ಕಲೆ/ಸಾಹಿತ್ಯ

ಒಮ್ಮೆ ಹೇಳು…

ಹೇಳಲಾರೆಯೇಕೆ ಅನಘ
ನಿನ್ನ ಒಲವು ಯಾರಿಗೆ
ಎಷ್ಟು ಬಾರಿ ಕೇಳಿದರು
ಕಿವುಡನಂತೆ ನಟಿಸುವೆ

ಒಂದು ಮಾತು ಕೇಳಲೆಂದು
ಕಿವಿಯು ಕಾದು ಸೋತಿದೆ
ಪ್ರೀತಿ ಮಾತು ಹರಿದು ಬರಲು
ಬೊಗಸೆಯೊಡ್ಡಿ ಕಾದಿದೆ

ಮಾತಿನಲ್ಲಿ ವಿಷಯ ಮರೆಸಿ
ಕಾಡು ಹರಟೆ ಬೆರೆಸುವೆ
ಪ್ರೀತಿ ವಿಷಯ ಮಾಯವಾಗಿ
ಜಗದ ಮಾತು ನುಡಿಯುವೆ

ಎಲ್ಲಿ ಗಮನ ಎಲ್ಲೊ ಪಯಣ
ಹೇಳಲಾರೆಯೇತಕೆ
ದಿನದ ಪ್ರತಿಚಣವು ನಿನ್ನ
ನಗುವಿಗಾಗಿ ಕಾದಿಹೆ

ಬಲ್ಲೆ ನೀನು ನನ್ನೊಲವನು
ಕಾಣದಂತೆ ನಿಂತಿಹೆ
ಅರಿಯೆ ನಾನು ನಿನ್ನ ಹೊರತು
ನನ್ನ ನಾನೆ ಮರೆತಿಹೆ

b4136ba1 b587 4470 ac77 df846ff21d82 1 265x300
ರ: ಡಾ ವೀಣಾ ಎನ್ ಸುಳ್ಯ

Advertisement

Related Articles

Back to top button