ಸುದ್ದಿ

ಗಾಂಧಿನಗರ ಮಸೀದಿಯ ಮಯ್ಯಿತ್ ಪರಿಪಾಲನಾ ಕಟ್ಟಡ ನಿಧಿಗೆ ತೆಕ್ಕಿಲ್ ಪ್ರತಿಷ್ಠಾನ ವತಿಯಿಂದ 10 ಸಾವಿರ ರೂ ಕೊಡುಗೆ…

ಸುಳ್ಯ: ಮುಹಿದ್ದೀನ್ ಜುಮಾ ಮಸೀದಿ ಗಾಂಧಿನಗರ ಸುಳ್ಯ ಇದರ ಮಯ್ಯಿತ್ ಪರಿಪಾಲನಾ ಕಟ್ಟಡ ನಿಧಿಗೆ ಅರಂತೋಡು ತೆಕ್ಕಿಲ್ ಗ್ರಾಮೀಣಾಭಿವೃದ್ಧಿ ಪ್ರತಿಷ್ಠಾನದ ವತಿಯಿಂದ ರೂಪಾಯಿ ಹತ್ತು ಸಾವಿರ ಧನ ಸಹಾಯವನ್ನು ಗಾಂಧಿನಗರ ಮಸೀದಿಯ ಅಲ್-ಇಖ್ವಾನ್ ಮಯ್ಯಿತ್ ಪರಿಪಾಲನಾ ಸಮಿತಿಯ ಪಧಾಧಿಕಾರಿಗಳಿಗೆ ತೆಕ್ಕಿಲ್ ಪ್ರತಿಷ್ಠಾನದ ಅಧ್ಯಕ್ಷ ಟಿ.ಎಂ ಶಾಹಿದ್ ತೆಕ್ಕಿಲ್ ಹಸ್ತಾಂತರಿಸಿದರು.
ಈ ಸಂಧರ್ಭದಲ್ಲಿ ಗಾಂಧಿನಗರ ಜುಮಾ ಮಸೀದಿಯ ಅಧ್ಯಕ್ಷ ಹಾಜಿ ಕೆ.ಎಂ. ಮುಸ್ತಪ, ಪ್ರಧಾನ ಕಾರ್ಯದರ್ಶಿ ಕೆ.ಬಿ ಮಜೀದ್, ಅಲ್-ಇಖ್ವಾನ್ ಮಯ್ಯಿತ್ ಪರಿಪಾಲನಾ ಉಪ ಸಮಿತಿಯ ಸಂಚಾಲಕ ಹನೀಫ್ ಗಾಂಧಿನಗರ, ನಗರ ಪಂಚಾಯತ್ ಸದಸ್ಯ ಶರೀಫ್ ಕಂಠಿ, ಸಿದ್ದೀಕ್ ಕ್ಕೊಕ್ಕೊ, ನ್ಯಾಯವಾದಿ ಮೂಸಾ ಪೈಬಂಚ್ಚಾಲ್, ಹನೀಫ್ ಸೆಂಟ್ಯಾರ್ ಮೊದಲಾದವರು ಉಪಸ್ಥಿತರಿದ್ದರು.

Advertisement

Related Articles

Back to top button