ಸುದ್ದಿ

ದ.ಕ – ಇಂದು ಮತ್ತೆ ಮೂವರಲ್ಲಿ ಕೊರೋನಾ ಸೋಂಕು ಪತ್ತೆ….

ಮಂಗಳೂರು: ಜಿಲ್ಲೆಯಲ್ಲಿ ಇಂದು ಮತ್ತೆ ಮೂರು ಮಂದಿಯಲ್ಲಿ ಕೊರೋನಾ ವೈರಸ್ ಪಾಸಿಟಿವ್ ವರದಿಯಾಗಿದೆ.
ಫಸ್ಟ್ ನ್ಯೂರೋ ಆಸ್ಪತ್ರೆ ಯ ಸಂಪರ್ಕ ಹೊಂದಿದ್ದ P-536 ಮಹಿಳೆಯಿಂದ ಇಬ್ಬರಿಗೆ ಸೋಂಕು ಹರಡಿರುವುದು ಖಚಿತವಾಗಿದೆ. ಬೋಳೂರು ನಿವಾಸಿಗಳಾದ 38 ವರ್ಷದ ಮಹಿಳೆ ಹಾಗೂ 11 ವರ್ಷದ ಬಾಲಕಿಗೆ ಸೋಂಕು ಇರುವುದು ದೃಢಪಟ್ಟಿದೆ.
ಬಂಟ್ವಾಳದ p -360 ರ ಸಂಪರ್ಕದಲ್ಲಿದ್ದ ಮೃತ ಮಹಿಳೆಯ 16 ವರ್ಷದ ಮಗಳಿಗೂ ಕೊರೊನಾ ಪಾಸಿಟಿವ್ ಇರುವುದು ದೃಢಪಟ್ಟಿದೆ. ಬಾಲಕಿಯನ್ನು ಎನ್ಐಟಿಕೆ ಯಲ್ಲಿ ವೈದ್ಯಕೀಯ ನಿಗಾದಲ್ಲಿ ಇರಿಸಲಾಗಿದೆ. ಇವರ 12ನೇ ದಿನದ ಗಂಟಲು ದ್ರವದ ವರದಿ ಬಂದಿದ್ದು ಅದರಲ್ಲಿ ಸೊಂಕು ಇರುವುದು ಖಚಿತವಾಗಿದೆ.

Related Articles

Leave a Reply

Your email address will not be published.

Back to top button