ಸುದ್ದಿ

ಕರಾವಳಿ ಬಲವರ್ಧನೆಗೆ ಅತ್ಯಾಧುನಿಕ ‘ವರಾಹ’ ಹಡಗು ಸೇರ್ಪಡೆ…..

ಮಂಗಳೂರು: ಕರಾವಳಿಯಲ್ಲಿ ಕಣ್ಗಾವಲು, ಗಸ್ತು ಬಲಪಡಿಸುವುದಕ್ಕಾಗಿ ಅತ್ಯಾಧುನಿಕ ಕಾವಲು ಹಡಗು ‘ ವರಾಹ’ ಕೋಸ್ಟ್ ಗಾರ್ಡ್ ಕೇಂದ್ರಕ್ಕೆ ಅ.15 ರಂದು ಸೇರ್ಪಡೆಯಾಗಿದೆ.
ಈ ಹಡಗಿನಲ್ಲಿ 14 ಅಧಿಕಾರಿಗಳು ಮತ್ತು 89 ಸಿಬ್ಬಂದಿಗಳು ಇರಲಿದ್ದು, ಪಶ್ಚಿಮ ಕೋಸ್ಟ್ ಗಾರ್ಡ್ ಕಮಾಂಡಿಂಗ್ ಕೇಂದ್ರದಡಿ ಕಾರ್ಯ ನಿರ್ವಹಿಸಲಿದೆ. ತುರ್ತು ಸಂದರ್ಭಗಳಲ್ಲಿ 2 ಎಂಜಿನ್ ಗಳ ಹೆಲಿಕಾಪ್ಟರ್ ಹೊತ್ತೊಯ್ಯಬಲ್ಲ ಸಾಮರ್ಥ್ಯವುಳ್ಳ ‘ವರಾಹ’ 30 ಎಂ.ಎಂ ಗನ್, 12.7 ಎಂ.ಎಂ ಗನ್, ರಾಡಾರ್, ಸೆನ್ಸರ್, ಹೈಸ್ಪೀಡ್ ಬೋಟ್ ಗಳನ್ನು ಹೊಂದಿದೆ.ಎಲ್ ಆಂಡ್ ಟಿ ಕಂಪೆನಿಯು ಈ ನೂತನ ಹಡಗನ್ನು ನಿರ್ಮಿಸಿದೆ.

Related Articles

Leave a Reply

Your email address will not be published. Required fields are marked *

Back to top button