡ್ ಪ್ಲಸ್ (ಪಬ್ಲಿಕೇಶನ್)ಕಾರ್ಯದರ್ಶಿಯಾಗಿ ಝಾಹಿರ್ ಸಂಪಾಜೆ, ಮೀಡಿಯಾ ಕಾರ್ಯದರ್ಶಿಯಾಗಿ ಹಸೈನ್ ಚಟ್ಟೆಕ್ಕಲ್ಲು, ವಿಸ್ಡಂ ಕಾರ್ಯದರ್ಶಿಯಾಗಿ ಸಿದ್ದೀಕ್ ಸಂಪಾಜೆ, ಸಮಿತಿ ಸದಸ್ಯರಾಗಿ ಸ್ವಾದಿಕ್ ಮಾಸ್ಟರ್, ರಂಶಾದ್ ಚಟ್ಟೆಕಲ್ಲು, ಜುನೈದ್ ಸಿ.ಎ ರವರನ್ನೂ ಆಯ್ಕೆ ಮಾಡಲಾಯಿತು. ಸ್ವಾದಿಕ್ ಮಾಸ್ಟರ್ ಸ್ವಾಗತಿಸಿ, ಕಾರ್ಯಕ್ರಮವನ್ನು ನಿರೂಪಿಸಿದರು. ನೂತನ ಪ್ರಧಾನ ಕಾರ್ಯದರ್ಶಿ ರುನೈಝ್ ಕೊಯನಾಡು ವಂದಿಸಿದರು. ಕೊನೆಯಲ್ಲಿ ಮೂರು ಸ್ವಲಾತ್ ನೊಂದಿಗೆ ಕಾರ್ಯಕ್ರಮ ಕೊನೆಗೊಂಡಿತು.

Advertisement

Related Articles

Back to top button