ತೆಕ್ಕಿಲ್ ಪ್ರತಿಷ್ಠಾನದ ವತಿಯಿಂದ ಬಡ ಮಹಿಳೆಗೆ ನಿರ್ಮಿಸಿಕೊಟ್ಟ ಮನೆಯ ಕೀ ಹಸ್ತಾಂತರ…
ದಾಮೋದರ ಮಾಸ್ಟರ್ ಅವರಿಗೆ ತೆಕ್ಕಿಲ್ ಎಕ್ಸಲೆನ್ಸ್ ಅವಾರ್ಡ್…
ಸುಳ್ಯ: ಅರಂತೋಡು ತೆಕ್ಕಿಲ್ ಗ್ರಾಮೀಣಾಭಿವೃದ್ಧಿ ಪ್ರತಿಷ್ಠಾನದ ವತಿಯಿಂದ ಟಿ.ಎಂ ಶಾಹಿದ್ ತೆಕ್ಕಿಲ್ ಅವರ 50ನೇ ಹುಟ್ಟು ಹಬ್ಬದ ವರ್ಷಾಚರಣೆ ಸಂಧರ್ಭದಲ್ಲಿ ಸಂಪಾಜೆ ಗ್ರಾಮದ ಗೂನಡ್ಕದಲ್ಲಿ ಬಡ ಮಹಿಳೆಗೆ ಸುಮಾರು 6 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾದ ” ಬೈತುಲ್ ಆಯಿಷಾ” ಮನೆಯ ಕೀ ಹಸ್ತಾಂತರ ಮತ್ತು ನಿವೃತ್ತ ಮುಖ್ಯೋಪಾಧ್ಯಾಯ ದಾಮೋದರ ಮಾಸ್ಟರ್ ಅವರಿಗೆ ತೆಕ್ಕಿಲ್ ಎಕ್ಸಲೆನ್ಸ್ ಅವಾರ್ಡ್ ಪ್ರದಾನ ಸಮಾರಂಭವು ಫೆ. 17 ರಂದು ಅರಂತೋಡು ತೆಕ್ಕಿಲ್ ಸಮುದಾಯ ಭವನದಲ್ಲಿ ನಡೆಯಿತು.
ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿದ್ದ ಕೆ.ಪಿ.ಸಿ.ಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ ಅವರು ಮನೆಯ ಕೀ ಹಸ್ತಾಂತರ ಮತ್ತು ದಾಮೋದರ ಮಾಸ್ಟರ್ ಅವರಿಗೆ ತೆಕ್ಕಿಲ್ ಎಕ್ಸಲೆನ್ಸ್ ಅವಾರ್ಡ್ ಪ್ರದಾನ ಮಾಡಿ ಜೀವನದಲ್ಲಿ ಯಶಸ್ಸು ಕಾಣಬೇಕಾದರೆ ದಾನ ಧರ್ಮ ಮತ್ತು ಗುರುಗಳ ಮೇಲಿನ ಭಯ ಭಕ್ತಿ ಅತಿ ಅಗತ್ಯ. ಈ ಎರಡು ಕಾರ್ಯವನ್ನು ಅತ್ಯಂತ ನಿಷ್ಠೆಯಿಂದ ಟಿ.ಎಂ ಶಾಹಿದ್ ತೆಕ್ಕಿಲ್ ಮಾಡಿಕೊಂಡು ಬರುತ್ತಿದ್ದಾರೆ. ಅವರು ತಮ್ಮ ಟ್ರಸ್ಟ್ ನ ಮೂಲಕ ಅನೇಕ ಜನಪರ ಕಾರ್ಯಕ್ರಮಗಳನ್ನು ನಡೆಸುತ್ತಾ ಬರುತ್ತಿದ್ದು ರಸ್ತೆ-ಸೇತುವೆಗಳಿಗೆ, ಮಸೀದಿ-ಮಂದಿರ, ಶಾದಿಮಹಲ್, ಸಂಘ – ಸಂಸ್ಥೆಗಳಿಗೆ ಸರಕಾರದಿಂದ ಸಿಗುವ ಅನುದಾನವನ್ನು ಒದಗಿಸಿಕೊಟ್ಟು ಈ ಭಾಗದ ಜನಾನುರಾಗಿ ನಾಯಕರಾಗಿದ್ದಾರೆ ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ ತೆಕ್ಕಿಲ್ ಗ್ರಾಮೀಣಾಭಿವೃದ್ಧಿ ಪ್ರತಿಷ್ಠಾನದ ಸ್ಥಾಪಕಾಧ್ಯಕ್ಷ ಟಿ.ಎಂ ಶಾಹಿದ್ ತೆಕ್ಕಿಲ್ ಮಾತನಾಡಿ ಕಳೆದ 3 ದಶಕಗಳಿಂದ ಸಾಮಾಜಿಕ ರಾಜಕೀಯ, ಶೈಕ್ಷಣಿಕ, ಧಾರ್ಮಿಕ, ಸಹಕಾರಿ ಮತ್ತು ಕ್ರೀಡಾ ಕ್ಷೇತ್ರದಲ್ಲಿ ಕ್ರಿಯಾಶೀಲರಾಗಿ ಹತ್ತು ಹಲವು ಜನಪರ ಹಾಗು ಸಮಾಜ ಮುಖಿ ಕಾರ್ಯಕ್ರಮಗಳನ್ನು ಪ್ರತಿಷ್ಠಾನ ಹಮ್ಮಿಕೊಂಡು ಬರುತ್ತಿದೆ. ದಾಮೋದರ ಮಾಸ್ಟರ್ ಅವರು ನಮ್ಮ ಸಂಸ್ಥೆ ಯಲ್ಲಿ ಮುಖ್ಯೋಪಾಧ್ಯಾಯರಾಗಿ ಪ್ರಾಮಾಣಿಕವಾಗಿ ಸೇವೆ ಸಲ್ಲಿದ್ದು ವಿದ್ಯಾರ್ಥಿಗಳ ಅಚ್ಚುಮೆಚ್ಚಿನ ಅಧ್ಯಾಪಕರಾಗಿದ್ದಾರೆ. ಅರ್ಹವಾಗಿಯೇ ಈ ಪ್ರಶಸ್ತಿಯು ಅವರಿಗೆ ಲಭಿಸಿದೆ ಎಂದರು.
ನಿವೃತ್ತ ಪ್ರಾಂಶುಪಾಲ ಕೆ.ಆರ್ ಗಂಗಾಧರ್ ಮಾತನಾಡಿ ದಾಮೋದರ್ ಮಾಸ್ಟರ್ ರವರಿಗೆ ತನ್ನ ಕೆಲಸದಲ್ಲಿ ಬದ್ಧತೆಯಿದೆ, ಬದ್ಧತೆಯಿಂದ ಕೆಲಸ ಮಾಡಿದರಿಂದ ಅವರಿಗೆ ಪ್ರಶಸ್ತಿಗಳು ಹುಡುಕಿ ಬರುತ್ತಿವೆ, ಅವರ ಪ್ರಾಮಾಣಿಕತೆ ಮತ್ತು ನಿಷ್ಠೆ ಮೆಚ್ಚತಕ್ಕದ್ದು.
ಅರಂತೋಡು ತೊಡಿಕಾನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಸಂತೋಷ್ ಕುತ್ತಮೊಟ್ಟೆ ಮಾತನಾಡಿ ಶಾಹಿದ್ ರವರ ಅಜ್ಜ ಮತ್ತು ನನ್ನ ಅಜ್ಜ ಕುಟುಂಬ ಸ್ನೇಹಿತರಾಗಿದ್ದರು. ಅವರ ನಂತರ ನಾವಿಬ್ಬರು ಕೂಡ ಮುಂದುವರಿಸುಕೊಂಡು ಹೋಗುತ್ತಿದ್ದೇವೆ. ನಮ್ಮ ಪಕ್ಷಗಳು ಬೇರೆ ಬೇರೆ ಆದರೂ ನಮ್ಮ ಗೆಳೆತನಕ್ಕೆ ದಕ್ಕೆ ಬರಲಿಲ್ಲ ಮಹದೇವರವರು ಸಹಕಾರಿ ಮಂತ್ರಿಯಾಗಿದ್ದಾಗ ಅವರನ್ನು ನಮ್ಮ ಸಂಘಕ್ಕೆ ಕರೆದುಕೊಂಡು ಬಂದಿದ್ದರು ನಮ್ಮ ಸಂಘದ ಮಹಾ ಸಭೆಗಳಿಗೆ ತಮ್ಮ ಸಮುದಾಯ ಭವನವನ್ನು ಉಚಿತವಾಗಿ ನೀಡುತ್ತಿದ್ದರು. ಸಮಾಜ ಸೇವೆಯಲ್ಲಿ ಟಿ.ಎಂ ಶಾಹಿದ್ ನಮಗೆಲ್ಲ ಮಾದರಿ ಎಂದರು.
ಕೆ.ಪಿ.ಸಿ.ಸಿ.ಪ್ರಧಾನ ಕಾರ್ಯದರ್ಶಿ ಧನಂಜಯ ಅಡ್ಪಂಗಾಯ ಮಾತನಾಡಿ ಟಿ.ಎಂ ಶಾಹಿದ್ ರವರು ಒಬ್ಬ ಸಾಧಾರಣ ವ್ಯಕ್ತಿಯಾಗಿ ಕಂಡರೂ ಪ್ರಭಾವಿ ವ್ಯಕ್ತಿಯಾಗಿದ್ದಾರೆ. ಬೆಂಗಳೂರಿನಲ್ಲಿ, ದೆಹಲಿಯಲ್ಲಿ ಮತ್ತು ದೇಶದ ಮೂಲೆಮೂಲೆಗಳಲ್ಲಿ ರಾಜಕೀಯವಾಗಿ, ಸಾಮಾಜಿಕವಾಗಿ ಅವರಿಗಿರುವ ಬಾಂಧವ್ಯ ಮತ್ತು ಪ್ರಭಾವ ನಾನು ಕಂಡುಕೊಂಡಿದ್ದೇನೆ. ಅವರ ಸಮಾಜಸೇವೆಯು ಶ್ಲಾಘನೀಯ ಎಂದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಸಿ.ಜಯರಾಮ ಮಾತನಾಡಿ ದಾಮೋದರ ಮಾಸ್ಟರ್ ಮಡಪ್ಪಾಡಿ ಶಾಲೆಯ ಮುಖ್ಯೋಪಾಧ್ಯಾಯರಾಗಿದ್ದಾಗ ಶಾಲೆಯ ಅಭಿವೃದ್ಧಿಯಲ್ಲಿ ಅಮೋಘ ಸೇವೆ ಸಲ್ಲಿಸಿದ್ದನ್ನು ನೆನೆಪಿಸಿಕೊಂಡರು. ಕಾರ್ಯಕ್ರಮದಲ್ಲಿ ಅರಂತೋಡು ಬದ್ರಿಯಾ ಜುಮಾ ಮಸೀದಿಯ ಖತೀಬರಾದ ಹಾಜಿ ಇಸಾಕ್ ಬಾಖವಿ ದುವಾ ನೆರವೇರಿಸಿದರು. ಕೆ.ಎಂ ಮುಸ್ತಫಾ ಸುಳ್ಯ ಗೂನಡ್ಕ ಜುಮಾ ಮಸೀದಿ ಖತೀಬರಾದ ಮಹಮ್ಮದ್ ಆಲಿ ಸಖಾಫಿ, ಕೆ.ಪಿ.ಸಿ.ಸಿ ಸಂಯೋಜಕ ಕೃಷ್ಣಪ್ಪ ಶುಭ ಹಾರೈಸಿದರು.
ಸಂಪಾಜೆ ಗ್ರಾಮ ಪಂಚಾಯತ್ ಅಧ್ಯಕ್ಷ ಜಿ.ಕೆ ಹಮೀದ್ ಗೂನಡ್ಕ, ಪೇರಡ್ಕ ಜುಮಾ ಮಸೀದಿ ಖತೀಬರಾದ ರಿಯಾಜ್ ಪೈಝಿ, ವರ್ತಕರ ಸಂಘದ ಅಧ್ಯಕ್ಷ ಸುಧಾಕರ ರೈ, ನಗರ ಪಂಚಾಯತ್ ಸದಸ್ಯ ಕೆ.ಎಸ್. ಉಮ್ಮರ್, ಸುಳ್ಯ ಅಲ್ಪ ಸಂಖ್ಯಾತರ ವಿವಿದೋದ್ದೇಶ ಸಹಕಾರ ಸಂಘದ ಅಧ್ಯಕ್ಷ ಇಕ್ಬಾಲ್ ಎಲಿಮಲೆ, ಸೆಂಟ್ರಲ್ ಕಮಿಟಿ ಸಂಘಟನಾ ಕಾರ್ಯದರ್ಶಿ ಎಸ್ .ಸಂಶುದ್ದೀನ್ , ಕೆಪೆಕ್ ಮಾಜಿ ಸದಸ್ಯ ಪಿ.ಎ. ಮಹಮ್ಮದ್, ಪಿ.ಎ ಉಮ್ಮರ್ ಗೂನಡ್ಕ, ಅಬ್ದುಲ್ಲ ಕೊಪ್ಪತಕಜೆ, ಕೆ.ಪಿ. ಜಗದೀಶ್ ಕುಯಿಂತೋಡು, ಗುತ್ತಿಗಾರು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಪರಶುರಾಮ ಚಿಲ್ತಡ್ಕ ,ಇಭ್ರಾಹಿಂ ಕತ್ತರ್, ಅಬ್ದುಲ್ ಮಜೀದ್, ಟಿ.ಎಂ ಬಾಬಾ ಹಾಜಿ ತೆಕ್ಕಿಲ್, ಟಿ.ಎಂ ಜಾವೇದ್ ತೆಕ್ಕಿಲ್ , ಟಿ.ಎಂ ಶಮೀರ್ ತೆಕ್ಕಿಲ್, ಶರೀಫ್ ಕಂಠಿ ಸಿದ್ದಿಕ್ ಕೊಕೊ, ರಹೀಮ್ ಬೀಜದಕಟ್ಟೆ ಮತ್ತಿತರರು ಉಪಸ್ಥಿತರಿದ್ದರು. ತೆಕ್ಕಿಲ್ ಪ್ರತಿಷ್ಠಾನದ ಕಾರ್ಯದರ್ಶಿ ಅಶ್ರಫ್ ಗುಂಡಿ ಸ್ವಾಗತಿಸಿದರು, ಸಂಪಾಜೆ ಗ್ರಾಮ ಪಂಚಾಯತ್ ನ ಸದಸ್ಯ ಅಬೂಸಾಲಿ ಗೂನಡ್ಕ ವಂದಿಸಿದರು, ನಿವೃತ್ತ ಶಿಕ್ಷಕ ಅಬ್ದುಲ್ಲಾ ಕಾರ್ಯಕ್ರಮ ನಿರೂಪಿಸಿದರು.