ಪೇರಡ್ಕ ಉರೂಸ್ ಸಮಾರಂಭಕ್ಕೆ ಚಾಲನೆ…

ಸುಳ್ಯ: ಚರಿತ್ರೆ ಪ್ರಸಿದ್ಧವಾದ ವಲಿಯುಲ್ಲಾಹಿ ದರ್ಗಾ ಶರೀಫಿನ ಗೂನಡ್ಕ ಉರೂಸ್ ಸಮಾರಂಭಕ್ಕೆ ಪೇರಡ್ಕ ಜುಮಾ ಮಸೀದಿ ಅಧ್ಯಕ್ಷರಾದ ಟಿ.ಎಂ ಶಹೀದ್ ತೆಕ್ಕಿಲ್ ಧ್ವಜಾರೋಹಣ ಮಾಡುವುದರ ಮೂಲಕ ಚಾಲನೆ ನೀಡಿದರು.
ಖಬರ್ ಝಿಯಾರತ್ ಮತ್ತು ದರ್ಗಾದಲ್ಲಿ ನಡೆದ ದುವಾದ ನೇತೃತ್ವವನ್ನು ಖತೀಬರಾದ ರಿಯಾಝ್ ಪೈಝಿ ಎಮ್ಮೆಮಾಡು ಅವರು ನೆರವೇರಿಸಿದರು. ಸಮಾರಂಭದಲ್ಲಿ ಎಂ.ಆರ್.ಡಿ.ಎ ಅಧ್ಯಕ್ಷ ಜಿ.ಕೆ ಹಮೀದ್ ಗೂನಡ್ಕ, ಮಾಜಿ ಅಧ್ಯಕ್ಷರಾದ ಹಾಜಿ ಇಬ್ರಾಹಿಂ ಮೈಲು ಕಲ್ಲು, ಆಲಿ ಹಾಜಿ, ಬಹು ಫತಾಹ್ ಖಾಸಿಮಿ, ಬಹು| ಹಸೈನಾರ್ ಮುಸ್ಲಿಯಾರ್, ಎಸ್.ಕೆ.ಎಸ್.ಎಸ್.ಎಫ್ ಅಧ್ಯಕ್ಷ ಮುನೀರ್ ದಾರಿಮಿ, ತೆಕ್ಕಿಲ್ ಮಹಮ್ಮದ್ ಕುಂಇ’ ಪೇರಡ್ಕ, ಪಾಂಡಿ ಅಬ್ಬಾಸ್, ಕೆ.ಎಂ ಉಸ್ಮಾನ್, ಟಿ.ಎ ರಜಾಕ್ ಹಾಜಿ ತೆಕ್ಕಿಲ್, ಹನೀಫ್ ತೆಕ್ಕಿಲ್, ಸಿನಾನ್ ಜಡ್ಜ್, ಎಂ.ಆರ್.ಡಿ.ಎ ದಫ್ ಉಸ್ತಾದ್ ಹಾಜಿ ರಜಾಕ್ ಅಡಿಮರಡ್ಕ, ಹನೀಫ್ ಮೊಟ್ಟೆಂಗಾರ್, ಸಾಧಿಕ್ ಪೊಲೀಸ್, ಟಿ.ಎಂ ಜಾವೇದ್ ತೆಕ್ಕಿಲ್, ಕೆ.ಎಂ ಮೂಸಾನ್ ಅರಂತೋಡು, ಅಬ್ದುಲ್ ಮಜೀದ್ ಅರಂತೋಡು, ಅಲಿ ಸೆಟ್ಯಡ್ಕ, ಟಿ.ಎಂ ಲತೀಫ್ ತೆಕ್ಕಿಲ್, ಟಿ.ಬಿ ಅಬ್ದುಲ್ಲ ತೆಕ್ಕಿಲ್, ಜಾಕಿರ್ ಪಾಲಡ್ಕ ಮೊದಲಾದವರು ಉಪಸ್ಥಿತರಿದ್ದರು. ಕೊನೆಯಲ್ಲಿ ದರ್ಗಾ ಶರೀಫಿನ ಅಲಂಕಾರ ನಡೆಯಿತು ಮತ್ತು ತೆಕ್ಕಿಲ್ ಕುಟುಂಬಸ್ಥರ ವತಿಯಿಂದ ಸಿಹಿ ಊಟವನ್ನು ವಿತರಣೆ ಮಾಡಲಾಯಿತು.

whatsapp image 2024 02 09 at 5.33.15 pm

whatsapp image 2024 02 09 at 5.33.18 pm

whatsapp image 2024 02 09 at 5.33.19 pm

Sponsors

Related Articles

Back to top button