ಸುದ್ದಿ

ಕಾರು ಅಫಘಾತ – ಸಹಾಯಕ ಪ್ರಾಧ್ಯಾಪಕ ದುರ್ಮರಣ…

ಮಂಗಳೂರು: ಕಾರು ಮತ್ತು ಕಂಟೆನೈರ್‌ ನಡುವೆ ನಡೆದ ಭೀಕರ ಅಪಘಾತದಲ್ಲಿ ಬಂಟಕಲ್ಲು ಶ್ರೀ ಮಧ್ವ ವಾದಿರಾಜ ಇಂಜಿನಿಯರಿಂಗ್ ಕಾಲೇಜಿನ ಮೆಕ್ಯಾನಿಕಲ್‌ ವಿಭಾಗದ ಹಿರಿಯ ಸಹಾಯಕ ಪ್ರಾಧ್ಯಾಪಕ ಅನಂತೇಶ್‌ ರಾವ್‌ ಎಂಬವರು ಮೃತಪಟ್ಟ ಘಟನೆ ಮಾ.17 ರಂದು ಹೊನ್ನಾವರ ಬಳಿ ನಡೆದಿದೆ.
ಮಧ್ಯಾಹ್ನ ಉಡುಪಿಯಿಂದ ಸೋದೆ ಮೂಲ ಮಠಕ್ಕೆ ತೆರಳುತ್ತಿದ್ದ ವೇಳೆ ಹೊನ್ನಾವರದ ಬಳಿ ಕಾರು ಕಂಟೆನೈರ್‌ ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಗಂಭೀರವಾಗಿ ಗಾಯಗೊಂಡ ಅನಂತೇಶ್‌ ರಾವ್ ಅವರು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದುಬಂದಿದೆ. ಮೃತರು ಪತ್ನಿ ಹಾಗೂ ಪುತ್ರನನ್ನು ಅಗಲಿದ್ದಾರೆ.

Advertisement

Related Articles

Back to top button