ಸುದ್ದಿ

ಕಲ್ಲಡ್ಕ – ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕ ಸಂಘದ ಜಿಲ್ಲಾ ಘಟಕ ರಚನೆ…

ಬಂಟ್ವಾಳ : ಕಲ್ಲಡ್ಕ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕರ ಸಂಘದ ಜಿಲ್ಲಾ ಘಟಕ ರಚನೆ ಮಾಡಲಾಯಿತು.
ಬಂಟ್ವಾಳ ತಾಲೂಕು ಮುಖ್ಯ ಶಿಕ್ಷಕ ಸಂಘದ ಅಧ್ಯಕ್ಷರಾದ ವೀರಕಂಬ ಮಜಿ ಶಾಲೆಯ ಮುಖ್ಯ ಶಿಕ್ಷಕ ನಾರಾಯಣ ಪೂಜಾರಿ ಎಸ್.ಕೆ ಅಧ್ಯಕ್ಷತೆ ವಹಿಸಿ , ಕಾರ್ಯಕ್ರಮವನ್ನು ಉದ್ಘಾಟಿಸಿ ಪ್ರಾಸ್ತಾವಿಕ ಮಾತನಾಡಿದರು .
ಜಿಲ್ಲಾ ಘಟಕಕ್ಕೆ ಈ ಕೆಳಗಿನ ಪದಾಧಿಕಾರಿಗಳು ಆಯ್ಕೆಯಾದರು.
ಗೌರವಾಧ್ಯಕ್ಷರಾಗಿ ಮಜಿ ಶಾಲೆಯ ಶ್ರೀ ನಾರಾಯಣ ಪೂಜಾರಿ ಎಸ್.ಕೆ. ಅಧ್ಯಕ್ಷರಾಗಿ ಶ್ರೀ ನಿಂಗರಾಜು ಕೆ.ಪಿ ಅಲಂಕಾರು ಕಡಬ, ಉಪಾಧ್ಯಕ್ಷರಾಗಿ ಶ್ರೀ ಬಾಬು ಟಿ ಹಿರೆಬಂಡಾಡಿ ಮತ್ತು ಶ್ರೀ ಮಹಾಲಿಂಗ ಬೆಳ್ತಂಗಡಿ, ಪ್ರಧಾನಕಾರ್ಯದರ್ಶಿ ಯಾಗಿ ಗೋಪಾಲಕೃಷ್ಣ ಬನ ಸುಳ್ಯ, ಜತೆ ಕಾರ್ಯದರ್ಶಿ ಯಾಗಿ ಶ್ರೀಮತಿ ಪ್ರೇಮ ಕೆ.ಕೆ.ಕಾವಳಮುಡೂರು, ಮತ್ತು ಶ್ರೀಮತಿ ಶಾರದಾ ಕಡಬ,
ಕೋಶಾಧಿಕಾರಿಯಾಗಿ ಶ್ರೀ ಪುಟ್ಟರಂಗನಾಥ ಟಿ ಬಂಟ್ವಾಳ, ಸಂಘಟನಾ ಕಾರ್ಯದರ್ಶಿಗಳಾಗಿ ಶ್ರೀಮತಿ ಸುನಂದಾ ಸುಳ್ಯ ಮತ್ತು ಸುರೇಶ್ ಬೆಳ್ತಂಗಡಿ,ನಿರ್ದೇಶಕರುಗಳಾಗಿ ಶಂಕರ್ ನಾರ್ಶಮೈದಾನ ಮತ್ತು ಮಹೇಶ್ ಕಡಬ ಆಯ್ಕೆಯಾದರು.
ಅಧ್ಯಕ್ಷರಾಗಿ ಆಯ್ಕೆಯಾದ ನಿಂಗರಾಜ್ ಕೆ.ಪಿ. ಯವರು ಮಾತನಾಡಿ ಎಲ್ಲಾ ಶಿಕ್ಷಕರು ಸಹಕಾರ ನೀಡುವಂತೆ ,ಮುಖ್ಯ ಶಿಕ್ಷಕರ ಬೇಡಿಕೆಗಳನ್ನು ಈಡೇರಿಸಲು ರಾಜ್ಯ ಸಂಘದೊಂದಿಗೆ ಸಂಪರ್ಕದಲ್ಲಿದ್ದುಕೊಂಡು ಕೆಲಸ ಮಾಡುತ್ತೇನೆಂಬ ಭರವಸೆಯನ್ನು ನೀಡಿದವರು .
ಕಾರ್ಯಕ್ರಮದಲ್ಲಿ ಕಲ್ಲಡ್ಕ ಶಾಲೆಯ ಮುಖ್ಯ ಶಿಕ್ಷಕ ಅಬುಬಕ್ಕರ್ ಅಶ್ರಫ್ ,ಸುಳ್ಯದ ತಾಲೂಕು ಅಧ್ಯಕ್ಷರಾದ ದೇವರಾಜ್ ,ಬೆಳ್ತಂಗಡಿ ತಾಲೂಕು ಅಧ್ಯಕ್ಷರಾದ ಬಾಲಕೃಷ್ಣ , ಪುತ್ತೂರು ತಾಲೂಕು ಕಾರ್ಯದರ್ಶಿ ತಾರನಾಥ್ ವೀರಮಂಗಲ, ಪಾಂಡವರಕಲ್ಲು ನವೀನಾ ಕುಮಾರಿ ,ಮದ್ವದ ಭವಾನಿ ,ಆನಂದ ಕೆಮ್ಮಾನುಪಲ್ಕೆ ,ಗೋಪಾಲ ಸುರಿಬೈಲು, ಶಿವರಾಮ್ ಭಟ್ ಮಿತ್ತನಡ್ಕ ,ಚಂದ್ರಾವತಿ ಮಾಣಿ ಮತ್ತು ಎಲ್ಲಾ ತಾಲೂಕಿನ ಪದಾಧಿಕಾರಿಗಳು ಉಪಸ್ಥಿತರಿದ್ದರು.
ನಾರಾಯಣ ಪೂಜಾರಿ ಎಸ್ ಕೆ ಸ್ವಾಗತಿಸಿ, ಪುಟ್ಟರಂಗನಾಥ ಟಿ ವಂದಿಸಿ,ಶ್ರೀಮತಿ ದೇವಕಿ ಮೋಂತಿಮಾರು ಮತ್ತು ದಾಮೋದರ ಸರ್ಕಳ ಕಾರ್ಯಕ್ರಮ ನಿರೂಪಿಸಿದರು.

Advertisement

Related Articles

Back to top button