ಸುದ್ದಿ

ಜ.10 ರಿಂದ 16 – ಬಂಟ್ವಾಳದಲ್ಲಿ ಶ್ರೀಮದ್ಭಾಗವತಾ ಪ್ರವಚನ ಸಪ್ತಾಹ…

ಬಂಟ್ವಾಳ: ಶ್ರೀ ಶಂಕರ ಸೇವಾ ಪ್ರತಿಷ್ಠಾನ ಬಂಟ್ವಾಳ ತಾಲೂಕು ಘಟಕದ ಸಹಯೋಗದೊಂದಿಗೆ ಶ್ರೀಮದ್ಭಾಗವತ ಪ್ರವಚನ ಸಪ್ತಾಹ ಜ್ಞಾನಯಜ್ಞ ಕಾರ್ಯಕ್ರಮವು ಜ.10 ರಿಂದ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಬಂಟ್ವಾಳದಲ್ಲಿ ನಡೆಯಲಿದೆ.
ಧಾರ್ಮಿಕ ಚಿಂತಕರಾದ ಕೈಯೂರು ನಾರಾಯಣ ಭಟ್ ಪ್ರವಚನವನ್ನು ನೀಡಲಿದ್ದಾರೆ. ಸಪ್ತಾಹದ ಆಮಂತ್ರಣ ಪತ್ರಿಕೆಯನ್ನು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಡಾ.ರಮೇಶಾನಂದ ಸೋಮಯಾಜಿ ಅನಾವರಣಗೊಳಿಸಿದರು. ಅವರು ಮಾತನಾಡಿ ಸನಾತನ ಸಂಸ್ಕೃತಿಯ ಅಪೂರ್ವ ಭಾಗವೆನಿಸಿರುವ ಶ್ರೀಮದ್ಭಾಗವತ ಪ್ರವಚನವು ಜೀವನಾರ್ದಶಕ್ಕೆ ಪ್ರೇರಕ ಶಕ್ತಿಯಾಗಬೇಕು. ಮುಂದಿನ ಪೀಳಿಗೆಗೂ ಪ್ರವಹಿಸಿ ಸಾಂಸ್ಕೃತಿಕ ಹಾಗೂ ಧಾರ್ಮಿಕ ಜಾಗೃತಿ ಮೂಡಿಸುವಂತಾಗಬೇಕು ಎಂದು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಶಂಕರ ಸೇವಾ ಪ್ರತಿಷ್ಠಾನ ಬಂಟ್ವಾಳ ಘಟಕ ಸಂಚಾಲಕ ಎ.ಕೃಷ್ಣ ಶರ್ಮ,ಕಾರ್ಯದರ್ಶಿ ರಾಜಾರಾಮ ಐತಾಳ್, ವ್ಯವಸ್ಥಾಪನಾ ಸಮಿತಿ ಸದಸ್ಯ ಎಮ್ ಜಗದೀಶ ಹೊಳ್ಳ ಮೊದಲಾದವರು ಉಪಸ್ಥಿತರಿದ್ದರು.

Related Articles

Leave a Reply

Your email address will not be published.

Back to top button