ಸುದ್ದಿ

ಕೊರೊನಾ – ಮಾ.31ರವರೆಗೆ ಕರ್ನಾಟಕ ಲಾಕ್ ಡೌನ್….

ಬೆಂಗಳೂರು : ರಾಜ್ಯದಲ್ಲಿ ಕೊರೊನಾ ವೈರಸ್‌ ಸೋಂಕು ಪೀಡಿತರ ಸಂಖ್ಯೆ ಅಧಿಕವಾಗುತ್ತಿರುವ ಹಿನ್ನೆಲೆ, ಮಾ.31ರವರೆಗೆ ಕರ್ನಾಟಕ ಲಾಕ್ ಡೌನ್ ಮುಂದುವರಿಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ ಎಂದು ತಿಳಿದು ಬಂದಿದೆ.
ಈ ಹಿಂದೆ ಮಾ. 14ರಿಂದ ಶಾಲಾ ಕಾಲೇಜು, ಮಾಲ್‌ಗಳು, ಚಿತ್ರಮಂದಿರ ಹೀಗೆ ಜನಸಂದಣಿ ಸೇರುವ ಸಮಾರಂಭಗಳನ್ನು ನಿರ್ಬಂಧಿಸಿ ಸಿಎಂ ಬಿಎಸ್‌ವೈ ಅವರು ಆದೇಶ ನೀಡಿದ್ದರು.
ಸೋಂಕಿತರ ಸಂಖ್ಯೆ ಅಧಿಕವಾಗುತ್ತಿರುವ ಕಾರಣ ಇಂದು ನಡೆದ ಕ್ಯಾಬಿನೇಟ್‌‌ ಸಭೆಯಲ್ಲಿ ಈ ಆದೇಶವನ್ನು ಮಾ.31ರವರೆಗೆ ವಿಸ್ತರಿಸಲು ಆದೇಶಿಸಲಾಗಿದೆ.
ಇದರ ಜೊತೆಗೆ ಸೋಂಕು ನಿಯಂತ್ರಿಸಲು ನಾಲ್ಕು ಟಾಸ್ಕ್‌ ಫೋರ್ಸ್‌ಗಳನ್ನು ರಚಿಸಲಾಗಿದೆ. ಈ ಟಾಸ್ಕ್‌‌ ಫೋರ್ಸ್‌ಗಳನ್ನು ಡಾ. ಅಶ್ವಥ್ ನಾರಾಯಣ, ಶ್ರೀರಾಮುಲು, ಬಸವರಾಜ ಬೊಮ್ಮಾಯಿ ಹಾಗೂ ಕೆ. ಸುಧಾಕರ್ ಅವರ ನೇತೃತ್ವದಲ್ಲಿ ರಚಿಸಲಾಗಿದೆ.

Related Articles

Leave a Reply

Your email address will not be published. Required fields are marked *

Back to top button