ಸುದ್ದಿ

ಗರ್ಭನಿರೋಧಕಗಳ ಪೂರೈಕೆಯಲ್ಲಿ ವ್ಯತ್ಯಯ -70 ಲಕ್ಷ ಅನಪೇಕ್ಷಿತ ಗರ್ಭಧಾರಣೆ ???…

ಪಿಟಿಐ : ಕೊರೋನಾ ಲಾಕ್ ಡೌನ್ ಎಫೆಕ್ಟ್ ನಿಂದಾಗಿ ಗರ್ಭನಿರೋಧಕಗಳ ಪೂರೈಕೆಯಲ್ಲಿ ವ್ಯತ್ಯಯವಾದುದರಿಂದ ಸುಮಾರು 70 ಲಕ್ಷ ಮಹಿಳೆಯರು ಗರ್ಭ ಧರಿಸಲಿದ್ದು, ಜನಸಂಖ್ಯೆ ಸ್ಫೋಟದ ವೇಗ ಹೆಚ್ಚಾಗಲಿದೆ ಎಂದು ವಿಶ್ವಸಂಸ್ಥೆ ಆತಂಕ ವ್ಯಕ್ತಪಡಿಸಿದೆ.
ಮುಂಬರುವ ತಿಂಗಳಲ್ಲಿ ಜಗತ್ತಿನಾದ್ಯಂತ ಕಡಿಮೆ ಮತ್ತು ಮಧ್ಯಮ ಆದಾಯ ಇರುವ ದೇಶಗಳ ಸುಮಾರು ಏಳು ಲಕ್ಷ ಸ್ತ್ರೀಯರು ಗರ್ಭಿಣಿಯರಾಗಲಿದ್ದಾರೆ. ಇದಕ್ಕೆ ಕಾರಣ ಕೊರೋನಾ ಲಾಕ್ ಡೌನ್ ಎಂದು ವಿಶ್ವಸಂಸ್ಥೆಯ ಅಧ್ಯಯನದಲ್ಲಿ ತಿಳಿದುಬಂದಿದೆ.

ಗರ್ಭನಿರೋಧಕಗಳ ಪೂರೈಕೆಯಲ್ಲಿ ವ್ಯತ್ಯಯ ಮತ್ತು ಅದು ಸಕಾಲಕ್ಕೆ ಜನರಿಗೆ ಲಭಿಸದೇ ಇರುವ ಕಾರಣ ಮಹಿಳೆಯರು ಕುಟುಂಬ ಯೋಜನೆ ಪಾಲಿಸಲು ಸಾಧ್ಯವಾಗುತ್ತಿಲ್ಲ. ಮಹಿಳೆಯರು ಇಚ್ಛೆ ಇಲ್ಲದಿದ್ದರೂ ಗರ್ಭವತಿಯಾಗಲಿದ್ದಾರೆ ಎಂದು ವಿಶ್ವಸಂಸ್ಥೆಯ ಜನಸಂಖ್ಯಾ ನಿಧಿ(ಯುಎನ್ಎಫ್ಪಿಎ) ದತ್ತಾಂತ ಬಿಡುಗಡೆ ಮಾಡಿದೆ.
ಲಾಕ್ ಡೌನ್ ಅವಧಿಯಲ್ಲಿ ಆಮದು ಮತ್ತು ರಫ್ತು ಸ್ಥಗಿತಗೊಂಡಿರುವುದರಿಂದ ಪುರುಷರು ಮತ್ತು ಮಹಿಳೆಯರಿಗೆ ಗರ್ಭನಿರೋಧಕಗಳು ಲಭ್ಯವಾಗುತ್ತಿಲ್ಲ. ಹೀಗಾಗಿ ಕಡಿಮೆ ಮತ್ತು ಮಧ್ಯಮ ವರಮಾನದ ದೇಶಗಳಲ್ಲಿ 47 ದಶಲಕ್ಷ ಮಹಿಳೆಯರು ಆಧುನಿಕ ಗರ್ಭನಿರೋಧಕಗಳನ್ನು ಬಳಸಲು ಸಾಧ್ಯವಾಗಿಲ್ಲ ಎಂದು ವರದಿಯಲ್ಲಿ ತಿಳಿದುಬಂದಿದೆ.

ಇಷ್ಟು ಮಾತ್ರವಲ್ಲದೆ ಲಕ್ಷಾಂತರ ಮಹಿಳೆಯರು ಲಿಂಗ ತಾರತಮ್ಯ, ಕೌಟುಂಬಿಕ ದೌರ್ಜನ್ಯ, ಲೈಂಗಿಕ ಹಿಂಸಾಚಾರ ಮತ್ತು ಇತರ ಗಂಭೀರ ಸಮಸ್ಯೆಗಳಿಗೆ ಒಳಗಾಗುತ್ತಿದ್ದಾರೆ ಎಂದು ಯುಎನ್ಎಫ್ಪಿಎ ಕಾರ್ಯಕಾರಿ ನಿರ್ದೇಶಕಿ ನಟಾಲಿಯಾ ಕನೇಮ್ ತಿಳಿಸಿದ್ದಾರೆ.

Related Articles

Leave a Reply

Your email address will not be published.

Back to top button