ಅನ್ವಾರುಲ್ ಹುದಾ ಶಾದಿಮಹಲ್ ಕಟ್ಟಡಕ್ಕೆ ವಿಧಾನ ಪರಿಷತ್ ಸದಸ್ಯ ಎಚ್.ಎಂ. ರೇವಣ್ಣ ಅವರಿಂದ 3 ಲಕ್ಷ ಅನುದಾನ…

ಸುಳ್ಯ: ಅರಂತೋಡು ಅನ್ವಾರುಲ್ ಹುದಾ ಯಂಗ್ ಮೆನ್ಸ್ ಅಸೋಸಿಯೇಶನ್(ರಿ) ಅಧೀನದಲ್ಲಿರುವ ಅಪೂರ್ಣಗೊಂಡ ಅನ್ವಾರುಲ್ ಹುದಾ ಶಾದಿಮಹಲ್ ಕಟ್ಟಡಕ್ಕೆ ವಿಧಾನ ಪರಿಷತ್ ಸದಸ್ಯ ಎಚ್. ಎಂ. ರೇವಣ್ಣರವರ ಪ್ರದೇಶಾಭಿವೃದ್ಧಿ ನಿಧಿಯಿಂದ 3ಲಕ್ಷ ರೂಪಾಯಿ ಅನುದಾನವನ್ನು ಕೆಪಿಸಿಸಿಯ ಮಾಜಿ ಕಾರ್ಯದರ್ಶಿ ಅರಂತೋಡು ತೆಕ್ಕಿಲ್ ಗ್ರಾಮೀಣಾಭಿವೃದ್ಧಿ ಪ್ರತಿಷ್ಠಾನದ ಸ್ಥಾಪಕಾಧ್ಯಕ್ಷ ಟಿ. ಎಂ.ಶಹೀದ್ ತೆಕ್ಕಿಲ್ ರವರ ಶಿಫಾರಸ್ಸಿನ ಮೇರೆಗೆ ಬಿಡುಗಡೆ ಗೊಂಡಿರುತ್ತದೆ.
ಕಾಂಗ್ರೇಸ್ ಮುಖಂಡ ಟಿ. ಎಂ.ಶಹೀದ್ ತೆಕ್ಕಿಲ್ ರವರು ಶಾದಿಮಹಲ್ ಕಟ್ಟಡಕ್ಕೆ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ ರೂ. 20 ಲಕ್ಷ, ರಾಜ್ಯ ಸಭಾ ಸದಸ್ಯ ದಿವಂಗತ ಆಸ್ಕರ್ ಫೆರ್ನಾಂಡಿಸ್ ರವರ ಪ್ರದೇಶಾಭಿವೃದ್ಧಿ ನಿಧಿಯಿಂದ ರೂ. 10 ಲಕ್ಷ ಅನುದಾನವನ್ನು ಒದಗಿಸಿಕೊಟ್ಟಿರುತ್ತಾರೆ.
3 ಲಕ್ಷ ಅನುದಾನವನ್ನು ಒದಗಿಸಿದ ವಿಧಾನ ಪರಿಷತ್ ಸದಸ್ಯ ಎಚ್. ಎಂ. ರೇವಣ್ಣರವರನ್ನು ಮತ್ತು ಶ್ರಮಿಸಿದ ಅನ್ವಾರುಲ್ ಹುದಾ ಯಂಗ್ ಮೆನ್ಸ್ ಅಸೋಸಿಯೇಶನ್(ರಿ) ಇದರ ಗೌರವಾಧ್ಯಕ್ಷರು, ಪೇರಡ್ಕ ಮುಹಿಯಿದ್ದೀನ್ ಜುಮಾ ಮಸೀದಿಯ ಗೌರವಾಧ್ಯಕ್ಷರು, ಅರಂತೋಡು ಮಸೀದಿ ಪುನರ್ ನಿರ್ಮಾಣ ಸಮಿತಿಯ ಅಧ್ಯಕ್ಷರು ಹಾಗೂ ಸಲಹಾ ಸಮಿತಿ ಸದಸ್ಯರು ಆದ ಟಿ. ಎಂ. ಶಹೀದ್ ತೆಕ್ಕಿಲ್ ಅವರನ್ನು ಅರಂತೋಡು ಜುಮಾ ಮಸೀದಿಯ ಅಧ್ಯಕ್ಷ ಅಶ್ರಫ್ ಗುಂಡಿ ಮತ್ತು ಅನ್ವಾರುಲ್ ಹುದಾ ಯಂಗ್ ಮೆನ್ಸ್ ಅಸೋಸಿಯೇಶನ್(ರಿ) ಅಧ್ಯಕ್ಷ ಅಬ್ದುಲ್ ಮಜೀದ್ ಅವರು ಅಭಿನಂದಿಸಿದ್ದಾರೆ.

Sponsors

Related Articles

Back to top button