ಚಾಲಕನ ನಿಯಂತ್ರಣ ತಪ್ಪಿ ನದಿ ಬದಿಗೆ ಚಲಿಸಿದ ವ್ಯಾನ್- ತಪ್ಪಿದ ಭಾರಿ ಅನಾಹುತ…
ಸುಳ್ಯ : ಸುಳ್ಯ ಸಮೀಪದ ಪೆರಾಜೆ ಬಳಿಯ ಕಲ್ಚೆರ್ಪೆ ಪಾಲಡ್ಕ ಮಧ್ಯೆ ವ್ಯಾನೊಂದು ಚಾಲಕನ ನಿಯಂತ್ರಣ ತಪ್ಪಿ ಪಯಸ್ವಿನಿ ನದಿ ಬದಿಗೆ ಸಂಚರಿಸಿ ಭಾರೀ ಅನಾಹುತವೊಂದು ತಪ್ಪಿದ ವಿದ್ಯಾಮಾನ ಅ.23 ರಂದು ಸಂಜೆ ಸಂಭವಿಸಿದೆ.
ಈ ಅಪಘಾತಕ್ಕೆ ಚಾಲಕನ ಅತಿವೇಗ ಮತ್ತು ನಿರ್ಲಕ್ಷ್ಯದ ಚಾಲನೆಯೇ ಕಾರಣ ಎನ್ನಲಾಗಿದೆ.
ಅತಿ ವೇಗದಿಂದಾಗಿ ವ್ಯಾನ್ ನಿಯಂತ್ರಣ ತಪ್ಪಿ ಬಲ ಬದಿಗೆ ಹೋಗಿ ನದಿಗೆ ಬೀಳುವುದರಲ್ಲಿತ್ತು. ಮುಂಭಾಗದ ಎರಡು ಚಕ್ರಗಳು ರಸ್ತೆಯ ಬದಿಯ ಕಲ್ಲಿನ ಗೋಡೆ ದಾಟಿತ್ತು ಆದರೆ ನಡು ಭಾಗ ಮತ್ತು ಹಿಂಬದಿ ಚಕ್ರಗಳು ಕಲ್ಲಿನ ಕಟ್ಟೆಗೆ ಸಿಲುಕಿಕೊಂಡಿದ್ದರಿಂದ ವ್ಯಾನ್ ನದಿಗೆ ಉರುಳಲಿಲ್ಲ. ನದಿಯಲ್ಲಿ ಸಾಕಷ್ಟು ನೀರು ತುಂಬಿದ್ದು, ಭಾರೀ ಅನಾಹುತ ಸಂಭವಿಸುವ ಸಾಧ್ಯತೆ ಇತ್ತು.
ಅಪಘಾತಕ್ಕೆ ಮೊದಲು ಪರಿವಾರಕಾನದ ಬಳಿ ಸ್ಕೂಟಿಯನ್ನು ಓವರ್ ಟೇಕ್ ಮಾಡುವಾಗ ಆ ಸ್ಕೂಟಿ ಸವಾರರು ವ್ಯಾನ್ ನಡಿಗೆ ಬೀಳುವುದು ಕೂದಲೆಳೆಯ ಅಂತರದಲ್ಲಿ ತಪ್ಪಿತೆಂದು ಪ್ರಯಾಣಿಕರು ಹೇಳುತ್ತಾರೆ.