ಸುದ್ದಿ

ದ.ಕ – ಇಂದು ಎರಡು ಕೊರೋನಾ ಪಾಸಿಟಿವ್ ಪ್ರಕರಣ…

ಮಂಗಳೂರು: ದಕ್ಷಿಣಕನ್ನಡ ಜಿಲ್ಲೆಯಲ್ಲಿ ಮಂಗಳವಾರ ಮತ್ತೆರಡು ಕೊರೊನಾ ಪಾಸಿಟಿವ್ ದೃಢವಾಗಿದೆ.
ಇಬ್ಬರಿಗೂ ರೋಗಿ ಸಂಖ್ಯೆ ಪಿ 507 ರೊಂದಿಗೆ ಸಂಪರ್ಕ ಹೊಂದಿದ್ದು ಇವರ ಗಂಟಲಿನ ದ್ರವ ಪರೀಕ್ಷೆ ಮಾಡಿಸಲಾಗಿತ್ತು. ಮಂಗಳವಾರ ಇಬ್ಬರ ವರದಿ ಬಂದಿದ್ದು ಕೋರೊನಾ ಸೋಂಕು ಇರುವುದು ದೃಢಗೊಂಡಿದೆ.ಇವರು ಉಡುಪಿ ಜಿಲ್ಲೆಯ ಕಾರ್ಕಳದ ನಿವಾಸಿಗಳಾಗಿದ್ದು ಫಸ್ಟ್ ‌ನ್ಯೂರೋ ಸಂಪರ್ಕದಿಂದ ಇಬ್ಬರಿಗೆ ಸೋಂಕು ದೃಢವಾಗಿದೆ.
ರೋಗಿ ಸಂಖ್ಯೆ 507 ಪ್ರಾರ್ಥಮಿಕ ಸಂಪರ್ಕದಲ್ಲಿದ್ದ ಸುಮಾರು 50 ವರ್ಷದ ಮಹಿಳೆಯ 12ನೇ ದಿನದ ಗಂಟಲು ಪರೀಕ್ಷೆ ವರದಿ ಸ್ವೀಕೃತವಾಗಿದ್ದು, ಇವರಿಗೆ ಕೊರೊನಾ ಕಂಡುಬಂದಿದೆ ಹಾಗೂ ಇವರ ಸಂಪರ್ಕದಲ್ಲಿದ್ದ ಸುಮಾರು ಇಪ್ಪತ್ತಾರು ವರ್ಷದ ವ್ಯಕ್ತಿಯ ವರದಿಯಲ್ಲಿ ಕೂಡ ಕೊರೊನಾ ದೃಢಪಟ್ಟಿದೆ.

Related Articles

Back to top button