ಸುದ್ದಿ

ಕೇಂದ್ರ ಸಚಿವ ಮುರಳೀಧರನ್ ಗೆ ಕೊರೊನಾ ಸೋಂಕು ಶಂಕೆ !!! ….

ನವದೆಹಲಿ: ವಿಶ್ವವನ್ನೇ ಕಂಗೆಡಿಸಿರುವ ಮಾರಕ ಕೊರೊನಾ ವೈರಾಣು ಸೋಂಕು ಭೀತಿ ಕೇಂದ್ರ ಸಚಿವರನ್ನು ಆವರಿಸಿದೆ. ವಿದೇಶಾಂಗ ಖಾತೆ ರಾಜ್ಯ ಸಚಿವ ವಿ.ಮುರಳೀಧರನ್ ಅವರು ತಮ್ಮ ಖಾತೆ ಮತ್ತು ಇಲಾಖೆಯ ಉನ್ನತಾಧಿಕಾರಿಗಳೊಂದಿಗೆ ಯಾವುದೇ ಸಂಪರ್ಕ ಹೊಂದದೆ ಪ್ರತ್ಯೇಕವಾಗಿರುವುದರಿಂದ ಅವರಿಗೆ ಕೊರೊನಾ ಸೋಂಕು ತಗುಲಿರಬಹುದೆಂಬ ಶಂಕೆ ವ್ಯಕ್ತವಾಗುತ್ತಿದೆ.

ಆದರೆ, ಇದು ಇನ್ನೂ ಖಚಿತಪಟ್ಟಿಲ್ಲ. ವಿ.ಮುರಳೀಧರನ್ ಅವರು ವಿದೇಶಿ ಪ್ರವಾಸ ರದ್ದುಗೊಳಿಸಿದ್ದು, ಹೊರದೇಶಗಳಿಂದ ಬರುವ ನಿಯೋಗಗಳು ಮತ್ತು ವಿವಿಧ ದೇಶಗಳ ಪ್ರತಿನಿಧಿಗಳನ್ನು ಭೇಟಿ ಮಾಡುವ ಕಾರ್ಯಕ್ರಮವನ್ನು ರದ್ದುಗೊಳಿಸಿ, ತಮ್ಮನ್ನು ನಾವು ಪ್ರತ್ಯೇಕಗೊಳಿಸಿಕೊಂಡಿರುವುದು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

Related Articles

Leave a Reply

Your email address will not be published.

Back to top button