ಸುದ್ದಿ

ದ.ಕ – ಕೋವಿಡ್19 ವೈರಸ್ ನಿಯಂತ್ರಣಕ್ಕೆ ಕಾಂಗ್ರೆಸ್ ‌ನಿಂದ‌ ಟಾಸ್ಕ್‌ಪೋರ್ಸ್ …

ಮಂಗಳೂರು: ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರನ್ನು ಒಳಗೊಂಡ ಟಾಸ್ಕ್‌ಪೋರ್ಸ್ ರಚನೆಯಾಗಿದ್ದು, ಸರಕಾರ ಎಡವಿದಲ್ಲಿ ಎಚ್ಚರಿಸಿ ಜನರಿಗೆ ಸಹಾಯ ಮಾಡುವ ಗುರಿ ಹೊಂದಿದೆ ಎಂದು ಮಾಜಿ ಶಾಸಕ‌ ಜೆ. ಆರ್ ಲೋಬೋ ಹೇಳಿದರು.

ಮಂಗಳೂರು ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಕೋವಿಡ್-19 ವೈರಸ್ ನಿಯಂತ್ರಣಕ್ಕೆ ಕಾಂಗ್ರೆಸ್ ‌ನಿಂದ‌ ಟಾಸ್ಕ್‌ಪೋರ್ಸ್ ರಚನೆ ಮಾಡಲಾಗಿದೆ. ಸಮಿತಿಯಲ್ಲಿ ಎಂಟು ಉಪಸಮಿತಿಯನ್ನು ಮಾಡುತ್ತೇವೆ. ಆಹಾರ ಉಪಸಮಿತಿ, ಆರೋಗ್ಯ ಉಪಸಮಿತಿ, ಸಾಮಾಜಿಕ ಜಾಲತಾಣ‌ ಸಮಿತಿ ಹೀಗೆ ಒಟ್ಟು 8 ಉಪಸಮಿತಿ ಮಾಡಲಾಗುವುದು, ಇದರೊಂದಿಗೆ ವಾರ್ ರೂಮ್ ನಿರ್ಮಾಣ ಮಾಡಿದ್ದು, ಸಮಸ್ಯೆ ಬಂದಲ್ಲಿ ಕರೆ ಮಾಡಬಹುದು ಎಂದು ಅವರು ತಿಳಿಸಿದರು.

Related Articles

Leave a Reply

Your email address will not be published. Required fields are marked *

Back to top button