ತಂಬಾಕು ನಿಯಂತ್ರಣ ಕೋಶದಿಂದ ಕಾರ್ಯಾಚರಣೆ – 33 ಪ್ರಕರಣ ದಾಖಲು, ಅಂಗಡಿಗಳಿಗೆ ದಂಡ…
ಪುತ್ತೂರು: ರಾಷ್ಟ್ರೀಯ ತಂಬಾಕು ನಿಯಂತ್ರಣ ಕಾರ್ಯಕ್ರಮದ ಅಡಿಯಲ್ಲಿ ರಾಜ್ಯ ತಂಬಾಕು ನಿಯಂತ್ರಣ ಕೋಶದ ಸಂಯೋಜಕ ಹಾಗೂ ತಾಲೂಕು ಆರೋಗ್ಯ, ಶಿಕ್ಷಣ ಹಾಗೂ ಪೊಲೀಸ್ ಇಲಾಖೆಯ ಅಧಿಕಾರಿಗಳನ್ನು ಒಳಗೊಂಡ ತಂಡ ಬುಧವಾರ ಪುತ್ತೂರು ನಗರಗಳ ಅಂಗಡಿಗಳಿಗೆ ದಾಳಿ ನಡೆಸಿ ಪ್ರಕರಣ ದಾಖಲಿಸಿಕೊಂಡಿದೆ ಹಾಗೂ ದಂಡ ವಿಧಿಸಿದೆ.
ರಾಷ್ಟ್ರೀಯ ತಂಬಾಕು ನಿಯಂತ್ರಣ ಕೋಶಧ ವಿಭಾಗೀಯ ಸಂಯೋಜಕ ಸಂಪತ್ ಕುಮಾರ್ ನೇತೃತ್ವದಲ್ಲಿ ನಗರದ 33 ಅಂಗಡಿಗಳಲ್ಲಿ ಕಾರ್ಯಾಚರಣೆ ನಡೆಸಿ ಕೋಟ್ಪಾ ಕಾಯಿದೆಯಡಿ ಪ್ರಕರಣ ದಾಖಲಿಸಿಕೊಂಡು ರೂ. 4 ಸಾವಿರ ದಂಡ ವಿಧಿಸಿದೆ.
ಕೋಟ್ಪಾ ಕಾಯಿದೆಯಂತೆ ಸೆಕ್ಷನ್ 4 ರಲ್ಲಿ 21 ಪ್ರಕರಣ, ಸೆಕ್ಷನ್ 6 ‘ಎ’ಯಲ್ಲಿ 8 ಪ್ರಕರಣ, ಸೆಕ್ಷನ್ 6 `ಬಿ” ಯಲ್ಲಿ 4 ಪ್ರಕರಣ ಸೇರಿದಂತೆ ಒಟ್ಟು 33 ಪ್ರಕರಣ ದಾಖಲಿಸಿ ರೂ. 4 ಸಾವಿರ ದಂಡ ವಿಧಿಸಲಾಗಿದೆ ಎಂದು ರಾಜ್ಯ ತಂಬಾಕು ನಿಯಂತ್ರಣ ಕೋಶದ ಸಂಯೋಜಕ ಸಂಪತ್ ಕುಮಾರ್ ಮಾಹಿತಿ ನೀಡಿದ್ದಾರೆ.