ಸುಳ್ಯ ಇನ್ನರ್ ವೀಲ್ ಕ್ಲಬ್ ನ ನೂತನ ಪದಾಧಿಕಾರಿಗಳ ಪದಗ್ರಹಣ…

ಸುಳ್ಯ: ಇನ್ನರ್ ವೀಲ್ ಕ್ಲಬ್ ಸುಳ್ಯ ಇದರ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ಪದಾಧಿಕಾರಿಗಳು ಮಾತ್ರ ಭಾಗವಹಿಸಿ, ಉಳಿದ ಸದಸ್ಯರೊಂದಿಗೆ ಆನ್ ಲೈನ್ ಮೂಲಕ ನಡೆಯಿತು.
ನಿಕಟ ಪೂರ್ವಾಧ್ಯಕ್ಷೆ ಡಾ.ಹರ್ಷಿತಾ ಪುರುಷೋತ್ತಮ್ ಸ್ವಾಗತಿಸಿ, 2019-20ನೇ ಸಾಲಿನ ಅನಿಸಿಕೆಯನ್ನು ತಿಳಿಸಿದರು.
ಕ್ಲಬ್ ನ ನೂತನ ಅಧ್ಯಕ್ಷೆ ಶ್ರೀಮತಿ ಜಯಮಣಿ ಮಾಧವ, ಕಾರ್ಯದರ್ಶಿಯಾಗಿ ಶ್ರೀಮತಿ ಪೂಜಾ ಸಂತೋಷ, ಉಪಾಧ್ಯಕ್ಷರಾಗಿ ಶ್ರೀಮತಿ ಸುಧಾ ಶ್ರೀಧರ್, ಖಜಾ0ಜಿಯಾಗಿ ಮಮತಾ ಸತೀಶ್, ಜೊತೆಕಾರ್ಯದರ್ಶಿಯಾಗಿ ಶ್ರೀಪ್ರಿಯ ಲೋಕೇಶ್, ಐಎಸ್ ಓ ಶ್ರೀಮತಿ ನಯನ ಹರಿಪ್ರಸಾದ್, ಎಡಿಟರ್ ಶ್ರೀಮತಿ ಸುಮ0ಗಲ ರವಿರಾಜ್ ಇವರಿಗೆ ಶ್ರೀಮತಿ ಮಮತಾ ದೇವ ಪದಪ್ರಧಾನವನ್ನು ನಡೆಸಿಕೊಟ್ಟರು. ಸುಳ್ಯ ರೋಟರಿ ಸ0ಸ್ಥೆಯ ಅಧ್ಯಕ್ಷ ಡಾ. ಗುರುರಾಜ್ ಕ್ಲಬ್ ನ ಬುಲೆಟಿನ್ ಬಿಡುಗಡೆಗೊಳಿಸಿ, ಶುಭಹಾರೈಸಿದರು.ಇನ್ನರ್ ವೀಲ್ ಕ್ಲಬ್ ಸದಸ್ಯೆ ಶ್ರೀಮತಿ ಮೀನಾ ರಾಮಕಜೆ ಪ್ರಾರ್ಥಿಸಿದರು. ಉಪಾಧ್ಯಕ್ಷೆ ಸುಧಾ ಶ್ರೀಧರ್ ವ0ದಿಸಿದರು.
ಸಮಾರ0ಭವನ್ನು ಎಲ್ಲ ರೋಟರಿ ಸದಸ್ಯರು ಮತ್ತು ಸಿಟಿ ರೋಟರಿ ಸದಸ್ಯರು ಹಾಗೂ ಇನ್ನರ್ ವೀಲ್ ಕ್ಲಬ್ ಸದಸ್ಯೆಯರು ಆನ್ ಲೈನ್ ಮೂಲಕ ವೀಕ್ಷಿಸಿದರು.

Sponsors

Related Articles

Leave a Reply

Your email address will not be published. Required fields are marked *

Back to top button